ಸ್ಥಳೀಯ ಸುದ್ದಿಗಳು

ಜನವರಿ 1 ರಿಂದ ಐದು ಸಂಗತಿಯಲ್ಲಿ ಅಭಿಯಾನ-ಪಟ್ಟಭಿರಾಮ್

ಸುದ್ದಿಲೈವ್/ಶಿವಮೊಗ್ಗ

ಅಯೋಧ್ಯಯ ರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ‌ಲಲ್ಲನನ್ನ ದೇವಸ್ಥಾನದ ಭೂಮಿ‌ಪೂಜೆ ಸಲ್ಲಿಸಲಾಗಿತ್ತು. ಜನವರಿ 22 ರಂದು ಭವ್ಯ ದೇವಾಲಯದ ಲೋಕಾರ್ಪಣೆ ಆಗುತ್ತಿದೆ ಎಂದು ಆರ್‌ಎಸ್ ಎಸ್ ನ‌ ದಕ್ಷಿಣ ಪಾಂತ್ಯದ ಸಂಚಾಲಕ‌ ಪಟ್ಟಾಭಿರಾಮ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮಮಂದಿರದ ವಿಚಾರದಲ್ಲಿ ಹಿಂದೂ ಸಮಾಜ ಯಾವತ್ತೂ ಸೋಲಾಗಿಲ್ಲ. ಹೋರಾಟದಲ್ಲಿ ಏಳುಬೀಳು ಕಂಡುಬಂದಿದೆ. ಸಾತ್ವಿಕ ಸಾಂಸ್ಕೃತಿಕ ಇನ್ನೂ ಜೀವಂತವಾಗಿದೆ. ಇಡೀ ಕುಟುಂಬ ಅಯೋಧ್ಯದ ರಾಮಮಂದಿರ ನಿರ್ಮಾಣಕ್ಕೆ ಅನೇಕರು ಕುಟುಂಬಗಳು ಬೀದಿಗೆ ಬಿದ್ದಿದೆ ಇದೆ.

ರಾಂಮಂದಿರ ನಿರ್ಮಾಣದ ಹೋರಾಟದ ಆರಂಭದಲ್ಲಿ ಬಿಜೆಪಿ ಸರ್ಕಾರ ಇರಲಿಲ್ಲ. ಬಿಜೆಪಿಯೇತರ ಸರ್ಕಾರ ಇತ್ತು. ಬ್ರಿಟೀಶರ ಆಳ್ವಿಕೆಯಲ್ಲಿ ಬೀಗ ಹಾಕಲಾಗಿತ್ತು. ಇದಕ್ಕೆ ತಾಲಕೋಲೋ ಚಳುವಳಿ ನಡೆಯಿತು. ದೇವಸ್ಥಾನದ ಬೀಗ ತೆಗೆಯಲಾಯಿತು.

ನಂತರ ರಾಂಮಂದಿರ ನಿರ್ಮಾಣಕ್ಕೆ ಹೋರಾಟಕ್ಕೆ ಸಾಧು ಸಂತರ ನೇತೃತ್ವದಲ್ಲಿ ಸಭೆ ನಡೆದು ತಾತ್ವಿಕ ಅಂತ್ಯ ಕಾಣಲು ತೀರ್ಮಾನಿಸಲಾಯಿತು. ಮಸೀದಿಯನ್ನ‌ ಒಡೆಯಲಾಯಿತು. ಸುಪ್ರೀಂ ಸಹ ರಾಂಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿತು. ಅದರ ಪರಿಣಾಮ‌ ಜ.22 ರಂದು ಉದ್ಘಾಟನೆ ಆಗುತ್ತಿದೆ ಎಂದರು.

ಮನೆಮನೆ ಸಂಪರ್ಕ ಅಭಿಯಾನ ನಡೆಸಲಾಗುತ್ಯಿದೆ ಜನ.1 ರಿಂದ 15 ದಿನ ರಾಷ್ಟ್ರಾಧ್ಯಂತ ಪ್ರಾಂತ್ಯ ಮಟ್ಟದಲ್ಲಿ ತಂಡ ನಿರ್ಮಿಸಲಾಗಿದೆ. ಸಂಯೋಜನಕನಾಗಿ ತಾನನ್ನ ನೇಮಿಸಿದೆ. ಟೋಳಿ ನಿರ್ಮಿಸಲಾಗಿದೆ. ರಾಜ್ಯಟ್ಟದಲ್ಲಿ, ವಿಭಾಗ, ತಾಲೂಕು ಮತ್ತು ಜಿಲ್ಲೆ ಹಾಗೂ ಹೋಬಳಿ ಮಟ್ಟದಲ್ಲಿ ಸಂಘಟನೆ ನಿರ್ಮಿಸಲಾಗಿದೆ ಎಂದು ಹೇಳಿದರು.

