ಸ್ಥಳೀಯ ಸುದ್ದಿಗಳು

ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ಅರಣ್ಯ ವೀಕ್ಷಕರ ಸಂಘದ ಚುನಾವಣೆ ದಿನಾಂಕ ಫಿಕ್ಸ್!

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ಅರಣ್ಯ ವೀಕ್ಷಕರ ಸಂಘ ಶಿವಮೊಗ್ಗ ವಿಭಾಗಿಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯ ದಿವಾಂಕ ಫಿಕ್ಸ್ ಆಗಿದೆ.‌

ಡಿಸೆಂಬರ್ 4 ರಿಂದ 7ರವರೆಗೆ ಚುನಾವೇ ನಡೆಯಲಿದೆ ಎಂದು ಶಿವಮೊಗ್ಗ ವಿಭಾಗಿಯ ಚುನಾವಣಾ ಅಧಿಕಾರಿಗಳಾದ  ಹನುಮಂತರಾಯ ಜಿ. ಉಪವಲಯ ಅರಣ್ಯಾಧಿಕಾರಿಗಳು ಅರಣ್ಯ ಸಂಚಾರಿ ದಳ ಶಿವಮೊಗ್ಗ ಇವರು ಪ್ರಕಟಣೆಯನ್ನು ಹೊರಡಿಸಿರುತ್ತಾರೆ.

ಚುನಾವಣೆಯು ಅರಣ್ಯ ರಕ್ಷಕರ ಮತ್ತು ಅರಣ್ಯ ವೀಕ್ಷಕರ ಸಂಘ ಇದರ ಉಪ ವಿಧಿಗಳು 2022ರಂತೆ ಶಿವಮೊಗ್ಗ ವಿಭಾಗೀಯ ಸಂಘದ ಒಟ್ಟು 18 ನಿರ್ದೇಶಕರ ಸ್ಥಾನಕ್ಕೆ ಪ್ರಥಮ ಬಾರಿಗೆ ನಡೆಯುತ್ತಿದ್ದು ಡಿಸೆಂಬರ್ 4ರಂದು ಚುನಾವಣಾ ಅಧಿಕಾರಿಯ ಕಚೇರಿ ಅರಣ್ಯ ಸಂಚಾರಿ ದಳ ಶಿವಮೊಗ್ಗ ಇಲ್ಲಿ ನಾಮಪತ್ರ ವಿತರಣೆ ಹಾಗೂ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಡಿಸೆಂಬರ್ 5ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಹಿಂಪಡೆದುಕೊಳ್ಳುವುದು, ಡಿಸೆಂಬರ್ 6ರಂದು ಮತ ಕ್ಷೇತ್ರವಾರು ಸ್ಪರ್ಧೆಯಲ್ಲಿರುವ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ ಹಾಗೂ ಡಿಸೆಂಬರ್ 7ರಂದು ರಾಜ್ಯ ಸರ್ಕಾರಿ ನೌಕರರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ ಶಿವಮೊಗ್ಗ ಸಭಾಂಗಣದಲ್ಲಿ ಬೆಳಗ್ಗೆ 9:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತದಾನ ನಡೆಯಲಿದ್ದು ಅದೇ ದಿನ ಮಧ್ಯಾಹ್ನ 2 ಗಂಟೆಗೆ ಮತದಾನ ಎಣಿಕೆ ಮಾಡಿದ ತರುವಾಯ ಚುನಾವಣಾ ಫಲಿತಾಂಶ ಘೋಷಣೆ ಆಗಲಿದೆ.

ಇದನ್ನೂ ಓದಿ-https://suddilive.in/archives/4066

Related Articles

Leave a Reply

Your email address will not be published. Required fields are marked *

Back to top button