ಏನಿದು ದುರ್ಗಿಗುಡಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಮತ್ತು ಮಾಜಿ ಎಸ್ ಡಿ ಎಂಸಿ ಅಧ್ಯಕ್ಷರ ನಡುವಿನ ಗುದ್ದಾಟ?

ಸುದ್ದಿಲೈವ್/ಶಿವಮೊಗ್ಗ

ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿಯೇ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ದುರ್ಗಿಗುಡಿ ಶಾಲೆಯ ಶಿಕ್ಷಕರ ನಡುವೆ ಮನಸ್ಥಾಪ ಹೆಚ್ಚಾಗಿ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಮತ್ತು ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಶಿಕ್ಷಕಿಯೊಬ್ಬರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತಿ ಎಸ್ ರವರಿಗೆ ಈ ಹಿಂದೆ ಎಸ್.ಡಿಎಮ್.ಸಿ ಅಧ್ಯಕ್ಷರಾದ ನಾಗರಾಜ್ ಶೆಟ್ಟರ್ ಒಂದಲ್ಲ ಒಂದು ವಿಚಾರವಾಗಿ ಮಾಹಿತಿ ಕೇಳುವ ನೆಪದಲ್ಲಿ ಬಂದು ಕೆಲಸ ಸರಿ ಮಾಡುತ್ತಿಲ್ಲ ವೆಂದು ಅವಹೇಳನ ಮಾಡಿರುವುದಾಗಿ ಹಾಗೂ ಮುಖ್ಯ ಶಿಕ್ಷಕಿಯಾಗಲು ನೀವು ಫಿಟ್ ಆಗಿಲ್ಲ. ಈ ಹಿಂದೆ ಶಿಕ್ಷಕರೊಬ್ಬರು ದಂಡ ಕಟ್ಟುವಂತೆ ಮಾಡಿದ್ದೆ ಆ ಅಸ್ತ್ರವನ್ನ ನಿಮ್ಮ ವಿರುದ್ಧ ಮಾಡುವುದಾಗಿ ಧಮಕಿ ಹಾಕಿರುವುದಾಗಿ ಎಫ್ಐಆರ್ ನಲ್ಲಿ ದೂರಲಾಗಿದೆ.
ಇದರಿಂದ ಸೆ.12 ರಂದು ಎಸ್.ಡಿ.ಎಮ್.ಸಿ ಕಮೀಟಿಯ ಎಲ್ಲಾ ಹತ್ತು ಜನ ಸದಸ್ಯರು ನಾಗರಾಜ್ ಶೆಟ್ಟರ್ ರವರ ವರ್ತನೆಯನ್ನು ನೋಡಿ ಬೇಸತ್ತು, ಸಾಮೂಹಿಕ ರಾಜಿನಾಮೆಯನ್ನು ನೀಡಿದ್ದರು. ಈ ವಿಚಾರದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿವಮೊಗ್ಗ ರವರಿಗೆ ಈ ಹಿಂದೆ ಇದೆ ಎಸ್.ಡಿ.ಎಮ್.ಸಿ ಕಮೀಟಿಯನ್ನು ರದ್ದುಗೊಳಿಸಿ ಹೊಸ ಕಮೀಟಿಗಾಗಿ ಪತ್ರ ವ್ಯವಹಾರ ಮಾಡಲಾಗಿತ್ತು ಎಂದು ಶಿಕ್ಷಕಿ ಉಲ್ಲೇಖಿಸಿದ್ದಾರೆ.
ದಿ 30/09/2023 ರಂದು ಕ್ಷೇತ್ರ ಶಿಕ್ಷಣಾಧಿಕಾರಿಯವರು ಪೋಷಕರ ಸಭೆಯನ್ನು ಕರೆದು ಹೊಸದಾಗಿ ಕಮೀಟಿ ರಚನೆಯನ್ನು ಮಾಡಲು ಆದೇಶ ನೀಡಿದ್ದರಿಂದ ಆದೇಶದಂತೆ ಬಾರತಿಯವರು ಅ.07 ರಂದು ಪೋಷಕರ ಸಭೆಯನ್ನು ನಿಗದಿಪಡಿಸಿ ಪೋಷಕರಿಗೆ ಹಾಜರಾಗಲು ತಿಳುವಳಿಕೆ ಪತ್ರವನ್ನು ತಮ್ಮ ಶಾಲಾ ಮಕ್ಕಳಿಗೆ ಅ. 05 ರಂದು ನೀಡಿದ್ದರು.
ಅದೇ ದಿನ ಮದ್ಯಾಹ್ನ ಭಾರಿಯವರು ಸಹಶಿಕ್ಷಕಿಯರಾದ ಶ್ರೀಮತಿ ನಾಗರತ್ನಮ್ಮ ಶ್ರೀಮತಿ ರಜನಿ ರವರೊಂದಿಗೆ ತಮ್ಮ ಶಾಲೆಯ ತರಗತಿಯ ಕೋಣೆಯಲ್ಲಿ ಊಟ ಮಾಡುತ್ತಿದ್ದಾಗ ಮಧ್ಯಾಹ್ನ 01-15 ಗಂಟೆಗೆ ಈ ಹಿಂದೆ ಎಸ್.ಡಿಎಮ್.ಸಿ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ರವರು ಶಾಲೆಗೆ ಬಂದು ಶಾಲೆಯ ಕಛೇರಿಗೆ ಬರಲು ತಿಳಿಸಿದ್ದರು.
ಅದರಂತೆ ಶಿಕ್ಷಕಿ ಅಲ್ಲಿಗೆ ಹೋದಾಗ ನಾಗರಾಜ್ ಶೆಟ್ಟಿ ರವರು ತಮ್ಮ ಮಗ ವಿಹಾನ್ ಶೆಟ್ಟರ್ ಮೂಲಕ ಕಳುಹಿಸಿದ ಪೋಷಕರ ತಿಳುವಳಿಕೆ ಪತ್ರವನ್ನು ಹರಿದು ಬಿಸಾಕಿ ಹೊಸದಾಗಿ ಎಸ್.ಡಿ.ಎಮ್.ಸಿ ರಚನೆ ಮಾಡಲು ನನ್ನ ಅನುಮತಿಯನ್ನು ಪಡೆಯದೆ ಹೇಗೆ ರಚನೆ ಮಾಡುತ್ತಿರಾ ಎಂದು ಪ್ರಶ್ನಿಸಿದ್ದಾರೆ. ಶಿಕ್ಷಕಿ ಬಿ.ಇ.ಓ ರವರ ಆದೇಶದ ಮೇರೆಗೆ ಮಾಡಿರುವುದಾಗಿ ಹೇಳಿದ್ದು ಶಾಲೆಗೆ ನಾನೇ ಸುಪ್ರೀಂ ಬಿ.ಇ.ಓ ಯಾವನು ನಾನು ಹೇಳಿದಂತೆ ಕೇಳಬೇಕು ಎಂದು ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಆಲಿದ್ದ ಚೇರುಗಳನ್ನು ತಳ್ಳಿ, ಬೆದರಿಕೆ ಹಾಕಿ ಹೋಗಿರುವುದಾಗಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/894
