ಸ್ಥಳೀಯ ಸುದ್ದಿಗಳು

ಈಶ್ವರಪ್ಪನವರ ವಿರುದ್ಧ ಆಯನೂರು ಮಂಜುನಾಥ್ ಅವರ ಮುಂದು ವರೆದ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಸಂಸದ ಡಿಕೆಸುರೇಶ್ ರಾಜ್ಯಕ್ಕೆ ಆಗುತ್ತಿರುವ ನೋವನ್ನ ತಿಳಿಸಿದ್ದಾರೆ. ಬಾಯಿತಪ್ಪಿನಿಂದ ಒಂದುಪದ ಹೇಳಿ ಹತಾಶೆಯ ನೋವಿನ ಮಾತನಾಡಿದ್ದಾರೆ. ಆದರೆ ಬಿಜೆಪಿ ನಾಯಕರು ಅದನ್ನೇ ಬಂಡವಾಳ ಮಾಡಿಕೊಂಡು ಸಮಾಜಘಾತುಕ ಹೇಳಿಕೆ ಮತ್ತು ವರ್ತನೆಗಳನ್ನ ನೀಡುತ್ತಿರುವುದು ಮುಗಿಲು ಮುಟ್ಟುವಂತೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿ ಎಂದರೆ ಅದನ್ನ ಬಿಟ್ಟು, ಅದಕ್ಕೆ ವ್ಯತಿರಿಕ್ತವಾದ ಅಂಶವನ್ನ ಹಿಡಿದುಕೊಂಡು ಅಪ್ರತಿಮ ದೇಶಭಕ್ತ ಎಂದು ನಟನೆಯನ್ನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಬರಗಾಲದ ಅನುದಾನ ಬಂದಿಲ್ಲ. ಆ ಅನ್ಯಾಯವನ್ನ ಸರಿಪಡಿಸಬೇಕಿತ್ತು. ಅದನ್ನ ಹೊರತು ಪಡಿಸಿ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕೆಂದು ಆಗ್ರಹಿಸಿರುವುದು ಎಷ್ಟು ಸರಿ? ಗುಂಡಿಕ್ಕಿ ಕೊಲ್ಲಲಾಗುತ್ತಾ ಎಂದು ದೂರಿದರು. ಅದನ್ನ ತರಲಾಗುತ್ತದಾ ಎಂದು ಆಗ್ರಹಿಸದರು.

ಆವೇಶದಲ್ಲಿ ಯಾರನ್ನೋ ಮೆಚ್ಚಿಸಲು ಬಿಜೆಪಿ ನಾಯಕರು ಮಾತನಾಡುತ್ತಾರೆ. ರಾಜಕೀಯ ಅಭದ್ರತೆ ಕಾಡಲು ಆರಂಭಿಸುತ್ತದೆಯೋ ಆಗ ಈರೀತಿಯ ಮಾತುಗಳು ಹೊರಬೀಳುತ್ತವೆ. ಮೇಕೆ ದಾಟು, ಮಹಾದಾಯಿ ಹೋರಾಟ ನಡೆಯಿತು. ಕೇಂದ್ರ ಹೇಗೆ ನಡೆದುಕೊಂಡಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಯಾಕೆ ನ್ಯಾಯಸಿಗಲಿಲ್ಲ ಎಂದು ಪ್ರಶ್ನಿಸಿದರು.

ಕಾವೇರಿ, ಮಹಾದಾಯಿ, ಮೇಕೆದಾಟು ನೀರಾವರಿಯ ಜ್ವಲಂತ ಸಮಸ್ಯೆಯ ಬಗ್ಗೆ ಕೇಂದ್ರ ಮಲತಾಯಿ ದೋರಣೆ ಮಾಡಿದರು. ಪ್ರವಾಹದ ಸಮಯದಲ್ಲಿ ರಾಜ್ಯಕ್ಕೆ ಕೇಂದ್ರ ಏನು ಸಹಾಯ ಮಾಡಿತು? ಕೇರಳದಲ್ಲಿ ಪ್ರವಾಹವಾದರೆ ಪ್ರಧಾನಿ ಮೋದಿ ಪ್ರವಾಸ ಮಾಡ್ತಾರೆ. 1200 ಕೋಟಿ ಹಣ ಪರಿಹಾರಧನವಾಗಿ ಬಿಡುಗಡೆ ಮಾಡುತ್ತಾರೆ ಕೇರಳದಿಂದ ಒಬ್ಬ ಸದಸ್ಯನೂ ಬಿಜೆಪಿಯವರಿಲ್ಲ. ಆದರೂ ಅನುದಾನ ಬಿಡುಗಡೆಯಾಗುತ್ತೆ. ಕರ್ನಾಟಕ 25 ಜನ ಸದಸ್ಯರನ್ನ ಕೊಟ್ಟಿದೆ. ಬಿಡಿಗಾಸು ಪರಿಹಾರ ಬಿಡುಗಡೆಯಾಗಿಲ್ಲ ಎಂದು ದೂರಿರು.

