ರಾಜಕೀಯ ಸುದ್ದಿಗಳು

ಎಸ್ ಪಿ ಅವರು ಹೌದು ಸಾರಿಗೆ ಸಚಿವರು ಹೇಳಿದ್ದು ನಿಜ ಅಂದ್ರೆ ಅವರು ಹೇಳಿದಾಗೆ ಕೇಳ್ತೀನಿ-ಈಶ್ವರಪ್ಪ ಸವಾಲು

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡ ಪ್ರಕರಣ ಬಿಜೆಪಿ ಪ್ರಚೋದಿತ ಕೃತ್ಯ ಎಂದು  ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿಕೆಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ರಾಮಲಿಂಗ ಎರಡು ಹೆಸರು ಇಟ್ಟುಕೊಂಡಿರುವ ರೆಡ್ಡಿಯವರು ಇಷ್ಟು ಕೆಳಮಟ್ಟದ ರಾಜಕಾರಣಕ್ಕೆ ಇಳಿತ್ತಾರೆ ಅಂತಾ ಅನಿಸಲಿಲ್ಲ ಎಂದು ಹೇಳಿದ್ದಾರೆ.

ರಾಮಲಿಂಗ ರೆಡ್ಡಿಯವರು ಗೃಹ ಮಂತ್ರಿ ಆಗಿದ್ದವರು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಅವರ ಮಾತನ್ನು ಯಾರು ಒಪ್ಪಲು ಸಾಧ್ಯವಿಲ್ಲ. ಅವರು ಸ್ವತಃ ಶಿವಮೊಗ್ಗಕ್ಕೆ ಬಂದ್ರೆ ಹಿಂದು ಮನೆಗಳ ಹುಡುಕಿ ಹುಡುಕಿ ಹೊಡೆದಿದ್ದಾರೆ ಆ ಮನೆಗೆ ಕರೆದುಕೊಂಡು ಹೋಗ್ತೇನೆ. ಆಸ್ಪತ್ರೆಗೆ ಕರೆದುಕೊಂಡು ಹೋಗ್ತೇನೆ. ಎಸ್ ಪಿ ಅವರು ನಾನು ರಾಮಲಿಂಗರೆಡ್ಡಿ ಮೂರೇ ಜ‌ನ ಕುಳಿತುಕೊಳ್ಳುತ್ತೇವೆ. ಎಸ್ ಪಿ ಅವರು ಹೌದು ರಾಮಲಿಂಗರೆಡ್ಡಿ ಹೇಳಿದ್ದು ನಿಜ ಅಂದ್ರೆ ಅವರು ಹೇಳಿದಾಗೆ ಕೇಳ್ತೀನಿ ಎಂದು ಸವಾಲು ಎಸೆದಿದ್ದಾರೆ.

ನಾವು ಹಿಂದುಗಳು ಮುಸ್ಲಿಂರಿಗೆ ಯಾವುದೇ ತೊಂದರೆ ಕೊಡಲು ಹೋಗಿಲ್ಲ. ಮಧು ಬಂಗಾರಪ್ಪ ಆ ಸ್ಥಳಕ್ಕೆ ಹೋಗಿದ್ದಾರೆ. ಅವರು ಈ ಮಾತನ್ನು ಹೇಳಿದ್ದರೇ ನಾನು ಒಪ್ಪಿಕೊಳ್ಳುತ್ತೇನೆ. ಎಲ್ಲಿಯೋ ಕುಳಿತುಕೊಂಡು ರೆಡ್ಡಿ ಕತ್ತಲಲ್ಲಿ ವಿಷಯ ಬಿಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರ ರಕ್ತದ ಕಣ ಕಣ ಹೇಳ್ತದೆ ಭಾರತ ಮಾತೆ ನಮ್ಮ ತಾಯಿ ಅಂತಾ, ರಾಮಲಿಂಗರೆಡ್ಡಿ ಅವರು ಗೃಹ ಮಂತ್ರಿ ಆಗಿದ್ದವರು ಸುಳ್ಳು ಮಾತನ್ನು ಹೇಳಬಾರದು. ಸುಳ್ಳು ಮಾತು ಹೇಳಿರುವುದಕ್ಕೆ ಸಚಿವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.‌

