ಸ್ಥಳೀಯ ಸುದ್ದಿಗಳು

ತನ್ವೀರ್ ಪೀರಾ ಸಿಎಂ ಕಾರ್ಯಕ್ರಮದಲ್ಲಿ ಭಾಗಿ-ಬಿಎಸ್ ವೈ ಪ್ರತಿಕ್ರಿಯೆ

ಸುದ್ದಿಲೈವ್/ಶಿವಮೊಗ್ಗ

ತನ್ವೀರ್ ಪೀರಾ ಸಿಎಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಚಾರದ ಬಗ್ಗೆ ಮಾಜಿ ಸಿಎಂ ಬಿಎಸ್ ವೈ ಪ್ರತಿಕ್ರಿಯಿಸಿದ್ದು, ವಿಧಾನ ಮಂಡಲದಲ್ಲಿ ಈ ಬಗ್ಗೆ ಚರ್ಚೆ ಆಗ್ತಿದೆ.ಸಿಎಂ ಏನು ಉತ್ತರ ಕೊಡ್ತಾರೆ ನೋಡೋಣ. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ತೃಪ್ತಿಪಡಿಸುವ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಇದರಿಂದ ಹಿಂದುಗಳ ಆಕ್ರೋಶ ಭುಗಿಲೇಳುತ್ತದೆ ಎಂಬ ಕಲ್ಪನೆ ಅವರಿಗಿಲ್ಲ.ಈ ರಾಜ್ಯದ ಜನ ಕ್ಷಮಿಸಲ್ಲ. ಮುಸ್ಲಿಂ ಜೊತೆ ಸಂಬಂಧ ಒಳ್ಳೆಯದು ಇಟ್ಟುಕೊಳ್ಳಲು ನಮ್ಮ ಅಭ್ಯಂತರ ಇಲ್ಲ. ಆದರೆ ಯಾರನ್ನೋ ತೃಪ್ತಿಪಡಿಸಲು ಈ ರೀತಿ ಹೇಳಿಕೆ ಕೊಡಬಾರದು ಎಂದು ಸಲಹೆ ನೀಡಿದರು.

ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಇದನ್ನು ಖಂಡಿಸುತ್ತೇನೆ.ಬರಗಾಲದ  ಬಗ್ಗೆ ಸಾಕಷ್ಟು ಚರ್ಚೆ ಆಗಿದೆ.ಕೇಂದ್ರದಿಂದ ಪರಿಹಾರ ಕೊಡುವ ಬಗ್ಗೆ ನಾವು ಮನವಿ ಮಾಡ್ತೇವೆ.ರಾಜ್ಯ ಸರಕಾರ ಕೊಡುವ ಪರಿಹಾರವನ್ನು ಬೇಗ ಕೊಡಬೇಕು. ಕೇಂದ್ರ ಸರಕಾರ ಪರಿಹಾರ ಕೊಡುವವರೆಗೆ ಕಾಯಬಾರದು ಎಂದು ದೂರಿದರು.

ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯಬೇಕಿದೆ. ಉತ್ತರ ‌ಕರ್ನಾಟಕದ ಸಮಸ್ಯೆಗೆ ಪರಿಹಾರ ಸಿಗಬೇಕು.ಅಧಿವೇಶನದಲ್ಲಿ ಇನ್ನು ಸಾಕಷ್ಟು ಸಮಯ ಇದೆ.ಈ ಬಗ್ಗೆ ಸಮಗ್ರ ಚರ್ಚೆ ಆಗಬೇಕು. ಲೋಕಸಭೆ ಚುನಾವಣೆ ಸಿದ್ದತೆ ನಡೆದಿದೆ. ಎಲ್ಲಾ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ.ನೋಡೋಣ ಜನ ಏನು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

ಇದನ್ನೂ ಓದಿ-https://suddilive.in/archives/4396

Related Articles

Leave a Reply

Your email address will not be published. Required fields are marked *

Back to top button