ಸ್ಥಳೀಯ ಸುದ್ದಿಗಳು
ಜೈಲ್ ನಲ್ಲಿದ್ದ ಖೈದಿ ಅನಾರೋಗ್ಯ ಹಿನ್ನಲೆ ಸಾವು

ಸುದ್ದಿಲೈವ್/ಶಿವಮೊಗ್ಗ

ಜೈಲಿನಲ್ಲಿದ್ದ ಸಜಾಬಂದಿ ಖೈದಿಯೊಬ್ಬ ಅನಾರೋಗ್ಯ ಹಿನ್ಬಲೆಯಲ್ಲಿ ಸಾವುಕಂಡಿರುವುದಾಗಿ ತಿಳಿದುಬಂದಿದೆ.
ಜೈಲಿನಲ್ಲಿ ರಾಜೇಂದ್ರ ನಾಯ್ಕ್ (52) ಅನಾರೋಗ್ಯದ ಹಿನ್ನಲೆಯಲ್ಲಿ ಮೆಗ್ಗಾನ್ ಗೆ ದಾಖಲಾಗಿದ್ದನು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವುಕಂಡಿದ್ದಾನೆ.
ಉಡುಪಿ ಜಿಲ್ಲೆಯ ಅಂಗಾರಕಟ್ಟೆ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸಜೆಯಾಗಿದ್ದ ರಾಜೇಂದ್ರ ನಾಯ್ಕ್ 2021 ರಲ್ಲಿ ಶಿವಮೊಗ್ಗದ ಕಾರಾಗೃಹಕ್ಕೆ ಜೀವಾವಧಿ ಶಿಕ್ಷೆಯ ಸಜಾಬಂದಿಯಾಗಿ ದಾಖಲಾಗಿದ್ದನು.
ನ.15 ರಂದು ಅನಾರೋಗ್ಯ ಸಂಬಂಧ ಮೆಗ್ಗಾನ್ ಗೆ ದಾಖಲಾಗಿದ್ದನು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ-https://suddilive.in/archives/3178