ಜೈಲಿನಲ್ಲಿರುವ ಮುಸ್ಲೀಂರನ್ನ‌ ಭೇಟಿಯಾಗಿ ಅವಲೋಕಿಸಲಿ

ಇಲ್ಲದಿದ್ದರೆ ನನಗೆ ಬುದ್ದಿ ಭ್ರಮಣೆ ಆಗಿದೆ ಅಂತೇಳಿ ಹಿಂದುಗಳನ್ನು ಬಹಿರಂಗವಾಗಿ ‌ಕ್ಷಮೆ ಕೇಳಬೇಕು. ಪರಮೇಶ್ವರ್ ಸುಳ್ಳು ಹೇಳಿದ್ರು, ರೊಟ್ಟಿನ ಖಡ್ಗ ಅಂದ್ರು. ನಿಖರವಾದ ವರದಿ‌ ಬಂದಿಲ್ಲ ಅಂದ್ರೆ ಪೂರ್ವ ನಿಯೋಜಿತ ಕೃತ್ಯ ಎಂದು ಪರಿಗಣಿಸಬೇಕು ತಾನೆ? ಹಿಂದು ಮಹಾಸಭಾ ಗಣಪತಿ ವಿಸರ್ಜನೆ ವೇಳೆಯಲ್ಲೇಗಲಾಟೆ ಮಾಡಬೇಕಿತ್ತು ಅಂತಾರಲ್ಲ. ರಾಮಲಿಂಗರೆಡ್ಡಿ ಅವರಿಗೆ ಗೊತ್ತಿಲ್ವಾ, ಅವರ ಬಳಿ ಇಂಟಲಿಜೆನ್ಸ್ ವ್ಯವಸ್ಥೆ ಇಲ್ವಾ. ಜೈಲಿಗೆ ಹೋಗಿ ಮುಸ್ಲಿಂ ಗೂಂಡಾಗಳ ಜೊತೆ ಮಾತನಾಡಲಿ. ಇದು ಪೂರ್ವ ನಿಯೋಜಿತ ಕೃತ್ಯ ಹೌದೋ, ಅಲ್ವಾ ಅಂತಾ ಗೊತ್ತಾಗುತ್ತದೆ. ಗೃಹ ಸಚಿವ ಹೇಗೆ ರಾಜ್ಯವನ್ನು ರಕ್ಷಣೆ ಮಾಡ್ತಾರೋ ಗೊತ್ತಿಲ್ಲ. ನಮಗೆ ಹಿಂದು ಸಮಾಜ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಅಂತಾ ಗೊತ್ತಿದೆ ಎಂದು ಟಾಂಗ್ ನೀಡಿದರು.

ಡಿಜೆ ಹಳ್ಳಿ, ಕೆಜೆಹಳ್ಳಿ, ಹುಬ್ಬಳ್ಳಿ ಪ್ರಕರಣ‌ದ ಆರೋಪಿಗಳ ಪಟ್ಟಿಯಿಂದ ಹೆಸರು ಕೈ ಬಿಡಿ ಅಂತಾರಲ್ಲ, ಉಪ ಮುಖ್ಯಮಂತ್ರಿ ಆಗಲು ಯೋಗ್ಯತೆ ಇದೆಯಾ? ಇಂತಹ ಉಪ ಮುಖ್ಯಮಂತ್ರಿ ಬೇಕಾ ನಮಗೆ? ಮುಖ್ಯಮಂತ್ರಿ ಅವರು ಕೂಡಲೇ ಉಪ ಮುಖ್ಯಮಂತ್ರಿ ತೆಗೆದು ಬೇರೆಯವರನ್ನು ನೇಮಿಸಿಕೊಳ್ಳಲಿ ಎಂದು ಗುಡುಗಿದರು.‌

ಮೈತ್ರಿ ಅಚಲ

ಜೆಡಿಎಸ್ ಬಿಜೆಪಿ ಮೈತ್ರಿ ಇಬ್ರಾಹಿಂ ಹೇಳಿಕೆ ವಿಚಾರವನ್ನೂ ಪ್ರಸ್ತಾಪಿಸಿದ ಈಶ್ವರಪ್ಪ,  ಇಬ್ರಾಹಿಂ ‌ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷರು. ನಾನು ಈ ವಿಷಯದಲ್ಲಿ ಇಬ್ರಾಹಿಂ ಮಾತು ನಂಬಲ್ಲ. ದೇವೇಗೌಡರ ಮಾತನ್ನು ನಂಬುತ್ತೇನೆ. ಮೈತ್ರಿ‌ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಮೈತ್ರಿ ಆಗಿಯೇ ಆಗುತ್ತದೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ಗೃಹಸಚಿವರ ಶಿವಮೊಗ್ಗಕ್ಕೆ ಭೇಟಿ ನೀಡಲಿ

