ರಾಷ್ಟ್ರೀಯ ಸುದ್ದಿಗಳು

ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ವಕೀಲರಿಂದ ಡಿಐಜಿಗೆ ಪತ್ರ

ಸುದ್ದಿಲೈವ್/ಶಿವಮೊಗ್ಗ

ಖಾಸಗಿ ಚಾನೆಲ್ ನಲ್ಲಿ ಮನರಂಜನಾ ಕಾರ್ಯಕ್ರಮವೆಂಬು ಬಿತ್ತರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಶ್ಲೀಲ ಪದಬಳಕೆ ಅತಿರೇಖದ ವರ್ತನೆ ಕುರಿತು ಸಾಗರದ ವಕೀಲರೊಬ್ಬರು ಡಿಐಜಿಗೆ ಪತ್ರಬರೆದಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಬಿತ್ತರವಾಗುತ್ತಿರುವ  ಬಿಗ್‌ ಬಾಸ್‌ ಕಾರ್ಯಕ್ರಮವು ಆಶ್ಲೀಲ ಮತ್ತು ಆವಾಜ್ಯ ಪದಗಳ ಬಳಕೆ ಹಾಗೂ ಅತೀರೇಕದ ವರ್ತನೆಯನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ವಕೀಲ ಪ್ರವೀಣರವರು ಡಿಐಜಿಗೆ ಪತ್ರ ಬರೆದಿದ್ದಾರೆ.

ಖಾಸಗಿ ಚಾನಲ್‌ನಲ್ಲಿ ಭಿತ್ತರವಾಗುತ್ತಿರುವ ಬಿಗ್ಗ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ನಡುವಿನ ಸಂಭಾಷಣೆ ಮತ್ತು ಅವಾಚ್ಯ ಪದಗಳ ಬಳಕೆ ಹಾಗೂ ಆತೀರೇಕದ ವರ್ತನೆ ನಡೆಯುತ್ತಿದೆ. ಅಲ್ಲದೇ ಸ್ಪರ್ದಿಗಳು ಚಪ್ಪಲಿಯಲ್ಲಿ ಹೊಡೆದುಕೊಳ್ಳುವ ದೃಶ್ಯಗಳು ಸಹ ಅತಿ ರೋಚಕವಾಗಿ ಬಿತ್ತರಗೊಳ್ಳುತ್ತಿವೆ.

ಈ ಮೂಲಕ ಕುಟುಂಬ, ಸಮಾಜದಲ್ಲಿ ಕೆಟ್ಟ ಪರಿಣಾಮವನ್ನು ಬೀರುವ ಕಾರ್ಯಕ್ರಮವಾಗಿದೆ. ಅಲ್ಲದೆ ಈ ಕಾರ್ಯಕ್ರಮವು ನೈತಿಕ ಮಟ್ಟವು ಕುಸಿಯುವಂತಹ ಕಾರ್ಯಕ್ರಮವಾಗಿದೆ. ಇದರ ಚಿತ್ರೀಕರಣವು ಬಿಡದಿಯಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ.  ಇದು ಸ್ಪರ್ದಿಗಳ ನಡುವೆ ಅಶ್ಲೀಲ ಪದ ಬಳಕೆ ಆಗುತ್ತಿರುವುದರಿಂದ ಈ ಮನರಂಜನಾ ಕಾರ್ಯಕ್ರಮದ ವಿರುದ್ಧ ಕ್ರಮಕ್ಕೆ ವಕೀಲರು ಒತ್ತಾಯಿಸಿದ್ದಾರೆ.

ಆದ್ದರಿಂದ ‘ತಾವುಗಳು ಖಾಸಗಿ ಚಾನಲ್‌ನಲ್ಲಿ ಮೂಡಿಬರುತ್ತಿರುವ ಬಿಗ್‌ ಬಾಸ್ ಕಾರ್ಯಕ್ರಮವು ಆಶ್ಲೀಲ ಮತ್ತು ಆವಾಚ್ಯ ಪದಗಳ ಬಳಕೆ ಹಾಗೂ ಅತೀದೇಕದ ವರ್ತನಯನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸಿ ಈ ಕಾರ್ಯಕ್ರಮವನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ-https://suddilive.in/archives/4536

Related Articles

Leave a Reply

Your email address will not be published. Required fields are marked *

Back to top button