ರಾಜ್ಯ ಸುದ್ದಿಗಳು

ಶಬರಿಮಲೆಯಿಂದ ವಾಪಾಸ್ ಆಗುವರು ಹೋಂ ಐಸೋಲೇಷನ್ ಗೆ ಸೂಚನೆ-ಡಿಹೆಚ್ ಒ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣ ಜಾಸ್ತಿಯಿದ್ದವು. ಕಳೆದ ತಿಂಗಳಿನಿಂದ ಡೆಂಗ್ಯು ಪ್ರಕರಣ ಕಡಿಮೆಯಾಗಿವೆ. ಡೆಂಗ್ಯು ಪ್ರಕರಣಕ್ಕೆ ಯಾವುದೇ ಸಾವು ಆಗಿಲ್ಲ. ಆದರೆ ಕಳೆದ ನಾಲ್ಕೈದು ದಿನಗಳಿಂದ ಕೋವಿಡ್ ಮಹಾಮಾರಿ ಕರ್ನಾಟಕಕ್ಕೆ ಬೀಸುತ್ತಿದೆ.

ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿವೆ ಎಂಬ ಬಗ್ಗೆ ಮಾಧ್ಯಮದಲ್ಲಿ ನೋಡುತ್ತಿದ್ದೇವೆ. ಉತ್ತರ ಭಾರತದಲ್ಲಿ, ದೆಹಲಿ, ಕಾಶ್ಮೀರ ಪಾಕಿಸ್ತಾನದಲ್ಲಿ ಕೋವಿಡ್ ಬಹಳ ಆಗ್ತಿದೆ ಎನ್ನುವ ಮಾಹಿತಿ ಬರುತ್ತಿದೆ. ಕೋವಿಡ್ ಆತಂಕ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಹೇಗಿದೆ ಎಂಬುದರ ಬಗ್ಗೆ ಡಿಹೆಚ್ ಒ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಮಯದಲ್ಲಿ ವೈರಲ್ ಫ್ಯುವರ್ ಜಾಸ್ತಿ ಇರುತ್ತದೆ. ಜ್ವರ ಬಂದರೆ ತಾವೇ ಸ್ವತಃ ಔಷಧಿ ಖರೀದಿಸಬಾರದು. ಈ ಬಗ್ಗೆ ಸಿಬ್ಬಂದಿ ಮೂಲಕ ಜಾಗೃತಿ ಮೂಢಿಸಲಾಗುತ್ತಿದೆ. ಜ್ವರ 24 ಗಂಟೆಯೊಳಗೆ ಕಡಿಮೆಯಾಗದಿದ್ದರೆ ವೈದ್ಯರ ಸಲಹೆ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಜ್ವರ ಬಂದವರು ಮಾಸ್ಕ್ ಹಾಕಿಕೊಳ್ಳಬೇಕು.‌ ಸಾರ್ವಜನಿಕ ಸ್ಥಳದಲ್ಲಿ ಓಡಾಡುವುದು ನಿಯಂತ್ರಣ ಮಾಡಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್‌ ತುಂಬಾ ಚನ್ನಾಗಿ ಆಗಿದೆ. ಅವಶ್ಯಕತೆ ಇರುವವರಿಗೆ ಪರೀಕ್ಷೆ ಮಾಡ್ತಿದ್ದೇವೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಕಾಲ ಕಾಲಕ್ಕೆ ಬರುವ ನಿಯಾಮವಳಿ ಅನುಸರಿಸಬೇಕು ಎಂದು ಡಿಹೆಚ್ ಒ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯ 1200 ಬೆಡ್ ಇದೆ. 1 ಸಾವಿರ ಬೆಡ್ ಗೆ ಆಕ್ಸಿಜನ್ ಇದೆ. 35 ಐಸಿಯು ಬೆಡ್ ಇದೆ. ಶಿವಮೊಗ್ಗ ಜಿಲ್ಲೆಯ ತಾಲೊಕು ಆಸ್ಪತ್ರೆಗಳಲ್ಲು ಆಕ್ಸಿಜನ್ ಬೆಡ್ ಇದೆ. ಶಬರಿಮಲೆಗೆ ಹೋಗಿ ಬಂದವರು ಹೋಂ ಐಸೋಲೇಷನ್ ಗೆ ಒಳಗಾಗಬೇಕು ಅಂತಾ ಸೂಚಿಸಿದ್ದೇವೆ ಎಂದರು.

ಇದನ್ನೂ ಓದಿ-https://suddilive.in/archives/5062

Related Articles

Leave a Reply

Your email address will not be published. Required fields are marked *

Back to top button