ಕ್ರೈಂ ನ್ಯೂಸ್

ಮೂರು ದಿನಗಳ ಹಿಂದೆ ಮಿಸ್ಸಿಂಗ್ ಆಗಿದ್ದ ಯುವಕ ಶವವಾಗಿ ಪತ್ತೆ!

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ತಾಲೂಕಿನ ಹಾಯ್ ಹೊಳೆ ಗ್ರಾಮದಲ್ಲಿರುವ ತುಂಗ ನದಿಗೆ ಕಟ್ಟಲಾಗಿರುವ ಚೆಕ್ ಡ್ಯಾಂನಲ್ಲಿ ಯುವಕನೋರ್ವನ ಶವವೊಂದು ಪತ್ತೆಯಾಗಿದೆ. ಮೂರು ದಿನಗಳ ಹಿಂದಷ್ಟೆ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

ಮೊಹ್ಮದ್ ರಿಯಾಜ್ ಎಂಬ 18 ವರ್ಷ 3 ತಿಂಗಳಿನ ಯುವಕ ಫೆ.16 ರಂದು ಮನೆಬಿಟ್ಟು ಹೋಗಿದ್ದು ವಾಪಾಸಾಗಿರಲಿಲ್ಲ. ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ ಮೊಹ್ಮದ್ ರಿಯಾಜ್ ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಸಾವಿಗೆ ಕೌಟುಂಬಿಕ ಸಮಸ್ಯೆ ಇರಬಹುದು ಎಂದು ಶಂಕಿಸಲಾಗುತ್ತಿದೆ. ಅಣ್ಣನಗರ ನಿವಾಸಿಯಾಗಿದ್ದ ಮೊಹ್ಮದ್ ರಿಯಾಜ್ ಯಾನೆ ಅರಾಫತ್ ಫೆ.16 ರಂದು ಶುಕ್ರವಾರ ಮಧ್ಯಾಹ್ನ ಊಟ ಮುಗಿಸಿಕೊಂಡು ಕೆಎ 14 ಇಸಿ 1707 ಬೈಕ್ ನ್ನ ತೆಗೆದುಕೊಂಡು ಮನೆ ಬಿಟ್ಟು ಹೋದವನು ವಾಪಾಸಾಗಿರಲಿಲ್ಲ.

ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಿನ್ನೆ ಅವರ ತಂದೆ ಸಮೀರ್ ಪಾಶ ದೂರು ದಾಖಲಿಸಿದ್ದರು. ನಿನ್ನೆನೆ ಆತನ ಬೈಕ್ ಹಾಯ್ ಹೊಳೆ ತುಂಗ ನದಿಯ ಚೆಕ್ ಡ್ಯಾಂ ಬಳಿ ಪತ್ತೆಯಾಗಿತ್ತು. ಇಂದು ಆತನ ಮೃತದೇಹ ನೀರಿನಲ್ಲಿ ತೇಲಿ ಬಂದಿದೆ.

ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ರಿಯಾಜ್ ನ ಕಾಣೆಯಾಗಿರುವ ದೂರು ದಾಖಲಾಗಿತ್ತು. ಇಂದು ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಡ್ಯಾಂ ಬಳಿ ಆತನ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನ ತೆಗೆಯಲಾಗುತ್ತಿದೆ. ಮನನ್ನ ಕಳೆದುಕೊಂಡ ತಂದೆ ಕಣ್ಣೀರು ಹರಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9247

Related Articles

Leave a Reply

Your email address will not be published. Required fields are marked *

Back to top button