ಸ್ಥಳೀಯ ಸುದ್ದಿಗಳು

ಸಿದ್ದರಾಮಯ್ಯನವರ ಸರ್ಕಾರವನ್ನ ವಜಾಗೊಳಿಸುವಂತೆ ಹಿಂದೂ ಸಂಘಟನೆಗಳ ಮನವಿ

ಸುದ್ದಿಲೈವ್/ಶಿವಮೊಗ್ಗ

ಶಂಕಿತ ಐಸಿಸ್ ಉಗ್ರನ ಜೊತೆ ಸಿಎಂ ಸಿದ್ದರಾಮಯ್ಯನವರು ವೇದಿಕೆ ಹಂಚಿಕೊಂಡಿದ್ದು ಹಾಗೂ ಅಲ್ಪ ಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿರುವುದನ್ನ‌ ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದೆ.

ಡಿ.4 ರಂದು ಮಸೀದಿ ಮೌಲ್ವಿಗಳ ಜೊತೆ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲೀಂ ಧರ್ಮಗುರುಗಳ ಸಮಾವೇಶದಲ್ಲಿ ತನ್ವೀರ್ ಪೀರ್ ಜೊತೆ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದು, ಈ ಸಭೆಯಲ್ಲಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಅನುಧಾನದ ಘೋಷಣೆ ಮಾಡಿರುವುದು ಸಂವಿಧಾನ ಬಾಹಿರ ಎಂದು ಸಂಘಟನೆ ಆಗ್ರಹಿಸಿದೆ.

Article-29 ಮತ್ತು 30 ರ ಪ್ರಕಾರ ಅಲ್ಪಸಂಖ್ಯಾತರ ಹಿತರಕ್ಷಣೆ ಪ್ರಕಾರ ಭಾರತದ ಯಾವುದೇ ರಾಜ್ಯ, ಅಥವಾ ವಿಶಿಷ್ಟಭಾಷೆ, ಲಿಪಿ, ಅಥವಾ ಸಂಸ್ಕೃತಿಯನ್ನ ಹೊಂದಿರುವವರಿಗೆ ಮಾತ್ರ ಅನುದಾನ ಘೋಷಿಸಲು ಅವಕಾಶವಿದೆ. ಆದರೆ ಮುಸ್ಲೀಂ ಸಮುದಾಯಕ್ಕೆ ವಿಶಿಷ್ಟ ಭಾಷೆ, ಲಿಪಿ ಸಂಪ್ರದಾಯ ಭಾಷೆ ಇಲ್ಲದಿರುವುದರಿಂದ ವಿಶೇಷ ಅನುದಾನ ನೀಡಲು ಅವಕಾಶವಿಲ್ಲ ಎಂದು ಸಂಘಟನೆ ಆಗ್ರಹಿಸಿದೆ.

ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಮುಸ್ಲೀಂ‌ ಸಮುದಾಯ ಮಾತ್ರವಲ್ಲ 6 ಸಮುದಾಯಗಳಿವೆ. ಮುಸ್ಲೀಂರಿಗೆ ಅನುದಾನ ಘೋಷಣೆ ಮಾಡುವ ಮೂಲಕ ಉಳಿದ ಸಮುದಾಯಗಳಿಗೆ ಸಿಎಂ ಅವಮಾನ ಮಾಡಿರುವುದಾಗಿಯೂ ಸಂಘಟನೆ  ಆರೋಪಿಸಲಾಗಿದೆ.

ಅಲ್ಲದೆ ಸಿಎಂ ಘೋಷಣೆಯಿಂದ  ರಾಜ್ಯದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವಂತಾಗಿದೆ. ಹಾಗಾಗಿ ಸಂವಿಧಾನ ವಿರೋಧವಾಗಿ ರಾಜ್ಯದ ಬೊಕ್ಕಸವನ್ನ ಕರ್ಚುಮಾಡಲಾಗುತ್ತಿದೆ. ಇದನ್ನ ರಾಜ್ಯ ಪಾಲರು ಗಮನಿಸಬೇಕು ಮತ್ತು ಸಿದ್ದರಾಮಯ್ಯನವರ ಸರ್ಕಾರವನ್ನ ವಜಾಗೊಳಿಸಬೇಕೆಂದು  ಎಂದು ಆಗ್ರಹಿಸಲಾಗಿದೆ.

ಅಲ್ಲದೆ ಶಂಕಿತ ಉಗ್ರರ ಪಟ್ಟಿಯಲ್ಲಿ ಮೌಲ್ವಿ ತನ್ವೀರ್ ಪೀರಾ ಎಂಬುವರ ಹೆಸರಿದ್ದು ಅವರೊಂದಿಗೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ. ಪೀರಾರಿಗೆ ಸೌದಿ, ಯಮನ್, ಹಾಗೂ ಮಧ್ಯಪ್ರಾಚ್ಯ ದೇಶಗಳ ಪ್ರವಾಸದಲ್ಲಿ ಭಯೋತ್ಪಾದಕ ಸಂಘಟನೆಯ ಮುಖಂಡರನ್ನ ಭೇಟಿಯಾಗೊ ಫೋಟೊ ಹಂಚಿಕೊಂಡಿದ್ದಾರೆ. ಭಾರತದ ಚಟುವಟಿಜೆಗಳನ್ನ ಅರಬ್ ದೇಶಗಳಿಗೆ ರವಾನಿಸಿರುವುದು ಅವರ ಟ್ವೀಟ್ ನಿಂದ ಬಹಿರಂಗವಾಗಿದೆ. ಹಾಗಾಗಿ ಈ ಪ್ರಕರಣವನ್ನ‌ ಉನ್ನತಮಟ್ಟದಲ್ಲಿ ತನಿಖೆಯಾಗಬೇಕೆಂದು ಆಗ್ರಹಿಸಲಾಹಿದೆ.

ಮನವಿ ನೀಡುವ ಸಂದರ್ಭದಲ್ಲಿ  ವಿಧ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಜಿಲ್ಲಾಧ್ಯಕ್ಷ ವಾಸುದೇವ್, ವಿಭಾಗ ಸಂಯೋಜಕ ರಾಜೇಶ್ ಗೌಡ, ಜಿಲ್ಲಾ ಕಾರ್ಯದರ್ಶಿ ನಾರಾಯಣ್ ವರ್ಣೇಕರ್, ಜಿಲ್ಲಾ ಸಂಯೋಜಕ ವಡಿವೇಲು ಮೊದಲಾದವರು ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/4453

Related Articles

Leave a Reply

Your email address will not be published. Required fields are marked *

Back to top button