ಕ್ರೈಂ ನ್ಯೂಸ್

ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡ ಮತ್ತು ಕೇಸ್ ವರ್ಕರ್ ಲೋಕ ಬಲೆಗೆ

ಸುದ್ದಿಲೈವ್/ಶಿವಮೊಗ್ಗ

ಎಪಿಎಂಸಿ ಕೃಷಿ ಮರುಕಟ್ಟೆಯಲ್ಲಿ ಲೋಕಾಯುಕ್ತ ಪೊಲಿಸರು ದಾಳಿ ನಡೆಸಿದ್ದಾರೆ. ಎಪಿಎಂಸಿ  ಕಾರ್ಯದರ್ಶಿ ಕೋಡಿಗೌಡ ಮತ್ತು ಕೇಸ್ ವರ್ಕರ್ ಯೋಗೇಶ್ ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ.

ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆ ನಂಬರ್ 16 ನ್ನ ಪಡೆಯಲು ಗೋಪಾಳದ ರವೀಂದ್ರ ವೀರಭದ್ರಪ್ಪ ನೇರಳೆ ಟೆಂಡರ್ ನಲ್ಲಿ ಇವರು ಆಯ್ಕೆಯಾಗಿದ್ದರು. ಇವರಿಗೆ ಮಳಿಗೆ ಹಂಚಲು ಒಂದು ಲಕ್ಷ ರೂ. ಲಂಚದ ಬೇಡಿಕೆ ಇಡಲಾಗಿದೆ. ಎರಡು ಲಕ್ಷ ರೂ ಬೇಡಿಕೆಯ ಮಾತುಕತೆಯಿಂದ ಒಂದು ಲಕ್ಷಕ್ಕೆ ಮಾತುಕತೆ ನಿಂತಿತ್ತು ಎಂದು ಆರೋಪಿಸಲಾಗಿದೆ.

ಕಾರ್ಯದರ್ಶಿ ಕೋಡಿಗೌಡ ನಿಮಗೆ ಮಳಿಗೆ ಆಗಲಿದೆ ಆದರೆ ಮೇಲಿನ ಅಧಿಕಾರಿಗಳನ್ನ‌ ನೋಡಿಕೊಳ್ಳಬೇಕು. ಹಾಗಾಗಿ ಕೇಸ್ ವರ್ಕರ್ ಯೋಗೀಶ್ ರನ್ನ ಭೇಟಿ ಮಾಡಲು ಸೂಚಿಸಿದ್ದಾರೆ. ನೇರಳೆಯವರು ಯೋಗೀಶ್ ರನ್ನ ಭೇಟಿಯಾದಾಗ ಎರಡು ಲಕ್ಷದ ಲಂಚದ ಬೇಡಿಕೆಯನ್ನಿಟ್ಟಿರುತ್ತಾರೆ. ನಂತರ 1 ಲಕ್ಷಕ್ಕೆ ತೀರ್ಮಾನವಾಗಿರುತ್ತದೆ.

ಇಂದು 50 ಸಾವಿರ ರೂ. ಹಣ ನೀಡುವಾಗ ಕಾರ್ಯರ್ಶಿ ಕೋಡಿಗೌಡ ಮತ್ತು ಯೋಗೀಶ್ ಲೋಕಾಯುಕ್ತ ಬಲೆಗೆ ಲೋಕಾಯುಕ್ತ ದಾಳಿಯಲ್ಲಿ ಶಿವಮೊಗ್ಗ ಇವರು ಕೈಗೊಂಡಿದ್ದು ಇರುತ್ತದೆ. ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ ಕಛೇರಿಯ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಪೊಲೀಸ್‌ ಉಪಾಧೀಕ್ಷಕರಾದ ಶ್ರೀ ಉಮೇಶ ಈಶ್ವರ ನಾಯ್ಕ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು,

ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ, ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಕಾಶ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀ ಮಹಂತೇಶ, ಸಿ.ಹೆಚ್.ಸಿ, ಶ್ರೀ ಸುರೇಂದ್ರ ಸಿ.ಹೆಚ್.ಸಿ, ಶ್ರೀ ಯೋಗೀಶ್, ಸಿ.ಹೆಚ್.ಸಿ, ಶ್ರೀ ಬಿ.ಟಿ. ಚನ್ನೇಶ, ಸಿಪಿಸಿ, ಶ್ರೀ ಪ್ರಶಾಂತ್‌ಕುಮಾರ್, ಸಿಪಿಸಿ, ಶ್ರೀ ಅರುಣ್‌ ಕುಮಾರ್, ಸಿಪಿಸಿ, ಶ್ರೀ ದೇವರಾಜ, ಸಿಪಿಸಿ, ಶ್ರೀ ರಘುನಾಯ್ಕ, ಸಿ.ಪಿ.ಸಿ, ಶ್ರೀಮತಿ ಪುಟ್ಟಮ್ಮ, ಮಪಿಸಿ, ಶ್ರೀ ಕೆ.ಸಿ. ಜಯಂತ, ಎಪಿಸಿ, ಶ್ರೀ ವಿ. ಗೋಪಿ, ಎಪಿಸಿ ಮತ್ತು ಶ್ರೀ ಪ್ರದೀಪ್ ಕುಮಾರ್, ಎಪಿಸಿ, ಇವರುಗಳು ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/10043

Related Articles

Leave a Reply

Your email address will not be published. Required fields are marked *

Back to top button