ರಾಷ್ಟ್ರೀಯ ಸುದ್ದಿಗಳು

ರಸ್ತೆಗೆ ಹಾಲು ಚೆಲ್ಲಿ ರೈತರ ಪ್ರತಿಬಟನೆ

ಸುದ್ದಿಲೈವ್/ಶಿವಮೊಗ್ಗ

ಹಾಲು ಉತ್ಪಾದಕರಿಂದ ಖರೀದಿಸುತ್ತಿರುವ ಹಾಲಿನ ದರವನ್ನ ಪದೇ ಪದೇ ಇಳಿಸಿರುವುದನ್ನ ಖಂಡಿಸಿ ಇಂದು ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಹಾಲು ಉತ್ಪಾದಕರ ಸಂಘ ಕಿಸಾನ್ ಸಂಘದ ಅಡಿಯಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿದೆ.

ದರ ಇಳಿಕೆ ಖಂಡಿಸಿ, ಶಿವಮೊಗ್ಗದಲ್ಲಿ ಹಾಲು ಉತ್ಪಾದಕರ ಸಂಘ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ದಕ್ಷಿಣ ಪ್ರಾಂತ ಇಂದು ಶಿಮೂಲ್ ಮುಂದೆ  ಹಾಲು ಚೆಲ್ಲುವ ಮೂಲಕ ಮತ್ತು ರಸ್ತೆ ತಡೆಯುವ ಮೂಲಕ ಪ್ರತಿಭಟಿಸಲಾಯಿತು.

ಶಿವಮೊಗ್ಗದ ಮಾಚೇನಹಳ್ಳಿಯಲ್ಲಿರುವ ಶಿಮೂಲ್ ಆಡಳಿತ ಕಚೇರಿ ಹಾಗೂ ಡೈರಿಯ ಮುಂಭಾಗದಲ್ಲಿ ರೈತರು ರಸ್ತೆ ತಡೆ ಮಾಡಲು ಮುಂದಾಗಿದ್ದು ಅವರನ್ನ ಶಾಂತಿಯುತವಾಗಿ ಪ್ರತಿಭಟನಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ರಸ್ತೆಯ ಮೇಲೆ ಹಾಲು ಸುರಿದು ಮತ್ತು ಎನ್ ಹೆಚ್ 206 – ಬಿ.ಹೆಚ್. ರಸ್ತೆ ತಡೆದು ರೈತರು ಕೆಲ ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ.‌ ರೈತರ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಆಗಿದೆ  ವಾಹನಗಳು ಸಾಲುಗಟ್ಟಿ ನಿಂತಿವೆ. ಶಿಮುಲ್ ಆಡಳಿತ ಮಂಡಳಿ ವಿರುದ್ಧ ಹಾಲು ಉತ್ಪಾದಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ತಿಂಗಳಲ್ಲಿ 3.75 ರೂ. ನಷ್ಟು ರೈತರಿಂದ ಹಾಲು ಖರೀದಿ ದರವನ್ನ ಶಿಮೂಲ್ ಇಳಿಸಿದೆ ಎಂದು ರೈತರು ಆರೋಪಿಸಿದ್ದಾರೆ. ಶಿಮೂಲ್ ಕಛೇರಿಯ ಎದುರು ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.

ಪ್ರತಿಭಟನೆಗೆ ರೈತರಲ್ಲೇ ಗೊಂದಲ

ರೈತರ ಪ್ರತಿಭಟನೆ ವೇಳೆ ಗೊಂದಲ ಉಂಟಾಗಿದೆ.ರಸ್ತೆ ತಡೆಗೆ ಪೊಲೀಸರ ಅನುಮತಿ ಇಲ್ಲದೆ ಕೆಲ ರೈತರು ವೇದಿಕೆ ಮುಂದೆ ಬಂದು ಮದುವೆ ಮನೆಗೆ ಬಂದಿಲ್ಲ. ಪ್ರತಿಭಟನೆಯ ಬಿಸಿ ಮುಟ್ಟಿಸಬೇಕೆಂದು ಕರೆ ನೀಡಿದರು. ಆದರೆ ಆಯೋಜಕರು ರಸ್ತೆ ತಡೆಗೆ ಅನುಮತಿ‌ಇಲ್ಲ. ಹಾಗಾಗಿ ಪ್ರತಿಭಟನೆಯ ಶಾಂತಿಯುತವಾಗಿ ನಡೆಸುವಂತೆ ತಿಳಿಸಿದರು. ವಾಗ್ವಾದದ ನಂತರ ರೈತರು ಪ್ರತಿಭಟನೆ ಮುಂದುವರೆಸಿದರು.

ಇದನ್ನೂ ಓದಿ-https://suddilive.in/archives/6443

Related Articles

Leave a Reply

Your email address will not be published. Required fields are marked *

Back to top button