ಶಿವಮೊಗ್ಗಕ್ಕೆ ಬಿಜೆಪಿಯ ಸತ್ಯಶೋಧನಾ ಸಮಿತಿ ನಾಳೆ ಭೇಟಿ ನೀಡುತ್ತಿದೆ. ನಳೀನ್ ಕುಮಾರ್ ಕಟೀಲು ನೇತೃತ್ವದ ಸತ್ಯ ಶೋಧನಾ ಸಮಿತಿ‌ ಇಲ್ಲಿಗೆ ಬರಲಿದೆ. ಗಲಭೆಯಲ್ಲಿ ಗಾಯಗೊಂಡ ವ್ಯಕ್ತಿಗಳ ಭೇಟಿ, ಹಾನಿಗೊಳಗಾದ ಮನೆಗಳಿಗೆ ಭೇಟಿ ಕೊಡ್ತಾರೆ. ಶಿವಮೊಗ್ಗ ಎಸ್ ಪಿ ಮೇಲೆ ಕಾಂಗ್ರೆಸ್ ನವರು ಒತ್ತಡ ಹಾಕ್ತಿದ್ದಾರೆ.‌ಎಸ್ ಪಿ ಅವರಿಂದ ಏನೇನೋ ಹೇಳಿಸುವ ಪ್ರಯತ್ನ ಮಾಡ್ತಿದ್ದಾರೆ.ಯಾವುದೇ ಕಮ್ಯುನಿಟಿಯವನು ತಪ್ಪು‌ ಮಾಡಿದ್ರೆ ಅವನಿಗೆ ಶಿಕ್ಷೆ ಆಗಬೇಕು. ಗೃಹ ಮಂತ್ರಿ‌ ಪರಮೇಶ್ವರ್ ಶಿವಮೊಗ್ಗಕ್ಕೆ ಭೇಟಿ ಕೊಡಬೇಕು. ಹಿಂದುಗಳು ಧೈರ್ಯವಾಗಿರಿ ಅಂತಾ ಹೇಳಬೇಕು. ಇಲ್ಲದಿದ್ದರೆ ಹಿಂದುಗಳ ರಕ್ಷಣೆ ನಮಗೆ ಗೊತ್ತಿದೆ ಎಂದು ಗುಡುಗಿದರು.

ಏನಿದು ಇಬ್ಬರು ಹುಡುಗರು ಆಡೋ ವಿಷಯದಲ್ಲಿ ನಡೆದ ಗಲಾಟೆನಾ? ಪರಮೇಶ್ವರ ಅವರೇ‌ನೀವು ಕೇವಲ ಮುಸ್ಲಿಂರ ರಕ್ಷಣೆಗೆ ಇರೋದಲ್ಲಾ, ಹಿಂದು, ಕ್ರಿಶ್ಚಿಯನ್ ಅವರಿಗು ರಕ್ಷಣೆ ಕೊಡಬೇಕು. ನೀವು ಶಿವಮೊಗ್ಗಕ್ಕೆ ಬಂದು ಸಾಂತ್ವಾನ ಹೇಳಬೇಕು. ಇದು ಸಣ್ಣ ಘಟನೆ ಅಂತೀರಲ್ಲಾ ನೀವು ಗೃಹಮಂತ್ರಿ ಆಗಲು ಯೋಗ್ಯರೋ ಅಯೋಗ್ಯರೋ ಅಂತಾ ಜನ ತೀರ್ಮಾನಿಸಬೇಕು. ಹಿಂದುಗಳು ಕಲ್ಲು ತೂರಾಟ ಮಾಡುವ ಜನರಲ್ಲ. ಹಿಂದುಗಳು ಹೇಡಿಗಳಲ್ಲ. ರಾಜ್ಯದಲ್ಲಿ ಒಬ್ಬೊಬ್ಬ ಮಂತ್ರಿ ಒಂದೊಂದು ರೀತಿ‌ ಹುಚ್ಚುಚ್ಚು ಹೇಳಿಕೆ ಕೊಡ್ತಿದ್ದಾರೆ. ಇರಲಿ ಇನ್ನು ಈ ಸರಕಾರ ಎಷ್ಟು ದಿನ ಇರುತ್ತದೆ ಎಂದು ಸವಾಲು ಎಸೆದರು.

ಸಿಎಂ ಸಿದ್ದುಗೆ ಸನ್ಮಾನ

ಬೆಳಗಾವಿಯಲ್ಲಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ವಿಚಾರದ ಬಗ್ಗೆಯೂ ಮಾಯನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಅವರಿಗೆ ಬೇಕು‌ ಬೇಕಾದವರು ಸನ್ಮಾನ ಮಾಡಿದ್ದಾರೆ ನಾನು ಏಕೆ ಹೋಗಲಿ? ಈ ಸನ್ಮಾನವನ್ನು ರಾಜ್ಯ ಕುರುಬರ ಸಂಘ ಮಾಡಿದಲ್ಲ. ಅವರಿಗೆ ಬೇಕಾದವರು ಸನ್ಮಾನ ಮಾಡಿದ್ದಾರೆ. ಮುಖ್ಯಮಂತ್ರಿ ಅನ್ನುವ ಕಾರಣಕ್ಕೆ ಎಲ್ಲರೂ ಸನ್ಮಾನ ಮಾಡ್ತಿರುತ್ತಾರೆ ಅದಕ್ಕೆಲ್ಲಾ ನಾನು ಹೋಗಲು ಆಗ್ತದಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ-https://suddilive.in/archives/521

Related Articles

Leave a Reply

Your email address will not be published. Required fields are marked *

Back to top button