ಸದಾಶಿವ ಆಯೋಗ ವರದಿ ಜಾರಿ ಮಾಡಿದರೆ ಎಚ್ಚರಿಕೆ-ಗೋರಾಸೇನಾ

ಸುದ್ದಿಲೈವ್/ಶಿವಮೊಗ್ಗ

ಒಳ ಮೀಸಲಾತಿ ವಿಷಯದಲ್ಲಿ ಬಿಜೆಪಿಗೆ ವಿಧಾನ ಸಭೆ ಚುನಾವಣೆಯ ವೇಳೆ ಬುದ್ದಿಕಲಿಸಲಾಗಿತ್ತು. ಈಗ ಸದಾಶಿವ ಆಯೋಗ ಜಾರಿಗೊಳಿಸುವ ಜಪ ಮಾಡುವ ಕಾಂಗ್ರೆಸ್ ಗೆ ಲೋಕ ಸಭಾ, ಜಿಪಂ ಮತ್ತು ತಾಪಂ ಚುನಾವಣೆಯ ವೇಳೆ ತಕ್ಕ ಪಾಠ ಕಲಿಸಲಾಗುವುದು ಎಂದು ಗೋರಾ ಸೇನಾ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರ ಸಙವಿದಾನದಲ್ಲಿ ಟಚಬಲ್ ಮತ್ತು ಅನ್ ಟಚಬಲ್ ಎಂಬ ಮಾತೇ ಇಲ್ಲ. ಆದರೆ ಸದಾಶಿವ ಆಯೋಗದಲ್ಲಿ ಟಚ್ ಬಲ್ ಮತ್ತು ಅನ್ ಟಚಬಲ್ ಮಾತಿದೆ. ಇದು ತುಳಿತದ ವರದಿಯಾಗಿದೆ. ಜನಸಂಖ್ಯೆ 2011 ರ ಆಧಾರಿತವಾಗಿ ಜಾರಿಗೊಳಿಸಲಸಗುತ್ತಿದೆ 11 ವರ್ಷದ ಜನಸಂಖ್ಯೆಗೆ ಹೋಲಿಕೆ ಸರಿಯಾಗುವುದಿಲ್ಲ ಎಂದು ಸೇನಾದ ಕಲ್ಲೇಶ್ ನಾಯ್ಕ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸದಾಶಿವ ಆಯೋಗ ಜಾರೊಗೊಳಿಸಬಾರದು, ಕಾಂತರಾಜ ವರದಿ ಜಾರಿಗೊಳಿಸಬೇಕು. ಸರ್ಕಾರದ ಆಹಾರ ಮತ್ತು ನಾಗರೀಕ ಪೂರೈಕೆ ಮಂತ್ರಿ ಮುನಿಯಪ್ಪನವರು ಸದಾಶಿವ ಆಯೋಗ ಜಾರಿಗೊಳಿಸುವುದಾಗಿ ತಿಳಿಸಿರುವುದು ಸಂವಿದಾನ ಬಾಹಿರವಾಗಿದೆ. ಅವರನ್ನ ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಲಾಯಿತು.
ಇದನ್ನೂ ಓದಿ-https://suddilive.in/archives/3206
