ಸ್ಥಳೀಯ ಸುದ್ದಿಗಳು

ಸ್ಥಳಕ್ಕೆ ಡಿಸಿ, ಎಸ್ಪಿ ಬರುವಂತೆ ವಕೀಲರ ಪಟ್ಟು-ಗೋಪಿ ವೃತ್ತದ ಬಳಿ ವಕೀಲರ ಭರ್ಜರಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದನ್ನ ಖಂಡಿಸಿ ಇಂದು ಶಿವಮೊಗ್ಗದ ಬಾರ್ ಅಸೋಸಿಯೇಷನ್ ನ್ಯಾಯಾಂಗ ಕಲಾಪ ಬಹಿಷ್ಕರಿಸಿ ಗೋಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. ಜಿಲ್ಲಾ ರಕ್ಷಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವಂತೆ ಪ್ರತಿಭಟಿಸಲಾಯಿತು.

ಚಿಕ್ಕಮಗಳೂರಿನ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್, ಅಸಿಸ್ಟೆಂಟ್ ಸಬ್ ಇನ್ ಸ್ಪೆಕ್ಟರ್ ಮತ್ತು ಪೊಲೀಸ್ ಇತರೆ ಸಿಬ್ಬಂದಿಗಳ ಲಾಠಿ ದೊಣ್ಣೆಯಿಂದ ವಕೀಲರ ಸಂಘದ ಸದಸ್ಯ ಪ್ರೀತಮ್ ಇವರಿಗೆ ಕ್ಷುಲ್ಲಕ ಕಾರಣಕ್ಕೆ ಥಳಿಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಹಿರೇಕೆರೆಯಲ್ಲಿ ಸೊರಬದಲ್ಲಿ ವಕೀಲರ ಮೇಲೆ ಹಲ್ಲೆ ನಡೆಸಲಾಗಿದೆ. ಪದೇ ಪದೇ ಈ ರೀತಿ ಹಲ್ಲೆ ನಡೆಯಿತ್ತಿರುವುದರಿಂದ ಕರ್ನಾಟಕ ಸರ್ಕಾರ ವಕೀಲರ ರಕ್ಷಣ ಕಾಯ್ದೆಯನ್ನ ಜಾರಿಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಹಲ್ಲೆ ನಡೆಸಿದ ಪೊಲೀಸರನ್ನ ಕೆಲಸದಿಂದ ವಜಾಗೊಳಿಸಬೇಕು. ನ್ಯಾಯಗ ಬಂಧನಕ್ಕೆ ಹಲ್ಲೆ ನಡೆಸಿದವರನ್ನ ಒಳಪಡಿಸಬೇಕೆಂದು ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಲು ಜಿಲ್ಲಾ ರಕ್ಷಣಾಧಿಕಾರಿ ಬರುವ ವರೆಗೆ ಪ್ರತಿಭಟನೆ ನಡೆಸಲು ಪಟ್ಟು

ಪ್ರತಿಭಟನೆ ಸ್ಥಳಕ್ಕೆ ಬಂದ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ಕುಮಾರ್ ಭೂಮರೆಡ್ಡಿ,  ಡಿವೈಎಸ್ಪಿ ಸುರೇಶ್ ಜಯನಗರ ಪಿಐ  ಸಿದ್ದೇಗೌಡರು ಸ್ಥಳಕ್ಕೆ ಬಂದಾಗ ವಕೀಲರು ಪ್ರತಿಭಟನೆ ಮಾಡಲು ಅವಕಾಶ ಪಡೆದಿಲ್ಲ.  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಮಾತ್ರ ಅವಕಾಶ ಪಡೆದಿದ್ದಾರೆ ಎಂದು ಹೇಳಿದ ತಕ್ಷಣ ವಕೀಲರ ಆಕ್ರೋಶ ಹೊರಬಿದ್ದಿದೆ.  ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಬಂದು ಮನವಿ ಸ್ವೀಕರಿಸುವಂತೆ ಆಗ್ರಹಿಸಲಾಗಿದೆ.

ನೆಹರೂ ಕ್ರೀಡಾಂಗಣದಲ್ಲಿರು ಎಸ್ಪಿ ಅವರು ಮತ್ತು ಡಿಸಿನೂ  ಬಿಸಿಲಿನಲ್ಲಿ ಪ್ರತಿಭಟನುಸತ್ತಿರುವ ವಕೀಲರ ಮನವಿ ಸ್ವೀಕರಿಸಲು ಗೋಪಿವೃತ್ತಕ್ಕೆ ಬರಲು ಆಗಲಿಲ್ಲ ಎಂದರೆ ಹೇಗೆ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಲಾಯಿತು.

ವಕೀಲರ ಜೊತೆ ಬೈಕ್ ಸವಾರ ಮಾತಿನ ಜಟಾಪಟಿ

ಗೋಪಿ ವೃತ್ತದಲ್ಲಿ ವಕೀಲರು ಮಾನವ ಸರಪಳಿ ನಿರ್ಮಿಸಿ ಸುಮಾರು 1½ಗಂಟೆಯಿಂದ  ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಬೈಕ್ ಸವಾರ ಹೀಗೆ ಪ್ರತಿಭಟನೆ ಮಾಡಿದರೆ ಸಾರ್ವಜನಿಕರು ಓಡಾಡುವುದಾಗಿ ಹೇಗೆ ಎಂದು ವಕೀಲರನ್ನ ಪ್ರಶ್ನಿಸಿದ್ದಾನೆ. ನಮ್ಮವರ ಮೇಲೆ ಹಲ್ಲೆ ನಡೆದರೆ ಸಾರ್ವಜನಿಕರ ಮೇಲೆ ಆದ ಹಲ್ಲೆ ಆದಂತೆ ಆಗಿದೆ ಎಂದು ವಕೀಲರು ಉತ್ತರಿಸಿದ ಪ್ರಸಂಗ ಕಂಡುಬಂದಿದೆ.‌

ಇದನ್ನೂ ಓದಿ-https://suddilive.in/archives/4039

Related Articles

Leave a Reply

Your email address will not be published. Required fields are marked *

Back to top button