ಕ್ರೈಂ ನ್ಯೂಸ್

ಸಾಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ! 8 ವರ್ಷದ ಬಾಲಕನಿಗೆ ಗಂಭೀರ ಗಾಯ!

ಸುದ್ದಿಲೈವ್/ಸಾಗರ

ಬೀದಿ ನಾಯಿ ದಾಳಿ ನಡೆಸಿದ ಪರಿಣಾಮ ಎಂಟು ವರ್ಷದ ಮಗುವಿನ ಮುಖಕ್ಕೆ ಹಾಗೂ ಕಣ್ಣಿನ ಸಮೀಪ ಗಂಭೀರ ಗಾಯಗಳಾಗಿರುವ ಘಟನೆ ಸಾಗರದಲ್ಲಿ ನಡೆದಿದೆ.

ಸಾಗರ:ನಗರದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ (Street Dogs) ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲಿ (Roads) ಓಡಾಡುವವರ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ಕೆಲ ಏರಿಯಾದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯ ಪಡುವಂತಾಗಿದೆ.

ಹೌದು, ಕಳೆದ ಎರಡು ದಿನಗಳ ಹಿಂದೆ ಸಾಗರ ನಗರಸಭೆ ವ್ಯಾಪ್ತಿಯ 25ನೇ ವಾರ್ಡಿನಲ್ಲಿ ಎಂಟು ವರ್ಷದ ಬಾಲಕನ ಮೇಲೆ ದಾಳಿ ಮಾಡಿರುವ ಬೀದಿ ನಾಯಿ ಮಗುವಿನ ಮುಖಕ್ಕೆ ಹಾಗೂ ಕಣ್ಣಿನ ಸಮೀಪ ಗಾಯಗೊಳಿಸಿದ್ದೆ. ತಕ್ಷಣ ಸ್ಥಳದಲ್ಲೇ ಇದ್ದ ವ್ಯಕ್ತಿಗಳು ಮಗುವಿಗೆ ನಾಯಿಯಿಂದ ತಪ್ಪಿಸಿ ರಕ್ಷಣೆ ಮಾಡಿದ್ದಾರೆ. ಗಾಯ ಗೊಂಡಿರುವ ಬಾಲಕ ಸಾಗರ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ದುಕೊಂಡು ಮನೆಯಲ್ಲಿ ಇದನ್ನೇ. ಅದೃಷ್ಟವಶಾತ್ ಮಗುವಿಗೆ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

ಕಮೀಷನರ್ ಮಮಾ ನಾಯಿ ಹಿಡಿಸಿ:

ನಾನು ಮನೆಯಿಂದ ಹೊರಗೆ ಹೊದ ಸಂದರ್ಭದಲ್ಲಿ ನಾಯಿ ಬಂದು ಕಚ್ಚಿದೆ ನನಗೆ ತುಂಬಾ ನೋವುಂಟು ಆಗುತ್ತಿದೆ, ಕಮೀಷನ್ ಮಮಾ ನಾಯಿ ಹಿಡಿಸಿ ಎಂದು ಗಾಯಗೊಂಡಿರುವ ಬಾಲಕ ಸಾಗರ ನಗರಸಭೆಯ ಪೌರಾಯುಕ್ತರಿಗೆ ಮನವಿ ಮಾಡಿದ್ದೇನೆ.
ನಮ್ಮ ಏರಿಯಾದಲ್ಲಿ ಇತ್ತಿಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಮ್ಮ ಮಕ್ಕಳನ್ನು ಹೊರಗೆ ಕಳುಹಿಸಲು ತುಂಬಾ ಭಯ ಆಗುತ್ತಿದೆ, ನನ್ನ ಮಗನಿಗೆ ನಾಯಿ ಕಚ್ಚಿದ್ದು ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಆಗಿಲ್ಲ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಬೀದಿ ನಾಯಿಗಳಿಂದ ನಮ್ಮ ಮಕ್ಕಳನ್ನು ರಕ್ಷಣೆ ಮಾಡಬೇಕು ಎಂದು ಗಾಯಗೊಂಡಿರುವ ಬಾಲಕನ ಪೋಷಕರು ಸುದ್ದಿ ಮನೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಸ್ಥಳೀಯ ನಗರಸಭಾ ಸದಸ್ಯ ಸೈಯದ್ ಜಾಕೀರ್ ಮಾತನಾಡಿದ್ದು, ಇದು ಕೇವಲ ನಮ್ಮ ಏರಿಯಾದ ಸಮಸ್ಯೆ ಅಲ್ಲ ಸಾಗರ ನಗರಸಭೆಯ 31 ವಾರ್ಡುಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ , ನಮ್ಮ ವಾರ್ಡಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಚಿಕ್ಕ ಬಾಲಕನ ಮೇಲೆ ನಾಯಿ ದಾಳಿ ಮಾಡಿದೆ , ಈಗಾಗಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಅದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾನೆ ಎಂದು ಹೇಳಿದರು.

ಏನೇ ಆಗಲಿ ಗಾಯ ಗೊಂಡಿರುವ ಮಗುವಿನ ಸಂಪೂರ್ಣ ಚಿಕಿತ್ಸೆ ವೆಚ್ಚ ಸಂಬಂಧಪಟ್ಟ ನಗರಸಭೆಯ ಅಧಿಕಾರಿಗಳು ವಹಿಸಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ-https://suddilive.in/archives/508

Related Articles

Leave a Reply

Your email address will not be published. Required fields are marked *

Back to top button