ರಾಜಕೀಯ ಸುದ್ದಿಗಳು

ದೇವಸ್ಥಾನದ ಗಂಟೆ ಭಾರಿಸುವ ಬಗ್ಗೆ ನಂಬಿಕೆ ಇಲ್ಲ-ಅಖಿಲೇಶ್ ಫೋನ್ ಪಿಕ್ ಮಾಡಿಲ್ಲ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಈಶ್ವರಪ್ಪನವರಿಗೆ ಅನ್ಯಾಯ ಮಾಡಿಲ್ಲ. ಅನ್ಯಾಯವಾಗಿದ್ದರೆ ಈಶ್ವರಪ್ಪ ಚಂದ್ರಗುತ್ತಿಗೆ ಬಂದು ಗಂಟೆ ಭಾರಿಸಲಿ ಎಂಬ ಸಂಸದರ ಸವಾಲನ್ನ ಈಶ್ವರಪ್ಪ ಜನರಲ್ಲಿ ಗೊಂದಲ ನಿವಾರಣೆಗೆ ಸವಾಲು ಸ್ವೀಕರಿಸುವುದಾಗಿ ಒಪ್ಪಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ, ಮಾಧ್ಯಮದ ಪ್ರಶ್ನೆಗಳಿಗೆ ಮಾತನಾಡಿ ದೇವರ ಹತ್ತಿರ ಹೋಗಿ ಗಂಟೆ ಭಾರಿಸುವುದು, ದೀಪ ಹಚ್ಚೋದು ನನ್ನ‌ ಜಾಯಮಾನವಲ್ಲ. ಚಂದ್ರಗುತ್ತಿಯಲ್ಲಿ ಬಂದು ಈಶ್ವರಪ್ಪ ಗಂಟೆ ಬಾರಿಸಲಿ ಎಂದು ಹೇಳಿದ್ದಾರೆ.

ಸ್ವಾಮಿಗಳಿಗೆ, ಮಹಿಳೆಗೆ ನೋವು ಮಾಡಿಲ್ಲ ಎಂದು ಚಂದ್ರಗುತ್ತಿ ದೇವಸ್ಥಾನಕ್ಕೆ ಬಂದು ಬಿಎಸ್ ವೈ ಕುಟುಂಬ ಗಂಟೆ ಬಾರಿಸಲಿ. ನಾನು ದೇವಸ್ಥಾನಕ್ಜೆ ಬರುವೆ. ನನಗೆ ಈ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಆದರೆ ಈ ಸವಾಲು ಸ್ವೀಕರಿಸಲಿಲ್ಲವೆಂದು ಈಶ್ವರಪ್ಪ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂಬ ತಪ್ಪು ಸಂದೇಶ ರವಾನೆಯಾಗಬಾರದು ಎಂದು ಸವಾಲು ಸ್ವೀಕರಿಸುವೆ ಎಂದರು.

ಆದರೆ ಬಿಎಸ್ ವೈ ಸುಳ್ಳು ಹೇಳುವುದೆ ಜಾಯಮಾನ. ಚಂದ್ರಗುತ್ತಿ ಬಿಟ್ಟು ಅಯೋದ್ಯ ರಾಮಮಂದಿರಕ್ಕೆ ಕರೆದು ಮಾತನಾಡಲಿ ನೋವುನೋವುಂಟು ಮಾಡಿಲ್ಲ ಎಂದು ಒಪ್ಪಿಕೊಳ್ಳಲಿ, ಕಾಂತೇಶ್ ಗೆ ನಾನು ಬಂದು ಟಿಕೇಟ್ ಕೊಡಿಸುವುದಾಗಿ ಬಿಎಸ್ ವೈ ಭರವಸೆ ಮಾತನಾಡಿದನ್ನ ಇಲ್ಲ ಎಂದು ಗಂಟೆ ಭಾರಿಸಲಿ. ನಾನು ಆಗ ಬಂದು ನನಗೆ ಅನ್ಯಾಯವಾಗೊಲ್ಲ ಎಂದು ಗಂಟೆ ಭಾರಿಸುವೆ ಎಂದರು.

ನನ್ನ ಎದೆ ಸೀಳುದ್ರೆ ಒಂದೆಡೆ ರಾಮ ಮತ್ತೊಂದುಕಡೆ ಮೋದಿ. ಮೋದಿಯನ್ನ ಹಿಡಿದು ಈಶ್ವರಪ್ಪ ಗೆಲ್ಲುತ್ತಾರೆ ಎಂಬ ಶಾಸಕರ ಮಾತಿಗೆ ಗರಂ ಆದ ಈಶ್ವರಪ್ಪ, ಮೋದಿ ಮತ್ತು ನನ್ನ ಸಂಪರ್ಕ ಆರಂಭದಿಂದಲೂ ಇದೆ. ಅವರ ಫೋಟೊ ಹಾಕಿಕೊಳ್ಳುವುದು ಸ್ಪೂರ್ತಿ, ಆದರ್ಶದ ಪ್ರತೀಕ ಎಂದರು.

ಚೆನ್ನಿ ನಮ್ಮ ಹುಡುಗನೇ ಆದರೆ ಅವರ ಪ್ರಶ್ನಿಸುತ್ತಿರುವುದು ಅಚ್ಚರಿಯೇ. ಕೂಪಮಂಡೂಕರ ರೀತಿ ವರ್ತಿಸುತ್ತಿದ್ದಾರೆ.‌ ಮತ್ತೆ ಬಿಜೆಪಿಗೆ ಹೋಗಿ ಚೆನ್ನಿ ಜೊತೆ ಸಂಘಟನೆ ಮಾಡುವೆ. ಮೋದಿ ಮತ್ತು ಅಮಿತ್ ಶಾಗೆ ಕುಟುಂಬ ರಾಜಕಾರಣದ ಬಗ್ಗೆ ಬೇಸರವಿದೆ. ಹಾಗಾಗಿ ಈಶ್ವರಪ್ಪನವರೊಂದಿಗೆ ಮಾತುಕತೆ ಇಲ್ಲ ಎಂದಿರಬಹುದು ಎಂದರು.

