ಸ್ಥಳೀಯ ಸುದ್ದಿಗಳು

ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಕೊಡುವ ಸಿಎಂ ಹೇಳಿಕೆ ಬಿಎಸ್ ವೈ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಅಲ್ಪಸಂಖ್ಯಾತ ಮುಸ್ಲೀಂರಿಗೆ 10 ಸಾವಿರ ಕೋಟಿ ಹಣ ನೀಡುವುದಾಗಿ ಹೇಳಿದ ಸಿದ್ದರಾಮಯ್ಯನವರ ಹೇಳಿಕೆಗೆ, ಬರ ಪರಿಹಾರಕ್ಕೆ ಕೇಂದ್ರದ ಹಣ ಬಿಡುಗಡೆ, ಸೋಮಣ್ಣ ಕಾಂಗ್ರೆಸ್ ಗೆ ಹೋಗುವ ಕುರಿತು ಸಮಗ್ರವಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಇಂದು ಶಿವಮೊಗ್ಗದ ವಿನೋಬನಗರದ ಸ್ವಗೃಹದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು,  ಅಲ್ಪ ಸಂಖ್ಯಾತರ ಹಣಕೊಟ್ಟರೆ ಅಭ್ಯಂತರವಿಲ್ಲ.  ಆದರೆ ದೊಡ್ಡದಾಗಿ 10 ಸಾವಿರ ಕೊಡ್ತೀನಿ ಎಂದು  ಬಿಂಬಿಸುವುದು ಶೋಭೆ ತರಲ್ಲ. ಇದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗುತ್ತೆ. ಈ ರೀತಿಯ ಮಾತುಗಳನ್ನ ಸಿಎಂನಿಂದ ನಿರೀಕ್ಷಿಸಿರಲಿಲ್ಲ. ಸಿಎಂ ಹೇಳಿಕೆಯನ್ನ ಮಠಾಧಿಪತಿಗಳು ಸೇರಿ ಎಲ್ಲರೂ ಖಂಡಿಸಿದ್ದಾರೆ.  ಓಲೈಕೆ ರಾಜಕಾರಣ ಸರಿಯಲ್ಲ ಎಂದರು.

ಈ ಹೇಳಿಕೆ ಚುನಾವಣೆ ಗಿಮಿಕಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಿಎಸ್ ವೈ ಎನಾದರೂ ಮಾತನಾಡಬೇಕಾದರೂ  ಎಚ್ಚರಿಕೆ ವಹಿಸಬೇಕು ಎಂಬುದು ನನ್ನ ಸಲಹೆ.  ಚುನಾವಣೆಯಲ್ಲಿ ಎಲ್ಲಾ ಲೋಕಸಭಾ ಕ್ಷೇತ್ರವನ್ನ ಮೋದಿ ಹೆಸರಿನಲ್ಲಿ ಗೆಲ್ಲಲಿದ್ದೇವೆ. ಈ ಬಗ್ಗೆ ಯಾವ ಅನುಮಾನಬೇಡ,  ಇವರ ಓಲೈಕೆ ರಾಜಕಾರಣದಲ್ಲಿ ಚುನಾವಣೆ ಗೆಲ್ಲುತ್ತೇವೆ ಎಂಬುದು ಸಾಧ್ಯವಿಲ್ಲ ಎಂದರು.

ಸಚಿವ ಪ್ರಿಯಾಂಕ ಖರ್ಗೆ ಬೆಳಗಾವಿ ವಿಧಾನ ಸಭೆಯಲ್ಲಿರುವ  ಸಾವರ್ಕರ್ ಫೊಟೊತೆಗೆಯುವ ಪ್ರಿಯಾಂಕ ಖರ್ಗೆ ಹೇಳಿಕೆನೂ ಖಂಡಿಸಿದ ಬಿಎಸ್ ವೈ ಇದು  ಸರಿಯಾದ ಹೇಳಿಕೆ ಅಲ್ಲ ಇದನ್ನ ರಾಜ್ಯದ ಜನತೆನೂ ಸಹಿಸೊಲ್ಲ. ಅಂತಹ  ದುಸ್ಸಾಹಸದ ಕೆಲಸಕ್ಕೆ ಸರ್ಕರ ಕೈ ಹಾಕಬಾರದು  ಎಂದರು

ಭ್ರೂಣ ಹತ್ಯೆಯ ಪ್ರಕರಣದಲ್ಲಿ ಬಹಳ ಜನ ಶಾಮೀಲಾಗಿದ್ದಾರೆ. ಇದು ನಿಲ್ಲಬೇಕು. ಕಾನೂನು ಚೌಕಟ್ಟಿನಲ್ಲಿ  ಏನು ಕ್ರಮ ಕೈಗೊಳ್ಳಬೇಕು. ಕೈಗೊಳ್ಳಲಿ.

ಬಿಜೆಪಿಯ ಮಾಜಿ ಸಚಿವ ಸೋಮಣ್ಣ ಇಂದು ಕಾಂಗ್ರೆಸ್ ಸೇರ್ಪಡೆಯಾಗುವ ಕುರಿತು ಸಭೆ ನಡೆಸುವುದಾಗಿ ಹೇಳಿಕೆ ದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೂ ಉತ್ತರಿಸಿದ ಅವರು ಸೋಮಣ್ಣ ಎಲ್ಲೂ ಹೋಗಲ್ಲ. ನಮ್ಮಜೊತೆಗೆ ಇರ್ತಾರೆ ಎಂದರು.  ಬರಕ್ಕೆ ಕೇಂದ್ರದಿಂದ ಹಣಬರುತ್ತದೆ ಅದಕ್ಕೆ ನಾವು ಸಹಕರಿಸುವುದಾಗಿ ಹೇಳಿದ ಬಿಎಸ್ ವೈ ರಾಜ್ಯಾಧ್ಯಕ್ಷ ವಿಜಯಣ್ಣನವರು ಮನವಿ ಮಾಡಿದ್ದಾರೆ.   ಆದರೆ ರಾಜ್ಯ ಸರ್ಕಾರ ಕೇಂದ್ರಕ್ಕಾಗಿ  ಕಾಯೋದು ಸರಿಯಲ್ಲ. ತಕ್ಷಣ ಬರಕಾಮಗಾರಿ ಆರಂಭಿಸಲಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ-https://suddilive.in/archives/4357

Related Articles

Leave a Reply

Your email address will not be published. Required fields are marked *

Back to top button