ಕ್ರೈಂ ನ್ಯೂಸ್

ಬರೋಬ್ಬರಿ ಒಂದು ತಿಂಗಳಿಗೆ ಸಂದೀಪ್ ಕಮ್ ಬ್ಯಾಕ್..!

ಸುದ್ದಿಲೈವ್/ಶಿವಮೊಗ್ಗ

ಬರೋಬ್ಬರಿ ಒಂದು ತಿಂಗಳ ಅಂತರದಲ್ಲಿ ಸಾರ್ವಜನಿಕರ ಹಿತಾಸಕ್ತಿಯ ಮೇಲೆ ವರ್ಗಾವಣೆಯಾಗಿದ್ದ ಪೊಲೀಸರೊಬ್ಬರು ಮತ್ತೆ ಅದೇ ಠಾಣೆಗೆ ಕೆಲಸಕ್ಜೆ ಹಾಜರಾಗಿರುವುದು ಕುತೂಹಲ ಮೂಡಿಸಿದೆ.

ಬರೋಬ್ಬರಿ ಒಂದು ತಿಂಗಳ ಹಿಂದಷ್ಟೆ ಸಾರ್ವಜನಿಕ ಹಿತಾಸಕ್ತಿಯ ಮೇಲೆ ಸಿಇಎನ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ರನ್ನ ಹೊಸನಗರ ತಾಲೂಕಿನ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ವರ್ಗಾವಣೆಗೊಂಡ ಒಂದು ತಿಂಗಳ ಅಂತರದಲ್ಲಿ ನಗರ ಠಾಣೆಯಿಂದ ಸಿಇಎನ್ ಗೆ ಅವರನ್ನ ವರ್ಗಾಯಿಸಲಾಗಿದೆ.

ಈ ವರ್ಗಾವಣೆಯ ಹಿನ್ನಲೆಯ ಬಗ್ಗೆ ಇನ್ನೂ ಹೊರಗೆ ಬರಬೇಕಿದೆ. ಒಂದು ತಿಂಗಳ ಹಿಂದೆ ಎಸ್ಪಿ ಮಿಥುನ್ ಕುಮಾರ್ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಸಿಇಎನ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮರ್ಧನ್ ಕಿರಾವಡಿ, ಸಮಿವುಲ್ಲಾ ಮತ್ತು ಸಂದೀಪ್ ರನ್ನ ಒಳಗೊಂಡಂತೆ ಜಿಲ್ಲೆಯ 18 ಪೊಲೀಸ್ ಠಾಣೆಯ ದಫೇದಾರ್ ಗಳ ವರ್ಗಾವಣೆ ಮಾಡಿ ಆದೇಶಿಸಿದ್ದರು.

ಸಿಇಎನ್ ಠಾಣೆಯ ಮರ್ಧನ್, ಸಮೀವುಲ್ಲಾ ಮತ್ತು‌ ಸಂದೀಪ್ ರನ್ನ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ವರ್ಗಾವಣೆ ಮಾಡಿರುವುದಾಗಿ ಉಲ್ಲೇಖಿಸಿ ಆದೇಶ ಹೊರಬಿದಿತ್ತು. ಆದರೆ ದಿಡೀರ್ ಅಂತ ಒಂದು ತಿಂಗಳ ಅವಧಿಯಲ್ಲಿ ಸಂದೀಪ್ ಮತ್ತೆ ಸಿಇಎನ್ ಠಾಣೆಗೆ ವರ್ಗಾವಣೆಯಾಗಿರುವುದು ಕುತೂಹಲ‌ಮೂಡಿಸಿದೆ.

18 ಜನ ದಫೇದಾರ್ ಗಳಲ್ಲಿ ಈ‌ಮೂವರನ್ನ ಹೊರತು ಪಡಿಸಿ ಉಳಿದ 15 ಜನರನ್ನ ಕೋರಿಕೆ ಮೇರೆಗೆ ವರ್ಗಾಯಿಸಲಾಗಿತ್ತು. ಆದರೆ ಸಂದೀಪ ಅವರ ಕಮ್ ಬ್ಯಾಕ್ ಕುತೂಹಲ ಮೂಡಿಸಿದೆ. ಇದರ ಹಿಂದಿನ ಕೈಗಳು, ಹಿತಾಸಕ್ತಿಗಳು ಏನು ಎಂಬುದು ತಿಳಿಯಬೇಕಿದೆ. ಉಳಿದಿಬ್ಬರೂ ಯಾವಾಗ ವಾಪಾಸ್ ಆಗುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಸಾರ್ವಜನಿಕ‌ ಹಿತಾಸಕ್ತಿ, ಮುಂಬಡ್ತಿ ಎಲ್ಲವೂ ಒಂದಿಷ್ಟು ಹಿತಾಸಕ್ತಿಯರ ಕೈಯಲ್ಲಿದೆ ಎಂಬುದು ಮಾತ್ರ ಕಹಿ ಸತ್ಯ..!

ಇದನ್ನೂ ಓದಿ-https://suddilive.in/archives/5048

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373