ರಾಷ್ಟ್ರೀಯ ಸುದ್ದಿಗಳು

ಪತಿಯನ್ನ ಹುಡುಕಿಕೊಡಿ

ಸುದ್ದಿಲೈವ್/ಶಿವಮೊಗ್ಗ

9 ತಿಂಗಳ ಹಿಂದೆ ವ್ಯಾಪಾರಕ್ಕೆ ಹೋಗಿದ್ದವ ಶಿವಮೊಗ್ಗದ ನಿವಾಸಿ ಮೆಕ್ಸಿಯಾರವರ ಪತಿ ಸುಹೇಲ್ ನಾಪತ್ತೆಯಾಗಿದ್ದು ಹುಡುಕಿಕೊಡಿ ಎಂದು ಪತ್ನಿ ಮೆಕ್ಸಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅವರ ಪರವಾಗಿ ಸುದ್ದಿಗೋಷ್ಠಿ ನಡೆಸಿದ ಪಾರಂಪರಿಕ ವೈದ್ಯ ಮೈಕಲ್ ಕೆನಿತ್, ಇಂಟರ್ ನ್ಯಾಷನಲ್ ಹ್ಯೂಮನ್ ರೈಟ್ಸ್ ಗೂ ದೂರು ದಾಖಲಿಸಲಾಗುತ್ತಿದೆ. 24 ದಿನಗಳ ಹಿಂದೆ ಪತ್ನಿ ಮೆಕ್ಸಿಯಾಗೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು ಎಂದು ತಿಳಿಸಿದರು.

ಬಾಂಬ್ ಬ್ಲಾಸ್ಟ ನಲ್ಲಿ ಮೃತಪಟ್ಟಿರುವುದಾಗಿ ಹೇಳುತ್ತಿದ್ದಾರೆ. ಆ ಕುರಿತು ವಾಟ್ಸಪ್ ನಲ್ಲಿ ಫೋಟೊಗಳನ್ನ ಕಳುಹಿಸಲಾಗಿತ್ತು. ಆದರೆ ಆ ವ್ಯಕ್ತಿ ಸುಹೇಲ್ ಎಂದು ಪತ್ನಿ ಗುರುಹಿಡಿದಿಲ್ಲ ಎಂದರು.

ಕಾರ್ಟೂಮ್ ನಗರದಿಂದ ದಮಜೈನ್ ಎಂಬಲ್ಲಿ ವ್ಯಾಪಾರಕ್ಕೆ ಹೋಗುವ ವೇಳೆ ವಸ್ತುಗಳನ್ನ ತೆಗೆದುಕೊಂಡು ಹೋಗುವಾಗ ಸೆಲ್ಫಿ ತೆಗೆದಿದ್ದರು. ಬಾಂಬ್ ಬ್ಲಾಸ್ಟ್ ನಲ್ಲಿ ಸತ್ತಿರುವುದು ಸುಹೇಲ್ ಎಂಬುದಕ್ಕೆ ಖಚಿತತೆ ಇಲ್ಲ ಎಂಬುದು ಕುಟುಂಬದವರ ಅಳಲಾಗಿದೆ.

ಇದನ್ನೂ ಓದಿ-https://suddilive.in/archives/5190

Related Articles

Leave a Reply

Your email address will not be published. Required fields are marked *

Back to top button