ಕ್ರೈಂ ನ್ಯೂಸ್

ಡಾ.ಅರುಣ್ ಕುಮಾರ್ ಹೊಸಕೊಪ್ಪ ಶಿಕ್ಷಕರ ಚುನಾವಣೆ ಅಭ್ಯರ್ಥಿ

ಸುದ್ದಿಲೈವ್/ಶಿವಮೊಗ್ಗ

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ದೂರ ಇದೆ.ಈಗಾಗಲೇ ಮತದಾರರ ನೋಂದಣಿ ಆರಂಬಾಗಿದೆ.‌ ಈ ಮಧ್ಯದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯೊಬ್ಬರು ಚುನಾವಣೆಯ ಪ್ರಚಾರಕ್ಕೆ ಇಳಿದಿದ್ದಾರೆ.‌ ಡಾ.ಅರುಣ್ ಹೊಸಕೊಪ್ಪ ಎಂಬ ತೀರ್ಥಹಳ್ಳಿ ನಿವಾಸಿ ಸುದ್ದಿಗೋಷ್ಠಿ ನಡೆಸಿ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಶಿವಮೊಗ್ಗದಿಂದ ಇದುವರೆಗೂ ಶಿಕ್ಷಕರ ಕ್ಷೇತ್ರದಿಂದ ಗೆದ್ದಿಲ್ಲ. 6 ಜಿಲ್ಲೆಯಿಂದ ನಡೆಯುವ ಚುನಾವಣೆಗೆ ಶಿವಮೊಗ್ಗದಲ್ಲಿ ಮತದಾರರ ಕಡಿಮೆ ನೋಂದಣಿ ಆಗುತ್ತಿದೆ. ದಕ್ಷಿಣ ಕನ್ನಡದಲ್ಲಿ 6 ಸಾವಿರ ಮತದಾರರ ನೋಂದಣಿ ಆದರೆ ಶಿವಮೊಗ್ಗದಲ್ಲಿ 2-3 ಸಾವಿರ ಮತದಾರರು ನೋಂದಣಿ ಆಗುತ್ತಿದೆ ಎಂದು ದೂರಿದರು.

ಇದನ್ನ ಚುನಾವಣೆ ಅಧಿಕಾರಿಗಳು ಗಮನ ಹರಿಸಿ ನೋಂದಣಿ ಹೆಚ್ಚಿಸಬೇಕಿದೆ.‌ ಯಾರು ಮತದಾರರು ನೋಂದಣಿ ಆಗಿಲ್ಲ. ಹೆಚ್ವಿನ‌ ನೋಂದಣಿ ಆಗಬೇಕು. ಎರಡು ಬಾರಿ ಸ್ಪರ್ಧಿಸಿ ವಿಫಲನಾಗಿದ್ದೇನೆ. ವ್ಯಕ್ತಿಯನ್ನ‌ನೋಡಿ ಗೆಲ್ಲಿಸಬೇಕಿದೆ. ಈ ಬಾರಿ ಅವಕಾಶ ಮಾಡಿಕೊಡಿ ಎಂದು ಕೋರಿದರು.

2012 ಮತ್ತು 2018 ರಲ್ಲಿ ಎರಡು ಬಾರಿ ಶಿಕ್ಷಕರ ಕ್ಷೇತ್ರಕ್ಕೆ ಭಾಗಿಯಾಗಿರುವೆ. ಮೊದಲಬಾರಿಗೆ 1500 ಮತಗಳು ಬಿದ್ದಿವೆ. ಡಾಕ್ಟರೇಟ್ ಆಗಿದೆ ಸಂಶೋಧಕನಾಗಿ ಕೆಲಸ ಮಾಡುತ್ತಿರುವುದಾಗಿ ಅರುಣ್ ತಿಳಿಸಿದರು.

ಜೊತೆಗೆ ಸಿನಿಮಾ ನಿರ್ದೇಶಕನಾಗಿದ್ದೇನೆ ಮತ್ತೆ ಮತ್ತೆ ಎಂಬ ಸಿನಿಮಾ‌ಜನವರಿಯಲ್ಲಿ ಬಿಡುಗಡೆಯಾಗುತ್ತಿದೆ. ಜ.19 ರಂದು ಬಿಡುಗಡೆಯಾಗುತ್ತಿದೆ. ಸಾರ್ವಜನಿಕರು ಬೆಂಬಲಿಸುವಂತೆ ಕೋರಿದರು.

ಇದನ್ನೂ ಓದಿ-https://suddilive.in/archives/5185

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373