ಇಲ್ಲಿಯ ವರೆಗೂ ಅಮಿತ್‌ಶಾ ಮತ್ತು‌ ಮೋದಿ ಫೊನ್ ಮಾಡಿಲ್ಲ. ಯಡಿಯೂರಪ್ಪ ಯಾವ ಮುಖ ಇಟ್ಟುಕೊಂಡು ನನ್ನ‌ಬಳಿ ಬರ್ತಾರೆ. 40 ವರ್ಷ ಪಕ್ಷಕಟ್ಟಲು ಶ್ರಮಿಸಿರುವೆ. ಕೆಜೆಪಿಯಿಂದ 6 ಸೀಟು ಗೆದ್ದಿದ್ದರು. ಅವರನ್ನ‌ ವಾಪಾಸ್ ಬಿಜೆಪಿಗೆ ಕರೆತಂದಿದ್ದು ನಾನೆ. ಯಾವ ಮುಖ ಇಟ್ಟುಕೊಂಡು ನನ್ನ ಬರ್ತಾರೆ ಎಂದು ಗರಂ ಆದರು.

ಜಗದೀಶ್ ಶೆಟ್ಟರ್ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೋದರು. ಮತ್ತೆ ಬಿಜೆಪಿಗೆ ಕರತರಲಾಗಿದೆ.‌ ಹಾಗೆ ನಾನು ಸ್ಪರ್ಧಿಸುವುದರಿಂದ ಈಗ ಹೊರಹೋಗಿ ಮತ್ತೆ ಬಿಜೆಪಿಗೆ ವಾಪಾಸಾಗುವೆ ಎಂದರು.

ನನನ್ನ ಬಿಜೆಪಿಯಿಂದ ತೆಗೆದರೆ ಮತ್ತೆ ಬಿಜೆಪಿಗೆ ಹೋಗುವನು‌ ನಾನು. ಹೈಕಮ್ಯಾಂಡ್ ಗೆ ನನ್ನ ಬಗ್ಗೆ ನಂಬಿಕೆ ಇದೆ. ಬಿಜೆಪಿ ರಾಜ್ಯ ನಾಯಕರ ಬಗ್ಗೆ ಅನೇಕ ಕಾರ್ಯಕರ್ತರಿಗೆ, ಹಿರಿಯರಿಗೆ ನೋವಿದೆ.‌ ಕಾಂತೇಧ್ ಗೆ ಅವಕಾಶ ಕೊಟ್ಟಿದ್ದರೆ ನಾನು ಏನು ಮಾಡ್ತಾ ಇದ್ನೋ ಗೊತ್ತಿಲ್ಲ. ಭದ್ರಾವತಿಯ ಕಾರ್ಯಕರ್ತರು ಪ್ರತಾಪ್ ಸಿಂಹ, ಸದಾನಂದ ಗೌಡರಿಗೆ ಟಿಕೇಟ್ ನಿರಾಕರಿಸಿ ಒಕ್ಕಲಿಗರನ್ನ ಕೈಬಿಟ್ಟಿದ್ದಾರೆ

ಬಿಎಸ್ ವೈ ಮಗ ಗೆಲ್ಲಲು ಕಾಂಗ್ರೆಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ. ಶಿಕಾರಿಪುರದಲ್ಲಿ ಸುರಿದ ಹಣ ರಾಜ್ಯದ ಯಾವ ವಿಧಾನ ಸಭೆ ಕ್ಷೇತ್ರದಲ್ಲಿ ಹಣ ಸುರಿದಿಲ್ಲ. ಆದರೆ ಶಿಕಾರಿಪುರದಲ್ಲಿ ತಿಣಕಾಡಿ ಗೆದ್ದರು. ನನ್ನ ಸ್ಪರ್ಧೆಯಿಂದ ಪರಿಣಾಮ ಏನಾಗುತ್ತೆ ಗೊತ್ತಿಲ್ಲ.

ಅನ್ಯಾಯವಾಗಿದೆ, ಫೋನ್ ತೆಗೆಯುತ್ತಾರೆ, ಹಿಂದುತ್ವವಾದ ಮತ್ತು ಹಿಂದೂ ಸಂಘಟನೆಯ ಯುವಕರ ಮನದಲ್ಲಿ ಈಶ್ವರಪ್ಪ ಇದ್ದಾರೆ ಎಂಬ ಅಂಶದಲ್ಲಿ ಉಳಿದ ಇಬ್ಬರು ನಾಯಕರಿಗಿಂತ ಮುಂದಿರುವೆ ಎಂದರು.

ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಕರೆ ಮಾಡಿದ್ದರು. ನಾನು ಎಂಪಿ ಆಗಿ ಸ್ಪರ್ಧಿಸುವುದಾಗಿದ್ದರೆ ಅಖಿಲೇಶ್ ಜೊತೆ ಹೋಗಬಹುದಿತ್ತು. ಅವರ ಕರೆ ಸ್ವೀಕರಿಸಲಿಲ್ಲ ಎಂದು ಈಶ್ವರಪ್ಪ ಹೇಳಿದರು.‌

ಇದನ್ನೂ ಓದಿ-https://suddilive.in/archives/11735

Related Articles

Leave a Reply

Your email address will not be published. Required fields are marked *

Back to top button