ಕ್ರೈಂ ನ್ಯೂಸ್

ಗ್ರಾಮದಲ್ಲಿ ಶಾಂತಿ ನೆಲಸಲಿ, ಈ ದ್ವೇಷ ಕೊನೆಗಾಣಲಿ ಎಂದು ಮಹಿಳೆ ಆಗ್ರಹಿಸಿದ್ದೇಕೆ?

ಸುದ್ದಿಲೈವ್/ಹೊಳೆಹೊನ್ನೂರು

ಕುರಿ ಗೂಟಕ್ಕೆ ಕಡಿದಿದ್ದ ಮರದ ವಿಚಾರದಲ್ಲಿ ನಡೆದ ಎರಡು ಕೋಮಿನ ನಡುವೆ ಗಲಾಟೆ ಈಗ ಶಾಂತಿಯಾದರೂ ಊರಿನಲ್ಲಿ ಮಹಿಳೆಯರು ಆತಂಕದಲ್ಲಿದ್ದಾರೆ. ಈ ಪ್ರಕರಣ ಇಲ್ಲಿಗೆ ಶಾಂತಿಯಾಗಬೇಕು. ಇಲ್ಲವಾದಲ್ಲಿ ನಾವೆಲ್ಲಾ ಆತಂಕದಲ್ಲಿ ಬದುಕುವಂತಾಗಿದೆ ಎಂದು ಮಹಿಳೆಯರು ಆಗ್ರಹಿಸಿದ್ದಾರೆ.

ಈಗಾಗಲೇ ಐವರು ಮತ್ತು ಇತರರ ವಿರುದ್ಧ ಎಫ್ಐಆರ್ ಆಗಿದೆ.  ನಾಲ್ವರ.ನ್ನ ವಿಚಾರಣೆಗೆ ಠಾಣೆಗೆ ಕರೆದೊಯ್ಯಲಾಗಿದೆ. ಈ ಗಲಾಟೆಯ ಹಿನ್ನಲೆಯಲ್ಲಿ ಹೊಸ ಜಂಬರಕಟ್ಟೆಯಲ್ಲಿ ಪೊಲೀಸರ ಬಿಗಿಬಂದೋಬಸ್ತ್ ಮಾಡಲಾಗಿದೆ. ಮಸೀದಿ ಮತ್ತು ಗ್ರಾಮದ ಪ್ರವೇಶ ದ್ವಾರದಲ್ಲಿ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಎರಡು ಬಸ್ ಗಳನ್ನ ನಿಯೋಜಿಸಲಾಗಿದೆ.

ಜಂಬರ್ ಕಟ್ಟೆಯ ಮಸೀದಿಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಖಬರ್ ಸ್ಥಾನದ ಬಳಿ ನಿನ್ನೆ ರವಿ ಮತ್ತು ಇತರೆ ಇಬ್ಬರು ಯುವಕರು ಅಕೇಶಿಯ ಮರವನ್ನ ಕಡಿದುಕೊಂಡು ಬಂದ ವೇಳೆ ಗಲಾಟೆಯಾಗಿದೆ. ಈ ವಿಚಾರದಲ್ಲಿ ನಡೆದ ರಾಜಿ ಪಂಚಾಯಿತಿಯಲ್ಲಿ ರವಿ ಮತ್ತು ಇತರರ ಮೇಲೆ‌ ಹಲ್ಲೆಯಾಗಿದೆ ಎಂದು ಆರೋಪಿಸಲಾಗುತ್ತಿದೆ.

ಜಂಬರ್ ಕಟ್ಟೆಯಲ್ಲಿ ಮಹಿಳೆಯರ ಮೇಲೂ ಹಲ್ಲೆ ನಡೆದಿರುವ ಬಗ್ಗೆ ಆರೋಪಿಸಲಾಗಿದೆ. ರವಿ ಮತ್ತು ಇನ್ನಿಬ್ಬರು ಯುವಕರನ್ನ ಹಿಡಿದುಕೊಂಡ ಬಂದ ವೇಳೆ ನೋಡಲು ಹೋದ ಮಹಿಳೆಯರ ಮೇಲೂ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಊರಿನಲ್ಲಿ ಯಾವತ್ತೂ ಕದಡದ ಕೋಮು ಸೌಹಾರ್ಧತೆ ನನ್ನೆ ಕದಡಿದ್ದು ಹೇಗೆ? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.

ನಾಳೆ ಏನೇ‌ಇದ್ದರೂ ಸೌಹಾರ್ಧ ಮೆರೆಯಬೇಕಿದ್ದ ಗ್ರಾಮದಲ್ಲಿ ಗೂಟದ ವಿಚಾರದಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿದೆ.  ಮುಖಂಡರು ದಂಡ ಕಟ್ಟಿಸಿಕೊಂಡಿದ್ದರೂ ಈ ಗಲಾಟೆ ತಣ್ಣಗಾಗಿತ್ತು. ನಮ್ಮನ್ನ ಕಾಲಿನಲ್ಲಿ ತುಳಿದಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಮಹಿಳೆಯರೆಂದೂ ನೋಡದೆ ಹಲ್ಲೆ ನಡೆದಿದೆ. 150 ಕ್ಕೂ ಹೆಚ್ಚು ಜನ ಸರಪಳಿ ಕಟ್ಟಿಕಡು ಥಳಿಸಿದ್ದಾರೆ. ನಾಳೆ ಬೇರೆ ರೀತಿ ಆದರೆ ಯಾರೂ ಬರಬೇಕು. ನಾವೇ ಬರಬೇಕು. ದ್ವೇಷ ಆಗಬಾರದು. ಇದು ಇಲ್ಲಿಗೆ ಕೊನೆಯಾಗಬೇಕು ಎಂದು ಆಶಾ ಎಂಬ ಮಹಿಳೆ ಆಗ್ರಹಿಸಿದ್ದಾರೆ.

ಆರೋಪ ಪಟ್ಟಿಯಲ್ಲಿ ಓರ್ವ ಬಾಲಾಪರಾದಿಯಿದ್ದಾನೆ. ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ರವಿ ಈ ಕುರಿತು ಮಾತನಾಡಿ, ಗ್ರಾಮದಲ್ಲಿ ಗಣೇಶ ಹಬ್ಬ ಮತ್ತು ಇತರೆ ಹಿಂದೂ ಹಬ್ಬಗಳಲ್ಲಿ ಮೈಕ್ ಹಾಕಿರುವ ವಿಚಾರದಲ್ಲಿ ಮಾತಿನ ಚಕಾಮಕಿ ಆಗಿದ್ದು, ಮುಂದುವರೆದ ವಿಷಯವಾಗಿ ನಿನ್ನೆ ಗೂಟದ ವಿಚಾರದಲ್ಲಿ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-https://suddilive.in/archives/8441

Related Articles

Leave a Reply

Your email address will not be published. Required fields are marked *

Back to top button