ಸ್ಥಳೀಯ ಸುದ್ದಿಗಳು

ದುರ್ಗಿಗುಡಿಯಿಂದ 55 ನೇ ವರ್ಷದ ಕನ್ನಡ ರಾಜ್ಯೋತ್ಸವ

ಸುದ್ದಿಲೈವ್/ಶಿವಮೊಗ್ಗ/20/12/2023

ದುರ್ಗಿಗುಡಿ ಕನ್ನಡ ಸಂಘದ ವತಿಯಿಂದ ಇಂದು ರಾಜ್ಯೋತ್ಸವದ ಅಂಗವಾಗಿ ರಾಮಣ್ಣಶ್ರೇಷ್ಟಿ ಪಾರ್ಕ್ನಿಂದ ಶ್ರೀ ಭುವನೇಶ್ವರಿ ದೇವಿಯ ಅದ್ಧೂರಿ
ಮೆರವಣಿಗೆ ನಡೆಯಿತು.

ಗಾಂಧೀ ಬಜಾರ್ ಮಾರ್ಗವಾಗಿ ಹೊರಟ ಮೆರವಣಿಗೆ ವೀರ ಶಿವಪ್ಪ ನಾಯಕರ ಪ್ರತಿಮೆಗೆ
ಪುಷ್ಪಹಾರ ಸಲ್ಲಿಸಿ ನಂತರ ದುರ್ಗಿಗುಡಿಗೆ ಬಂದು ಸೇರಿತು. ಮೆರವಣಿಗೆಯಲ್ಲಿ ಕಲಾ
ತಂಡಗಳು ಭಾಗವಹಿಸಿದ್ದವು. ದುರ್ಗಿಗುಡಿ ರಸ್ತೆಯಲ್ಲಿ ನಿರ್ಮಿಸಿರುವ ವೀರ ಶಿವಪ್ಪನಾಯಕ ಭವ್ಯ ಮಂಟಪ ದಲ್ಲಿ ಡಿ.೨೦ರಿಂದ ೨೪ರವರೆಗೆ ೫೫ನೇ ವರ್ಷದ ಕನ್ನಡ ರಾಜ್ಯೋತ್ಸವನ್ನು ವಿಜೃಂಭಣೆ ಯಿಂದಆಚರಿಸಲಾಗುವುದು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಯೂರ, ಗೌರವಾಧ್ಯಕ್ಷಜಿ.ಪದ್ಮನಾಭ್, ಕಾರ್ಯದರ್ಶಿ ಸ.ನ. ಮೂರ್ತಿ, ಖಜಾಂಚಿ ಮನೋಜ್, ನಿರ್ದೇಶಕರುಗಳಾದಚಂದ್ರಶೇಖರ್, ಲಿಂಗರಾಜ್, ಸುಧೀರ್, ಹರೀಶ್, ವೇಣುಗೋಪಾಲ್, ಶಿವು, ಕಿರಣ್‌ಕುಮಾರ್,

ರಾಘವೇಂದ್ರ, ಗೋವಿಂದರಾಜ್, ತೇಜುಕುಮಾರ್, ಗುರು, ನರಸಿಂಹ ಗಂಧದಮನೆ
ಮುಂತಾದವರು ಇದ್ದರು.

ಇದನ್ನೂ ಓದಿ-https://suddilive.in/archives/5127

Related Articles

Leave a Reply

Your email address will not be published. Required fields are marked *

Back to top button