ಸ್ಥಳೀಯ ಸುದ್ದಿಗಳು

ಸಂಸತ್ ಮೇಲೆ ದಾಳಿ-ಸಂಸದ ಮತ್ತು ಗೃಹ ಸಚಿವರ ಪ್ರತಿಕೃತಿ ದಹನ

ಸುದ್ದಿಲೈವ್/ಶಿವಮೊಗ್ಗ

ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ದಾಳಿ ಖಂಡಿಸಿ ಇಂದು ಜಿಲ್ಲಾ ಕಾಂಗ್ರೆಸ್ ಪ್ರತಿಭಟಸಿದೆ. ಸಂಸತ್ ಮೇಲೆ ದಾಳಿ ನಡೆಸಲು ಮೈಸೂರಿನ ಸಂಸದ ಪ್ರತಾಪ್ ಸಿಂಹನವರೇ ಕಾರಣ ಎಂದು ಪಕ್ಷದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದ್ದಾರೆ.

ಮಾಧ್ಯಮಕ್ಕೆ ಮಾತನಾಡಿದ ಅವರು, ಸಂಸತ್ ಮೇಲೆ ದಾಳಿ ನಡೆಸಲು ಒಂದು ವರೆ ವರ್ಷದಿಂದ ದಾಳಿಗೆ ಪ್ಲಾಮ್ ಮಾಡಲಾಗಿದೆ. 92 ಸಂಸತ್ ರನ್ನ ಅಮಾನತು ಪಡಿಸಲಾಗಿದೆ.‌ಬಿಜೆಪಿಯವರ ಮೇಲೆ ನಡೆಯುತ್ತಿದೆ. ಮನೋರಂಜನ್ ಮೋದಿಯನ್ನ ದೇವರು ಎನ್ನುತ್ತಿದ್ದ ಎಂದು ದಾಳಿ ನಡೆಸಲಾಗಿದೆ ಎಂದು ಅವರ ತಂದೆ ಹೇಳಿಕೆ ನೀಡಿರುವುದು ಈ ಎಲ್ಲಾ ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹರನ್ನ ವಜಾಗೊಳಿಸಬೇಕು. ಪಾಸ್ ಕೊಟ್ಟಸಂಸತ್ ರನ್ನ ವಜಾಗೊಳಿಸದ ಅಮಿತ್ ಶಾರವರೇ ರಾಜೀನಾಮೆ ನೀಡಬೇಕು. ದೇಶದ ಭದ್ರತೆಯಿಂದ ನ್ಯಾಯಾಂಗ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ಪಕ್ಷದ ಕಚೇರಿಯಿಂದ ನಡೆದುಕೊಂಡು ಬಂದು ಗೋಪಿ ವೃತ್ತದ ಬಳಿ ಪ್ರತಿಭಟಿಸಿದ್ದಾರೆ. ಗೋಪಿ ವೃತ್ತದ ಬಳಿ ಸಂಸದ ಪ್ರತಾಪ ಸಿಂಹ ಅವರ ಭಾವಚಿತ್ರವಿರುವ ಬ್ಯಾನರ್ ಗೆ ಚಪ್ಪಲಿಯಲ್ಲಿ ಹೊಡೆದು ನಂತರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರತಾಪ್ ಸಿಂಹನವರ ಫೋಟೊವಿರುವ ಬ್ಯಾನರ್ ನ್ನ ಸುಡಲಾಯಿತು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶ, ನಾರ್ತ್ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಜಿ.ಡಿ ಮಂಜುನಾಥ್, ಮಾರ್ಟಿನ್ ಮೊದಲಾದವರು ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/5044

Related Articles

Leave a Reply

Your email address will not be published. Required fields are marked *

Back to top button