ಕ್ರೈಂ ನ್ಯೂಸ್

ಕುವೆಂಪು ವಿವಿಯ ವೆಬ್ ಸೈಟ್ ಹ್ಯಾಕ್!

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕುವೆಂಪು ವಿವಿಯ ವೆಬ್ ಸೈಟ್ ಹ್ಯಾಕ್ ಆಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ವೆಬ್ ಸೈಟ್ ಹ್ಯಾಕ್ ಆಗಿದೆ.

ಆ್ಯಂಟಿ ಇಸ್ರೇಲ್ ಪ್ಯಾಲೆಸ್ಟೈನ್ ನ ಜಕಾರ್ತಾ ಮೂಲದಿಂದ  ಹ್ಯಾಕ್ ಆಗಿದ್ದು,  ಕಲಿಂಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ಹ್ಯಾಕ್ ಮಾಡಿರುವುದಾಗಿ ತಾವೇ ಹೇಳಿಕೊಂಡಿದ್ದಾರೆ.

ಸೇವ್ ಪ್ಯಾಲೆಸ್ಟೈನ್ – ಇಸ್ರೇಲ್ ಡಾಗ್ ಎಂದು ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ. ಹ್ಯಾಕ್ ಬಳಿಕ ವೆಬ್ ಸೈಟ್ ವಿವಿ ಆಡಳಿತ ಮಂಡಳಿ ಸ್ಥಗಿತಗೊಳಿಸಿದೆ. ಟೆಕ್ನಿಕಲ್ ಟೀಂ ನಿಂದ ವೆಬ್ ಸೈಟ್ ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ.

ಒಂದು ಗಂಟೆಯೊಳಗೆ ಟೆಕ್ನಿಕಲ್ ಸಮಸ್ಯೆ ಸರಿಪಡಿಸುವ ಪ್ರಯತ್ನಿಸಲಾಗಿದೆ. ಈ ಬಗ್ಗೆ ಸಿ.ಇ.ಎನ್. ಪೊಲೀಸ್ ಠಾಣೆಗೆ ಕುವೆಂಪು ವಿವಿ ದೂರು ನೀಡಿದೆ. ಈ ಹಿಂದೆಯೂ  ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ ಆಗಿತ್ತು.

ವಿವಿಯ ಎಲ್ಲಾ ಪರೀಕ್ಷೆಗಳು ಈ ವೆಬ್ ಸೈಟ್ ನಲ್ಲಿ ತಿಳಿಯಲು ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ನಿನ್ನೆ 8 ಗಂಟೆಯಿಂದ ವೆಬ್ ಸೈಟ್ ಹ್ಯಾಕ್ ಆಗಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ-https://suddilive.in/archives/5175

Related Articles

Leave a Reply

Your email address will not be published. Required fields are marked *

Back to top button