ಅಭಿಯಾನದಲ್ಲಿ ಐದು ಸಂಗತಿಇದೆ. ಕರಪತ್ರವನ್ನ‌ ಮನೆಗೆ ಹಂಚುವುದು, ದೇವಸ್ಥಾನ ಪೂರ್ಣವಾಗಿಲ್ಲ. ಪೂರ್ಣಗೊಳಿಸಲು ಭಾವಚಿತ್ರ ಹಂಚಿಕೆ, ಮಂತ್ರಾಕ್ಷತೆ ಹಂಚಿಕೆ, ಜ.22 ರಂದು ಸಂಜೆ ಮನೆಗಳ‌ಮುಂದೆ ಪ್ರತಿಯೊಬ್ಬ ದೀಪ ಬೆಳಗಿಸುವುದು. ಪ್ರತಿ ಗ್ರಾಮದಲ್ಲಿ ಅಥವ ನಗರದಲ್ಲಿರುವ ಪ್ರಖ್ಯಾತ ದೇವಸ್ಥಾನದಲ್ಲಿ ಉದ್ಗಾಟನೆ ಕಾರ್ಯಕ್ರಮ‌ ಪ್ರಚಾರ, ಭಜನೆ ನಡೆಸಲಾಗುವುದು.

ಇದಕ್ಕೂ ಮೊದಲು ಜನವರಿ. 7 ರಂದು ವಿಶೇಷ ಸಂಪರ್ಕ ಅಭಿಯಾನ ನಡೆಯಲಿದೆ. ಜ.22 ರಂದು 7 ಸಾವಿರ ಜನಕ್ಕೆ ಮಾತ್ರ ಸಯೋಧ್ಯೆಯಲ್ಲಿ ಆಹ್ವಾನ ನೀಡಲಾಗಿದೆ. ಇವರು ಮಾತ್ರ ರಾಮ ಮಂದಿರ ಲೋಕಾರ್ಪಣೆಯಲ್ಲಿ ಭಾಗಿಯಾಗಲಿದ್ದಾರೆ.

ಸರಸಂಚಾಲಕ ಮೋಹನ್ ಭಾಗವತ್, ಪ್ರಧಾನಿ ಮೋದಿ ರಾಷ್ಟ್ರಪತಿಗಳು ಭಾಗಿಯಾಗಲಿದ್ದಾರೆ. ಒಂದೊಂದು ರಾಜ್ಯದವರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ ವಸತಿ ಊಟ ಇರುತ್ತದೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ರೈಲು ಟಿಕೇಟ್ ಜೈಶ್ರೀರಾಮ್ ಎಂಬ ಹೆಸರಿನಲ್ಲಿ ಪ್ರಯಾಣ ನಡೆಯುತ್ತದೆ. ಟಿಕೇಟ್ ಗೆ ಹಣ ನೀಡಬೇಕಾಗಿದೆ. ಜ.19 ರಂದು ಕರ್ನಾಟಕಕ್ಕೆ ಅವಕಾಶ ಕಲ್ಪಿಸಲಾಗಿದೆ. 3½ ಸಾವಿರ ಜನ ಪ್ರಯಾಣಿಸಲಿದ್ದಾರೆ ಎಂದರು.

ಮುಸ್ಲೀಂ ಮತ್ತು ಕ್ರಿಶ್ಚಿಯನ್ ಮನೆಗೂ ಹೋಗಬೇಕು ಅಥವಾ ಬೇಡವೋ ಎಂಬುದರ ಬಗ್ಗೆ ಆಯಾಯ ಕಾರ್ಯಕರ್ತರಿಗೆ ಬಿಟ್ಟ ವಿಷಯವಾಗಿದೆ. ಯಾಉದೇ ಘರ್ಷಣೆಗೆ ಅವಕಾಶವಿಲ್ಲ.

ಮೂರು ಸಾವಿರ ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಎಲ್ಲಾ ಅಭಿಯಾನಕ್ಕೆ 25 ಸ್ಥಾನಿಕ ಸ್ಥಾವಿರವನ್ನಬಗುರುತಿಸಲಾಗಿದೆ 1 ಸ್ಥಾನಿಕಕ್ಜೆ 250 ಮನೆಗಳು ಬರಲಿದೆ ಅದಕ್ಕೆ 25 ಜನ ನೇಮಿಸಲಾಗಿದೆ. 6 ಲಕ್ಷ ಜನ ಪ್ರಾಂತ್ಯದಲ್ಲಿ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ.

ಕೂಡ್ಲಿ ಮಠಾಧಿಶಾರು ಶೃಂಗೇರಿ ಸ್ವಾಮಿಗಳು ರಾಘವೇಶ್ವರ ಶ್ರೀಗಳಿಗೆ, ಬೆಕ್ಕಿನ ಕಲ್ಮಠದ ಸ್ವಾಮಿಗಳಿಗೆ ಸ್ವಾಮಿಗಳ ಸಾಲಿನ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.‌ ಸುದ್ದಿಗೋಷ್ಠಿಯಲ್ಲಿ ವಿಹೆಚ್ ಪಿ ಜಿಲ್ಲಾಧ್ಯಕ್ಷ ವಾಸುದೇವ್, ಚಿತ್ರದುರ್ಗದ ವಿಹೆಚ್ ಪಿ ಸಹಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/5651

Related Articles

Leave a Reply

Your email address will not be published. Required fields are marked *

Back to top button