ಕ್ರೈಂ ನ್ಯೂಸ್
ಗೋಮಾಂಸ ಮಾರಾಟದ ಮೇಲೆ ಪೊಲೀಸರ ದಾಳಿ
ಸುದ್ದಿಲೈವ್/ಶಿವಮೊಗ್ಗ
ಎಂಕೆಕೆ ರಸ್ತೆಯ ಮೆಹಬೂಬ್ ಗಲ್ಲಿಯಲ್ಲಿ ಗೋಮಾಂಸ ಪತ್ತೆಯಾಗಿದೆ. ಗೋಮಾಂಸ ಮಾರಾಟದ ಮೇಲೆ ಪೊಲೀಸರು ದಾಳಿ ನಡೆಸಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಎಂಕೆಕೆ ರಸ್ತೆಯ ಮೊಹಬೂಬ್ ಗಲ್ಲಿಯ ಕಾಂಪ್ಲೆಕ್ಸ್ ಒಂದರ ಹಿಂಭಾಗದ ಸಿಮೆಂಟ್ ಶೀಟಿನ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 15 ಕೆಜಿ ಮಾಂಸ ಮತ್ತು ಮಚ್ಚು, ತಕ್ಕಡಿಗಳು ಪತ್ತೆಯಾಗಿದೆ.
ಇಬ್ಬರು ಆರೋಪಿಗಳಾದ ಇಜಾಜ್ ಅಹಮದ್, ರೋಷನ್ ಎಂಬುವರು ಪರಾರಿಯಾಗಿದ್ದಾರೆ. ಇಬ್ಬರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/9709