ರಾಜಕೀಯ ಸುದ್ದಿಗಳು

ಕಾರ್ಯಕರ್ತರೇ ಕಾಂಗ್ರೆಸ್ ಅಭ್ಯರ್ಥಿ-ಭಂಡಾರಿ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಕಾರ್ಯಕರ್ತರೇ ಅಭ್ಯರ್ಥಿ ಎಂದು ಹಾಲಿ ಎಂಎಲ್ ಸಿ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ವೀಕ್ ಡೇ ಅಭ್ಯರ್ಥಿಯಾಗಿದ್ದು ವೀಕೆಂಡ್ ಅಷ್ಟು ಹೊತ್ತಿಗೆ ಜಾಗ ಖಾಲಿ ಮಾಡಿರುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಭಂಡಾರಿ, ಅಭ್ಯರ್ಥಿ ಶಿವಮೊಗ್ಗ ಕ್ಷೇತ್ರದಲ್ಲಿ ಏಳೆಂಟು ಸಭೆ ನಡೆಸಿದ್ದಾರೆ. ಮತ್ತೆ ಶಿವಮೊಗ್ಗಕ್ಕೆ ಬರ್ತಾರೆ.

ನಮ್ಮ ಅಭ್ಯರ್ಥಿ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಗ್ಯಾರೆಂಟಿಗಳ ಮೇಲೆ ಪ್ರಚಾರ ಮಾಡ್ತೀವಿ ಎಂದ ಅವರಿಗೆ ಮತ್ತೆ ಮಾಧ್ಯಮದವರಿಂದ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿ ಎಂದು ಹೇಗೆ ಪರಿಗಣಿಸಿದ್ದೀರ ಎಂಬುದು.

2014 ರಲ್ಲಿ ಅಭ್ಯರ್ಥಿಯಾಗಿದ್ದ ಗೀತಾ‌ಶಿವರಾಜ್ ಕುಮಾರ್ 2 ಮುಕ್ಕಾಲು ಲಕ್ಷ ಪಡೆದಿದ್ದರು. 2019 ರಲ್ಲಿ ಬಿಜೆಪಿ ವಿರುದ್ಧ ಈಗಿನ ಸಚಿವರೇ2 ಕಾಲು ಲಕ್ಷ ಮತದಿಂದ ಸೋಲನ್ನ ಅನುಭವಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಅವರನ್ನ ಹೇಗೆ ಪ್ರಬಲ ಅಭ್ಯರ್ಥಿಯಾಗುತ್ತಾರೆ ಎಂದು ಮಾಧ್ಯಮದ ಪ್ರಶ್ನೆಗೆ ಭಂಡಾರಿ ಗಲಿಬಿಲಿಯಾದರು.

ನಂತರ ಮಾತನಾಡಿ, ಪಕ್ಷದ ಕಾರ್ಯಕ್ರಮದ ಮೇಲೆ ಅಭ್ಯರ್ಥಿ ಪ್ರಬಲ ಅಭ್ಯರ್ಥಿಯಾಗಿದ್ದಾರೆ. 2014 ರಲ್ಲಿ ನಾನು ಸ್ಪರ್ಧಿಸುವಾಗ ನಾನು ಡಮ್ಮಿ, ಠೇವಣಿ ಕಳೆದುಕೊಳ್ಳುವ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. 5 ಲಕ್ಷ ಮತ ಪಡೆದಿದ್ದೇನೆ. ಈ ಬಾರಿ ನಮ್ಮ ಅಭ್ಯರ್ಥಿ ಗೆದ್ದು ಬರುತ್ತಾರೆ ಎಂದರು.

ನಮ್ಮ ಹಿಂದುತ್ವ ಸಂವಿಧಾನದಲ್ಲಿ ಬರೆದ ಹಿಂದುತ್ವ, ಮಡಿವಂತಿಕೆಯ ಹಿಂದುತ್ವ ಅಲ್ಲ .‌
ಶಿವಮೊಗ್ಗದ ಬಿಜೆಪಿ ಸಂಸದರು 2014 ರಲ್ಲಿ ಸ್ಪರ್ಧಿಸಿದಾಗ ಮತಗಳ ವಿಭಜನೆಯಾಗಿತ್ತು. ಬಿಜೆಪಿ ಮತ್ತು ಜೆಡಿಎಸ್ ಬೇರೆ ಬೇರೆಯಾಗಿ ಸ್ಪರ್ಧಿಸಿ ಮತ ಒಡೆಯಲಾಗಿತ್ತು. ಈ ಬಾರಿ ಮತ್ತೆ ನಮ್ಮ ಅಭ್ಯರ್ಥಿಯಾಗಿ ಗೀತ ಸಿವರಾಜ್ ಕುಮಾರ್ ಸ್ಪರ್ಧಿಸಿದ್ದಾರೆ. ಗೆಲವು ನಮ್ಮದೆ ಎಂದರು.

ಇದನ್ನೂ ಓದಿ-https://suddilive.in/archives/11869

Related Articles

Leave a Reply

Your email address will not be published. Required fields are marked *

Back to top button