ರಾಷ್ಟ್ರೀಯ ಸುದ್ದಿಗಳು

ಎಫ್ ಎಂ ರೇಡಿಯೋಗೆ ವರ್ಚ್ಯೂವಲ್ ಮೂಲಕ ಶಂಕುಸ್ಥಾಪನೆ

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ಆಕಾಶವಾಣಿಗೆ 10 ಕಿಲೊವ್ಯಾಟ್‌ ಸಾಮರ್ಥ್ಯದ ಎಫ್‌.ಎಂ ರೇಡಿಯೋ ಪ್ರಸರಣ ಕೇಂದ್ರ ಆರಂಭಿಸಲು ಪ್ರಧಾನಿ‌ ಮೋದಿ ಚೆನ್ನೈ ನಿಂದ ವರ್ಚ್ಯೂವಲ್ ಮೂಲಕ ಶಂಕುಸ್ಥಾಪನೆ ಮಾಡಿದರು.

ಬದಲಾಗುತ್ತಿರುವ ಈ ಯುಗದಲ್ಲಿ ಮೊಬೈಲ್, ಇಂಟರ್ ನೆಟ್ ಹಾಗೂ ಕಂಪ್ಯೂಟರ್‌ನ ಬಳಕೆ ಹೆಚ್ಚುತ್ತಿದ್ದು ಹಿಂದೆ ಬಳಸುತ್ತಿದ್ದ ರೇಡಿಯೋ ಬಳಕೆ ಕಡಿಮೆ ಇದೆ. ಅದರೆ ಕೇಂದ್ರಸರ್ಕಾರದ ಪ್ರಸಾರಭಾರತಿಯು ಆಕಾಶವಾಣಿ ಇಂದಿಗೂ ತನ್ನ ವಿಶ್ವಾಸಾರ್ಹ ಸುದ್ದಿ, ಮನರಂಜನೆ, ಹಾಗೂ ಶಿಕ್ಷಣದ ಪ್ರಸಾರದಲ್ಲಿ ಮೊದಲಸ್ಥಾನದಲ್ಲಿದೆ.

ಈ ಕುರಿತು ನಗರದ ವಿದ್ಯಾನಗರದ್ಲಿರುವ ಸಹ್ಯಾದ್ರಿ ಕಾಲೇಜಿನ ಎದಿರಿನ ಮುಂಭಾಗದಲ್ಲಿ ಶಂಕುಸ್ಥಾಪನೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಸದ ರಾಘವೇಂದ್ರ ಎಲ್ಲ ವಿಷಯ ಮನಗಂಡು ಸುಮಾರು 8ವರ್ಷಗಳ ಹಿಂದೆಯೇ ಮುಂದೆ ಬಂದೊದಗುವ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಆಕಾಶವಾಣಿ ಭದ್ರಾವತಿ ಕೇಂದ್ರದ ಪ್ರಸಾರವನ್ನು FM mode ನಲ್ಲಿ ಪ್ರಸಾರಿಸುವ ಉದ್ದೇಶದಿಂದ ಪ್ರಯತ್ನ ಪ್ರಾರಂಬಿಸಲಾಯಿತು ಎಂದರು.

ಈ ಹಿಂದಿನ ವಾರ್ತಾಸಚಿವರಾದ ಪ್ರಕಾಶ ಜಾವಡೆಕರ ಅವರಿಗೆ ಪ್ರಸ್ಥಾವನೆ ಸಲ್ಲಿಸಲಾಗಿತ್ತು. ಆಗ ಆಕಾಶವಾಣಿ ಭದ್ರಾವತಿಗೆ 1ಕಿಲೋವ್ಯಾಟ ಸಾಮರ್ಥ್ಯದ FM transmitter ಬಂದರೂ ಅದು ಕೇವಲ 20 ಕಿಲೋಮೀಟರ ವರೆಗೆ ಸ್ಪಸ್ಟವಾಗಿ ಕೇಳಿಸುತ್ತಿತ್ತು. ಈಗ 6ತಿಂಗಳ ಹಿಂದೆ ಆಕಾಶವಾಣಿಗೆ ಬೇಟಿ ನೀಡಿದಾಗ ಈ ಹಿಂದೆ ನೀಡಿದ proposal ಚಾಲನೆಗೆ ಬಂದಿಲ್ಲದೇ ಇರುವದು ಗಮನಕ್ಕೆ ಬಂದಿತ್ತು.‌

ನಾನೇ ಖುದ್ದಾಗಿ ಕೇಂದ್ರ ವಾರ್ತಾ ಸಚಿವರಾದ ಅನುರಾಗ ಠಾಕೂರ ಮತ್ತು ಪ್ರಸಾರ ಭಾರತಿ CEO ದ್ವಿವೇದಿ ಅವರನ್ನು ಭೇಟಿಮಾಡಿ ಚರ್ಚಿಸಿ ಈಗ ಸುಮಾರು 9ಕೋಟಿ ಅನುದಾನ ಬಿಡುಗಡೆ ಮಾಡಿ 10ಕಿಲೋವ್ಯಾಟ FM Transmitter ಮಂಜೂರು ಮಾಡಲಾಗಿದೆ. ಪ್ರಧಾನಮಂತ್ರಿ ಮೋದಿಜೀ ಅವರೇ ವರ್ಚುವಲ್ ಮೂಲಕ ಶಂಕುಸ್ಥಾಪನೆ ಮಾಡುತ್ತಿರುವದಕ್ಕೆ ದನ್ಯವಾದಗಳು ಎಂದು ತಿಳಿಸಿದರು.