ವಿಐಎಸ್ ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಹಣ ಬಿಡುಗಡೆ ನೀಡಿಲ್ಲ. ಈಗ ವಿಐಎಸ್ ಎಲ್ ಕಾರ್ಖಾನೆ ಉಳಿಯಲಿ ಎಂದು ಪತ್ರ ಬರೆಯಲಾಗುತ್ತಿದೆ. ಇದು ಚುನಾವಣೆಯ ಗಿಮಿಕ್ ಎಂದರು.

ಧರ್ಮೇಂದ್ರ ಪ್ರಧಾನ್ ಹೊಸ ಸ್ಟೀಲ್ ಪ್ಲಾಂಟ್ ಗೆ 1500 ಕೋಟಿ ಹಣ ಹೂಡಲು ಮುಂದಾಗುತ್ತಾರೆ. ಆದರೆ ಭದ್ರಾವತಿಯ ವಿಐಎಸ್ ಎಲ್ ಮುಚ್ಚಲು ಮುಂದಾಗುತ್ತಾರೆ. ನಮ್ಮ ಸಂಸದರು ಒಂದು ಚೂರು ಸದನದಲ್ಲಿ ಮಾತನಾಡೊಲ್ಲ. ಅಡಿಕೆ ಸಂಶೋಧನ ಕೇಂದ್ರ ಆರಂಭಿಸುವುದಾಗಿ ಹೇಳಿದ್ದ ಕೇಂದ್ರ ಸಚಿವ ಅಮಿತ್ ಶಾ ಅಡಿಕೆ ಸಂಶೋಧನ ಕೇಂದ್ರದ ಬಗ್ಗೆ ಐದು ವರ್ಷದಿಂದ ಏನಾದರೂ ಮಾತನಾಡುದ್ರಾ? ಏನು ಇಲ್ಲ. ಇವೆಲ್ಲಾ ಮಲತಾಯಿ ಧೋರಣೆ ಅಲ್ವಾ? ಎಂದು ಕುಟುಕಿದರು.

ದಿನಕ್ಕೆ 25 ಕಿಮಿ ಹೈವೆ ಆಗುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ ಕಳೆದ ಐದು ವರ್ಷದಿಂದ ತುಮಕೂರು -ಶಿವಮೊಗ್ಗ ಹೈವೆ ಪೂರ್ಣಗೊಳ್ಳುತ್ತಿಲ್ಲ. ಭದ್ರಾವತಿ ರೈಲ್ವೆ ಬ್ರಿಡ್ಜ್ ಇನ್ನೂ ಪೂರ್ಣಗೊಳ್ಳಲಿಲ್ಲ ಏಕೆ? ಎಂದು ಪ್ರಶ್ನಿಸಿದರು. ಒಂದು ಪದವನ್ನ ತೆಗೆದು ಹಾಕಿ ರಾಜ್ಯಕ್ಕೆ ಆಗುತ್ತಿರುವ ತಾರತಮ್ಯ ಹೋಗಲಾಡಿಸುತ್ತಿಲ್ಲ. ಉದ್ರೇಕಕಾರಿ ಮಾತನಾಡುವವರು ಸಮಾಜ ದ್ರೋಹಿಗಳಲ್ವಾ? ಎಂದು ಬಿಜೆಪಿ ನಾಯಜರನ್ನ ಪ್ರಶ್ನಿಸಿದರು.

ಸಿದ್ದರಾಮಯ್ಯನವರ ತರ ದಂಡ ಕಟ್ಟಿಲ್ಲ. ಬೆಳಗಾವಿಯ ಸಂತೋಷ್ ಪಾಟೀಲ್ ಈಶ್ವರಪ್ಪ ಹೆಸರು ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಹೋರಾಟ ಮಾಡಿದಕ್ಕೆ ದಂಡಬಿದ್ದಿದ್ದು ಅವರು ಏನು ಕೊಚ್ಚು ಕೊಲ್ಲು ಗುಂಡಿಕ್ಕಿ ಎಂದಿಲ್ಲ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ದರಿಂದ ಮನೆಯಲ್ಲಿ ನೋಟು ಎಣಿಸುವ ಮಿಷನ್ ಸಿಕ್ಕಾಗಲೇ
ಒಳಗೆ ಹೋಗಬೇಕಿತ್ತು. ಶ್ರೀರಕ್ಷೆಯಿಂದ ಬಜಾವ್ ಆದರಿ ಎಂದು ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ಮುಂದು ವರೆಸಿದರು. ಡಿಕೆಶಿಯವರಿಗೆ ಪದೇ ಪದೇ ಜೈಲಿಗೆ ಹೋಗಿ ಬಂದಿದ್ದೀರಿ ಎಂದು ಹೆಗಲ ಮೇಲೆ ಬಂದೂಕು ಇಟ್ಟು ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಈಶ್ವರಪ್ಪ ಕುಟುಕುತ್ತಿದ್ದೀರಿ ಎಂದು ದೂಷಿಸಿದರು.

