ಸ್ಥಳೀಯ ಸುದ್ದಿಗಳು

ರಾಘಣ್ಣ ನಾಮಪತ್ರ ಸಲ್ಲಿಕೆ

ಸುದ್ದಿಲೈವ್/ಶಿವಮೊಗ್ಗ

ಮತ್ತೊಮ್ಮೆ ಸ್ಪರ್ಧೆ ಬಯಸಿ ಸಂಸದ ರಾಘವೇಂದ್ರರ ನಾಮಪತ್ರ ಸಲ್ಲಿಕೆಯ ಬೃಹತ್ ಮೆರವಣಿಗೆಯು ರಾಮಣ್ಣ‌ಶ್ರೇಷ್ಠಿ ಪಾರ್ಕಿನಿಂದ ಭರ್ಜರಿಯಾಗಿ ಹೊರಟಿದೆ.
.
ಉರಿಬಿಸಿಲನ್ನೂ ಲೆಕ್ಕಿಸದೆ ಜನಸ್ತೋಮದ ನಡುವೆ ತೆರದ ವಾಹನದಲ್ಲಿ ಹೊರಟ ಸಂಸದ ರಾಘವೇಂದ್ರ ಅವರ ಮೆರವಣಿಗೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ಮಾಳವೀಕ, ಕುಮಾರ ಬಂಗಾರಪ್ಪ ಮೊದಲಾದವರು ಸಾಥ್ ನೀಡಿದ್ದಾರೆ.

ಜನರು ಎರವಣಿಗೆಯಲ್ಲಿ ಇರುವ ಬದಲು ಬಿಸಿಲಿನ‌ ಬೇಗೆಗೆ ಚದುರಿ ನಿಂತಿದ್ದಾರೆ. ಕಸ್ತೂರ ಬಾ ಕಾಲೇಜಿನ ಬಳಿ ಬಹಿರಂಗ ಸಭೆ ನಡೆಯಲಿದೆ. ಅಲ್ಲಲ್ಲಿ ಜೆಸಿಬಿ ನಿಲ್ಲಿಸಿ ಹೂವಿನ ಹಾರ ಹಾಗೂ ಹಣ್ಣಿನ ಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಜಿದ್ದಿಗೆ ಬಿದ್ರಾ ಪಕ್ಷಗಳು?

ಜನ ಸೇರಿಸುವ ಭರಾಟೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಜಿದ್ದಿಗೆ ಬಿದ್ದಂತೆ ಕಾಣಿಸುತ್ತಿದೆ. ಏ.12 ರಂದು ಈಶ್ವರಪನವರ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಸೇರಿಸಿದ ಜನಸ್ತೋಮ ನೋಡಿ ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಹೆಚ್ಚಿನ ಜನರನ್ನ ಸೇರಿಸುವ ಪ್ರಯತ್ನ ನಡೆದಿತ್ತು.

ಗೀತಾ ಶಿವರಾಜ್ ಕುಮಾರ್ ಅವರ ನಾಮಪತ್ರ ಸಲ್ಲಿಕೆಯಲ್ಲಿ ಸೇರಿದ ಜನಸ್ತೋಮಕ್ಕೆ ಟಕ್ಕರ್ ನೀಡುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಜನ ಸೇರಿಸಲಾಗಿದೆ. ಜನ ಮಾತ್ರ ಬಿಸಿಲಿನಲ್ಲಿ ಹೈರಾಣ್ ಆಗಿದ್ದಾರೆ.

ರಾಘಣ್ಣ ನಾಮಪತ್ರ ಸಲ್ಲಿಕೆ

ಈ ನಡುವೆ ಸಂಸದ ರಾಘವೇಂದ್ರ ಎರಡು ನಮಪತ್ರ ಸಲ್ಲಿಕೆ ಮಾಡಿದ್ದಾರೆ. ರಾಘವೇಂದ್ರ ಮಾತನಾಡಿ, ಬಂದ ಜನರು ಮೋದಿಗೆ ಬೆಂಬಲಿತರಾಗಿ ಸಹಕಾರ ನೀಡಿದ್ದಾರೆ. ಜೆಡಿಎಸ್ ನ ಸಹಕಾರ ಸಿಕ್ಕಿದೆ. ಕಳೆದ ಜನಸ್ತೋಮ ಹೆಚ್ಚಾಗಿದೆ. ಎದುರಾಳಿ ಬಗ್ಗೆ ತಲೆಕೆಡೆಸಿಕೊಂಡಿಲ್ಲ.

ಟೀಕೆ ಟಿಪ್ಪಣಿ ಬರ್ತಾ ಇದೆ. ಅಪಪ್ರಚಾರ ನಡೆಇತ್ತಿದೆ. ಹಗೂರವಾಗಿ ಮಾತನಾಡುತ್ತಿರುವುದು ಆಶೀರ್ವಾದವಾಗಿ ಪಡೆದುಕೊಂಡಿದ್ದೇನೆ. ಅನೇಕ ಕಾಂಗ್ರೆಸ್ ನವರು ನ ಬಿಜೆಪಿಗೆ ಬರ್ತಾ ಇದ್ದಾರೆ. ಶಿಕಾರಿಪುರ ಮತ್ತು ಸಾಗರದಿಂದ ಜನ ಬರ್ತಾ‌ಇದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/13081

Related Articles

Leave a Reply

Your email address will not be published. Required fields are marked *

Back to top button