ಸ್ಥಳೀಯ ಸುದ್ದಿಗಳು

ಬಿಎಸ್ ವೈಗೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಆಯನೂರು ಬಿಗಿಪಟ್ಟು

ಸುದ್ದಿಲೈವ್/ಶಿವಮೊಗ್ಗ

ದಾವಣಗೆರೆಯಲ್ಲಿ ಎರಡು ದಿನಗಳ‌ ಕಾಲ ವೀರಶೈವ ಮಹಾಸಭಾದ ಅಧಿವೇಶನ ನಡೆದಿದ್ದು, ಅಧಿವೇಶ ಯಶಸ್ವಿಯಾಗಿ ನಡೆದಿದೆ ಎಂದು ಕೆಪಿಸಿಸಿಯ ವಕ್ತಾರ  ಆಯನೂರು ಮಂಜುನಾಥ್ ತಿಳಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಠಾಧೀಶರು, ರಾಜಕಾರಣಿಗಳು ಅಧಿವೇಶನಲ್ಲಿ ಭಾಗವಹಿಸಿದ್ದರು. ಯಶಸ್ವಿಯಾದ ಸಮ್ಮೇಳನ ನಡೆದಿದೆ. ಮಹಾಸಭೆಯಲ್ಲಿ ಜನಗಣತಿಯ ವಿಷಯ ಪ್ರಸ್ತಾಪ ಆಯ್ತು. ಜನಗಣತಿ ವೈಜ್ಞಾನಿಕ ಆಗಿಲ್ಲ, ಮರುಗಣತಿ ಆಗಬೇಕು ಅಂತ ಅಧಿವೇಶದಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಜನಗಣತಿಯ ಸಂದರ್ಭದಲ್ಲಿ ಹಿಂದು ಎಂಬ ಕಾಲಂನಲ್ಲಿ ವೀರಶೈವ ಲಿಂಗಾಯ್ತ ಅಂತಾ ಬರೆಸಬೇಕು ಎನ್ನುವ ನಿರ್ಣಯ ಕೈಗೊಂಡಿದೆ. ನಿರ್ಣಯ ಪಾಸಾಗುವಾಗ ಎಲ್ಲಾ ಪಕ್ಷದ ನಾಯಕರಿದ್ದರು. ಯಡಿಯೂರಪ್ಪ ಅವರ ಜೊತೆ ಬಹಳ ವರ್ಷಗಳ ಕಾಲ ಹೆಜ್ಜೆ ಹಾಕಿದ್ದೇವೆ. ಯಡಿಯೂರಪ್ಪ ಅವರು ಈ ಹಿಂದೆ ಧರ್ಮದ ಕಾಲಂನಲ್ಲಿ ಹಿಂದು ಅಂತಾ, ಜಾತಿಯ ಕಾಲಂನಲ್ಲಿ ವೀರಶೈವ ‌ಲಿಂಗಾಯ್ತ ಬರೆಸಿ‌ ಎನ್ನುತ್ತಿದ್ದರು

ನಿನ್ನೆ ನಿರ್ಣಯ ಕೈಗೊಂಡಾಗ ಯಡಿಯೂರಪ್ಪ ಇದ್ದರು. ಈ‌ ನಿರ್ಣಯಕ್ಕೆ ಏನು ಹೇಳ್ತಿರ. ನಿಮ್ಮ ನಿಲುವು ಏನು. ನಿಮ್ಮ ಬದ್ದತೆ ಪ್ರದರ್ಶಿಸಿ ಎಂದು ಆಯನೂರು ಯಡಿಯೂರಪ್ಪನವರಿಗೆ ಸವಾಲು ಎಸೆದಿದ್ದಾರೆ. ದ್ವಂದ್ವ ನಿಲುವುಗಳಿಂದ ನಾಯಕರು ಹೊರ ಬರಬೇಕು. ನೀವು ಕನ್ ಪ್ಯೂಶನಲ್ಲಿದ್ದು, ಸಮಾಜ ಕನ್ ಪ್ಯೂಶನ್ ಮಾಡಬೇಡಿ ಎಂದು ಬಿಎಸ್ ವೈಗೆ ಬುದ್ದಿ ಹೇಳಿದ್ದಾರೆ.

ಜನಗಣತಿಯ ವಿಷಯದಲ್ಲಿ ನಿಮ್ಮ ನಿಲುವು ಏನು ಅಂತಾ ಸ್ಪಷ್ಟಪಡಿಸಬೇಕುತಮ್ಮ ನಿಲುವನ್ನು ವೀರಶೈವ ಸಮಾಜ ಗಮನಿಸುತ್ತಿದೆ ಎನ್ನುವ ಮೂಲಕ ಬಿಎಸ್ ವೈ ರನ್ನ ಆಯನೂರು ಪ್ರಾಸ್ನಿಸಿದ್ದಾರೆ.

ಇದನ್ನೂ ಓದಿ–https://suddilive.in/archives/5430

Related Articles

Leave a Reply

Your email address will not be published. Required fields are marked *

Back to top button