ಸ್ಥಳೀಯ ಸುದ್ದಿಗಳು

ನಾಪತ್ತೆಯಾಗಿದ್ದ ಹೆಲ್ತ್ ಬುಲಿಟಿನ್ 13 ದಿನಗಳ ಬಳಿಕ ಧಿಡೀರ್ ಎಂದು ಪ್ರಕಟ

ಸುದ್ದಿಲೈವ್/ಶಿವಮೊಗ್ಗ

ಕಳೆದ ಎರಡು ವಾರದಿಂದ ನಾಪತ್ತೆಯಾಗಿದ್ದ ಕೊರೋನ‌ ಹೆಲ್ತ್ ಬುಲಿಟಿನ್ ಇಂದು ಮಾಧ್ಯಮಕ್ಕೆ ಪ್ರಕಟವಾಗಿದೆ.‌ ಜ.2 ರಂದು ಪ್ರಕಟವಾಗಿದ್ದ ಕೋವಿಡ್ ಹೆಲ್ತ್ ಬುಲಿಟಿನ್ ನಿನ್ನೆಯ ವರೆಗೆ ಪ್ರಟವಾಗಿರಲಿಲ್ಲ.

13 ದಿನಗಳ ಬಳಿಕ ಪ್ರಕಟವಾಗಿದೆ. ಅವಾಗವಾಗ ಪ್ರಕಟವಾಗುವ ಹೆಲ್ತ್ ಬುಲಿಟಿನ್ ಕುರಿತು ಸುದ್ದಿಲೈವ್ ತಪ್ಪಾದ ಅಂಕಿ ಅಂಶ ಪ್ರಕಟಿಸಲಾಗುತ್ತಿದೆ ಎಂದು‌ ಸುದ್ದಿ ಮಾಡಲಾಗಿತ್ತು.‌ ಡಿ.30 ರಂದು ಜಿಲ್ಲೆಯಲ್ಲಿ ಒಟ್ಟು 26 ಜನರಿಗೆ ಕೊರೋನ ಪಾಸಿಟಿವ್ ಇದೆ ಎಂದು ಪ್ರಕಟವಾಗಿತ್ತು.

ಮತ್ತೆ ಡಿ31 ರಂದು ಕೊರೋನ ಪಾಸಿಟಿವ್ ಸಂಖ್ಯೆ 4 ಪತ್ತೆಯಾಗಿದ್ದರಿಂದ ಒಟ್ಟು 30 ಕೊರೋನ ಪಾಸಿಟಿವ್ ಎಂದು ಅಂಕಿ ಅಂಶ ಬರಬೇಕಿತ್ತು. ಆದರೆ ಡಿ.31 ರಂದು ಒಟ್ಟು 28 ಕೊರೋನ‌ ಪಾಸಿಟಿವ್ ಎಂದು ತಪ್ಪಾಗಿ ಪ್ರಕಟವಾಗಿತ್ತು.

ಜ.2 ಕ್ಕೆ ಮತ್ತೆ 6 ಪತ್ತೆಯಾಗಿತ್ತು. ಒಟಗಟು ಸಂಖ್ಯೆ 34ಜನರಿಗೆವ ಪಾಸಿಟಿವ್ ಎಂದು ಪ್ರಕಟವಾಗಬೇಕಿತ್ತು. ಆದರೆ 31 ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಪ್ರಕಟವಾಗಿತ್ತು. ಹೀಗೆ ಅಂಕಿ ಸಂಖ್ಯೆಗಳ ತಪ್ಪು ಮಾಹಿತಿ ಕುರಿತು ಸುದ್ದಿ ಮಾಡಿದ್ದಾಗಿನಿಂದ ನಾಪತ್ತೆಯಾಗಿದ್ದ ಹೆಲ್ತ್ ಬುಲಿಟಿನ್ ಇಧು ಪ್ರತ್ಯಕ್ಷವಾಗಿದೆ.

ಇಂದು 47 ಜನರಿಗೆ‌ ಜಿಲ್ಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಿಗೂ ಕೊರೋನ ಸೋಂಕು ಪತ್ತೆಯಾಗಿಲ್ಲ ಎಂದು ಹೆಲ್ತ್ ಬುಲಿಟಿನ್ ಪ್ರಕಟವಾಗಿದೆ. ಆದರೆ ಇದುವರೆಗೂ ಜಿಲ್ಲೆಯಲ್ಲಿ 23 ಜನರಿಗೆ ಸೋಂಕು ಇದ್ದು ನಾಲ್ವರು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದೆ. ಈ ಹೆಲ್ತ್ ಬುಲಿಟಿನ್ ಇನ್ನುಮುಂದಾದರೂ ಸರಿಯಾಗಿ ಪ್ರಕಟವಾಗುತ್ತೋ ಅಥವಾ ಅವಾಗವಾಗ ಪ್ರಕಟವಾಗುತ್ತೋ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/6927

Related Articles

Leave a Reply

Your email address will not be published. Required fields are marked *

Back to top button