ಮಂಡಲ ಪಂಚಾಯತಿ ಮಾಜಿ ಉಪಪ್ರಧಾನ ಬಾವಿಗೆ ಹಾರಿ ಅತ್ಮಹತ್ಯೆ

ಸುದ್ದಿಲೈವ್/ರಿಪ್ಪನ್‌ಪೇಟೆ;

ಮಂಡಲ ಪಂಚಾಯಿತಿ ಮಾಜಿ ಉಪ ಪ್ರಧಾನ ಹಾಗೂ ಬಸವೇಶ್ವರ ವೀರಶೈವ ಸಮಾಜದ ಸ್ಥಳ ದಾನಿ ಡಿ.ಸಿ ಈಶ್ವರಪ್ಪ (76) ಇಂದು ಬೆಳಗ್ಗೆ ಮನೆಯ ಬಳಿಯಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಪತ್ನಿ ಸಾವಿನಿಂದ ಮಾನಸಿಕವಾಗಿ ನೊಂದಿದ್ದ ಈಶ್ವರಪ್ಪ ಇಂದು ಬೆಳಗ್ಗೆ ಈ ರೀತಿಯ ಸಾವಿಗೆ ಶರಣಾಗಿದ್ದಾರೆ.
ಮೃತರಿಗೆ ಮೂರುಜನ ಗಂಡು ಮಕ್ಕಳು ಇದ್ದು ಮೃತರ ಅಂತ್ಯಕ್ರಿಯೆ ಬರುವೆ ಗ್ರಾಮದ ದೊಡ್ಡಿನಕೊಪ್ಪದ ಜಮೀನಿನಲ್ಲಿ ವೀರಶೈವ ಜನಾಂಗದವರ ಸಂಪ್ರಾದಾಯದಂತೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದರು.
ಸಂತಾಪ :
ಮಂಡಲ ಮಾಜಿ ಉಪಪ್ರಧಾನ ಹಾಗೂ ಬಸವೇಶ್ವರ ವೀರಶೈವ ಸಮಾಜದ ಸ್ಥಳದಾನಿ ಡಿ.ಸಿ ಈಶ್ವರಪ್ಪನವರ ಆಕಾಲಿಕ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು,ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್,ಜಿಲ್ಲಾ ಪಂಚಾಯ್ತಿ ಮಾಜಿ ಆಧ್ಯಕ್ಷ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ,ಅರ್ ಎ ಚಾಬುಸಾಬ್ , ಎಂ.ಬಿ.ಲಕ್ಷö್ಮಣಗೌಡರು,ಅಮೀರ್ ಹಂಜಾ,ಬಸವೇಶ್ವರ ವೀರಶೈವ ಸಮಾಜದ ಉಪಾದ್ಯಕ್ಷ ಜಿ.ಎಂ.ದುಂಡರಾಜಪ್ಪಗೌಡ, ಎಂ.ಆರ್.ಶಾಂತವೀರಪ್ಪಗೌಡ,ಆಸೀಫ಼್ ಭಾಷಾ ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-https://suddilive.in/2023/09/30/ಓಂ-ಗಣಪತಿ-ರಾಜಬೀದಿ-ಉತ್ಸವಕ್/