ಈ 10 ಕಿಲೋವ್ಯಾಟ FM transmitter ನಿಂದ ಆಗುವ ಉಪಯೋಗಗಳು

1. ಇದು ಪೂರ್ಣಪ್ರಮಾಣದ ಕಾರ್ಯಾರಂಭ ಪ್ರಾರಂಬವಾದರೆ ನಾವು ವಾಹನಗಳಲ್ಲಿ ಪ್ರಯಾಣ ಮಾಡುವಾಗ ಶಿವಮೊಗ್ಗದ ಯಾವುದೇ ಮೂಲೆಗೆ ಸುಮಾರು 150ಕಿಲೋಮೀಟರವರೆಗೆ ರೇಡಿಯೋ ಕೇಳಿಕೊಂಡು ಹೋಗಬಹುದು.

2. ಯಾವುದೇ internet ಇಲ್ಲದೇ ನಮ್ಮ ಮೊಬೈನಲ್ಲಿ ಸುತ್ತಲಿನ 8 ಜಿಲ್ಲೆಯಾದ್ಯಂತ ಕಾರ್ಯಕ್ರಮ ಕೇಳಲು ಸಾಧ್ಯ.

3. ನಮ್ಮ ಶಿವಮೊಗ್ಗ ಜಿಲ್ಲೆಯ ಯವ ಪ್ರತಿಭೆಗಳು, ಜಾನಪದ ಕಲಾವಿದರು, ಮಹಿಳೆಯರು, ಮಕ್ಕಳು, ರೈತರು, ತಮ್ಮ ಪ್ರತಿಭೆಗಳನ್ನು ತೋರಿಸಲು ಅನುಕೂಲ.

4. ನಮ್ಮ ಶಿವಮೊಗ್ಗದ ಜಿಲ್ಲೆಯ ಪರಿಚಯ ಸುತ್ತಲಿನ 8 ಜಿಲ್ಲೆಗಳಲ್ಲಿ ತಲುಪುತ್ತದೆ.

5. ಭದ್ರಾವತಿಯಲ್ಲಿಯೇ ಸ್ಪೂಡಿಯೊ ಧ್ವನಿಮುದ್ರಣ ಹಾಗೂ ಪ್ರಸಾರ ಸೇರಿದಂತೆ ಎಲ್ಲವೂ ಇರುವುದರೊಟ್ಟಿಗೆ ಭದ್ರಾವತಿ ಹೆಸರು ಈ ಮೊದಲು ಹಲವು ಕೈಗಾರಿಕೆಯಿಂದ ಪ್ರಸಿದ್ದಿಗೆ ಬಂದಂತೆ ಈಗ ಆಕಾಶವಾಣಿ ಉನ್ನತ ದರ್ಜೆ ಪ್ರಸಾರದಿಂದ ಪುನಃ ಇನ್ನೊಮ್ಮೆ ಪ್ರಸಿದ್ದಿಗೆ ಬರುತ್ತದೆ.

6. ಈ ಪ್ರಸರಣ ಕೇಂದ್ರದಿಂದ ಶಿವಮೊಗ್ಗ, ಚಿಕ್ಕಮಗಳೂರು ದಾವಣಗೆರೆ ಜಿಲ್ಲೆಯ ಎಲ್ಲರಿಗೂ ಚಿತ್ರದುರ್ಗ, ಹಾವೇರಿ, ಹಾಸನ, ತುಮಕೂರು, ಉಡುಪಿ ಜಿಲ್ಲೆಯ ಬಹಳ ತಾಲೂಕುಗಳು, ತುಮಕೂರು ಉತ್ತರಕನ್ನಡದ ಕೆಲ ತಾಲೂಕುಗಳಿಗೂ ಇದರ ಸದುಪಯೋಗವಾಗತ್ತದೆ. ಮತ್ತು ಸುಮಾರು ಈ ಕ್ಷೇತ್ರದ ಶೇಕಡಾ90ರಷ್ಟು ಜನರು ಅಂದರೆ 1ಕೋಟಿ ಜನರಿಗೆ ಇದರ ಉಪಯೋಗ ಸಿಗುತ್ತದೆ.

7. ಈಗಾಗಲೇ SDCCI, ರೈತವೇದಿಕೆ, ರೋಟರಿ, ಶಿಕ್ಷಣಸಂಸ್ಥೆ ಹೊಟೆಲ್ ಸಂಘದವರು ಇದರ ಬೇಡಿಕೆ ಇಟ್ಟಿದ್ದು ಇದು ಸಾಕಾರವಾಗುತ್ತಿದೆ.

8. ಇದು ಕಾರ್ಯಾರಂಭ ಮಾಡಿದ ನಂತರ ಕಡಿಮೆ ಹಣದಲ್ಲಿ ಇವರೆಲ್ಲರೂ ಸಹ ತಮ್ಮ ಜಾಹಿರಾತಿನೊಂದಿಗೆ ಹೆಚ್ಚು ಜನರನ್ನು ಸ್ಥಳೀಯ ಮಟ್ಟದಲ್ಲಿ ತಲುಪಲು ಸಾದ್ಯ.

9. ಈಗ ಈ ಎಲ್ಲ ಭಾಗದವರು mobile App ನಲ್ಲಿ ಕೇಳುತ್ತಲಿದ್ದರು. ಆದರೆ ಇನ್ನು ಮುಂದೆ ರೇಡಿಯೋದೊಟ್ಟಿಗೆ ಮೊಬೈಲ್ ನಲ್ಲಿ ವಾಹನಗಳಲ್ಲಿಯೇ ಸುಲಭವಾಗಿ ಕೇಳಬಹುದು.

ಇದನ್ನೂ ಓದಿ-https://suddilive.in/archives/7206

Related Articles

Leave a Reply

Your email address will not be published. Required fields are marked *

Back to top button