ನಿಮ್ಮ ಪಕ್ಷದಲ್ಲಿನ ಅಭದ್ರತೆಯ ಸ್ಥಿತಿಯಿಂದ ದಾರಿ ತಪ್ಪಿಸುವ ನಾಟಕವಾಡುತ್ತೀದ್ದೀರಿ. ಈಶ್ವರಪ್ಪನವರ‌ ಮೇಲೆಯೇ ಪರ್ಸೆಂಟೇಜ್ ನ ದೂರು ಬಂದಿತ್ತು. ಸುದ್ದಿಗೋಷ್ಠಿ ಉದ್ದಕ್ಕೂ ಈಶ್ವರಪ್ಪನವರ ಹೆಸರು ಹೇಳದೆ ಆರೋಪ ಮಾಡಿದ ಆಯನೂರು ಮಂಜುನಾಥ್ . ವಿಐಎಸ್ ಎಲ್, ಶರವತಿ, ಹೈವೆಯಲ್ಲಿ ಫ್ಲೈ‌ಓವರ್ ನಲ್ಲಿ ಆದ ಭ್ರಷ್ಠಾಚಾರಗಳನ್ನ ಈ ಬಾರಿಯ ಚುನಾವಣೆಯ ವಿಷಯಗಳು ಎಂದು ಘರ್ಜರಿಸಿದರು.
.
ಮೋದಿ ಮತ್ತೊಮ್ಮೆ ಕುಟುಂಬ ರಾಜಕಾರಣವನ್ನ ವಿರೋಧಿಸಿದ್ದಾರೆ. ನೀವು ಮೋದಿಯ ಹೆಸರಿನಲ್ಲಿ ಮತ ಕೇಳಲು ಮುಂದಾಗ್ತೀರಿ. ಆದರೆ ಅವರ ಆದರ್ಶವನ್ನ ಯಾಕೆ ಪಾಲಿಸೊಲ್ಲ? ಗುಂಡಿಕ್ಕುವ ಕಾನೂನು ತರುವ ಜೊತೆಗೆ ಸಮಾಜವನ್ನ ಯಾರು ಉದ್ರೇಕಿಸುತ್ತಾರೆ ಅವರಿಗೂ ಗುಂಡಿಕ್ಕಿವ ಕಾನೂನು ತರುವ ಮಸೂದೆ ಜಾರಿಗೊಳಿಸಿ ಎಂದರು.

ರಾಜಕೀಯ ಬದಲಾವಣೆಯೇ ಸೆಟ್ಲುಮೆಂಟ್

ಡಿಕೆಶಿ ರಾಜಕೀಯ ಬದಲಾವಣೆಯೇ ಸೆಟ್ಲುಮೆಂಟ್ ಆಗಿರುವಂತದ್ದು. ಅವತ್ತು ಈಶ್ವರಪ್ಪ ಎಲ್ಲಿದ್ದರು. ಇವತ್ತು ಎಲ್ಲಿದ್ದಾರೆ. ಡಿಜೆಶಿ ಅವತ್ತು ಎಲ್ಲಿದ್ದರು? ಇವತ್ತು ರಾಜಕೀಯವಾದ ಸ್ಥಾನಮಾನ ಏನಾಗಿದೆ ಎಂಬುದು ಅದರ ಅರ್ಥ.

ಅನಾಗರಿಕೆ ಭಾಷೆ ಅವರಸ್ವತ್ತು.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೆಟ್ಟಹುಳ ಎಂದು ಹೇಳಿರುವುದು ಭಾಷಾ ಕೊರತೆಯಿಂದ ಹುಟ್ಟಿದ ಮಾತು. ಅನಾಗರಿಕರ ಭಾಷೆ ಅವರಸ್ವತ್ತು. ನಾನಾಗಿದ್ದರೆ ಅವರನ್ನ‌ ಕಟಕಟೆಯಲ್ಲಿ ನಿಲ್ಲಿಉತ್ತಿದ್ದೆ ಎಂದು ದೂರಿದರು.

ಇದನ್ನೂ ಓದಿ-https://suddilive.in/archives/8817

Related Articles

Leave a Reply

Your email address will not be published. Required fields are marked *

Back to top button