ಕ್ರೈಂ ನ್ಯೂಸ್

ಮನೆ ಕಳ್ಳತನ ಮಾಡುತಿದ್ದವರನ್ನು ಹೆಡೆಮುರಿ ಕಟ್ಟಿದ ಸಾಗರ ಪೋಲಿಸ್ ಇಲಾಖೆ

ಸುದ್ದಿಲೈವ್/ಸಾಗರ

ಮನೆಗಳವು ಪ್ರಕರಣವನ್ನ‌ ಸಾಗರದ ಪೊಲೀಸರು ಬೆನ್ನತ್ತಿ‌ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನ ಪತ್ತೆಹಚ್ಚಿದ್ದಾರೆ. ಉಳಿದ ಆರೋಪಿಗಳಿಗೆ ಬಲವಾದ ಬಲೆ ಬೀಸಿದ್ದಾರೆ.

ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, ಸಾಗರ ಪೇಟೆ ಠಾಣೆ ಮತ್ತು ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಮನೆ ಕಳ್ಳತನ ಪ್ರಕರಣಗಳು ಮೇಲಿಂದ ಮೇಲಿಗೆ ದಾಖಲಾಗಿದ್ದು ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ಮಿಥುನ್ ಕುಮಾರ್ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು‌.

ಗೋಪಾಲಕೃಷ್ಣ ನಾಯ್ಕ ಟಿ. ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗರವರ ಸಾರಥ್ಯದಲ್ಲಿ ರಚಿಸಿ, ಆ ವಿಶೇಷ ತಂಡದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟ‌ರ್ ಮಹಾಬಲೇಶ್ವರ ನಾಯ್ಕ್ಎಸ್.ಎನ್, ಪಿಎಸ್‌ಐ ಶ್ರೀಮತಿ ಸುಜಾತ ಮತ್ತು ಆನಂದಪುರ ಪೊಲೀಸ್ ಠಾಣಾ ಪಿಎಸ್‌ಐ ಯುವರಾಜ್ ಹಾಗೂ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಸಿಹೆಚ್‌ಸಿ, 66 ಶ್ರೀ ಸನಾವುಲ್ಲಾ, ಸಿಹೆಚ್‌ಸಿ 299 ಷೇಖ್ ಫೈರೋಜ್ ಅಹಮದ್ ಸಿಪಿಸಿ 1361 ರವಿಕುಮಾರ್ ರವರು ಈ ಪ್ರಕರಣದ ಜಾಡನ್ನು ಪತ್ತೆ ಹಚ್ಚಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಯಾದ ಶಿವಮೊಗ್ಗ ಟಿಪ್ಪುನಗರದ ತೌಸಿಪ್ @ ಬಾಯಿಜಾನ್ (25) ರನ್ನ ಬಂಧಿಸಲಾಗಿದೆ. ಕರ್ಕಿಕೊಪ್ಪದ ಗಗನ್, ಗಿರಿಗಾರು ನಿವಾಸಿಯ ಶ್ರೀಮತಿ‌, ತೋರುಗೋಡು ಶಿರವಾಳ ನಿವಾಸದ ರಾಮಚಂದ್ರ, ಬಳಸಗೋಡು ರೇಣುಕಮ್ಮ‌ ಮತ್ತು ಸಾಗರದ ನಗರ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಸೇರಿ ಒಟ್ಟು 8 ಮನಗಳ್ಳತನ ಪ್ರಕರಣ ದಾಖಲಾಗಿದ್ದವು.

8 ಕ್ಕೆ 8 ಮನೆಗಳವು ಪ್ರಕರಣದಲ್ಲಿ ಆರೋಪಿತನಿಂದ 5.70.000/- ರೂ ಬೆಲೆ ಬಾಳುವ ಸುಮಾರು 100 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 62.400/- ರೂ ಬೆಲೆ ಬಾಳುವ ಸುಮಾರು 1 ಕೆ.ಜಿ ಬೆಳ್ಳಿ ಆಭರಣಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ಮೇಲ್ಕಂಡ ಆರೋಪಿಯ ಸಹಚರರು ತಲೆ ಮರೆಸಿಕೊಂಡಿದ್ದು, ಸದರಿ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರುಗಳಿಂದಲೂ ಬೆಲೆ ಬಾಳುವ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಬೇಕಾಗಿದೆ.  ಆರೋಪಿಗಳ ಪತ್ತೆ ಬಗ್ಗೆ ವಿಶೇಷ ತಂಡವನ್ನು ರಚಿಸಲಾಗಿರುತ್ತದೆ. ಈ ಆರೋಪಿಯನ್ನು ಪತ್ತೆ ಹಾಗೂ ಕಳುವಾದ ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿ ಅಭಿನಂದನೆ ಸಲ್ಲಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/5058

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373