ರಾಜಕೀಯ ಸುದ್ದಿಗಳು

ಶುಭಗಳಿಗೆಯಲ್ಲಿ ಸೂತಕದ ಪ್ರಶ್ನೆಗೆ ಉತ್ತರಿಸಲಾರೆ-ಯೋಗೀಶ್ ಹೀಗೆ ಹೇಳಿದ್ದೇಕೆ?

ಪಾಲಿಕೆ ಮಾಜಿ ಸದಸ್ಯ ಹೆಚ್ ಸಿ ಯೋಗೀಶ್ ಮತ್ತು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ನಡುವಿನ ಸುದ್ದಿಗೋಷ್ಠಿಯಲ್ಲಿ ಆರೋಪ ಪ್ರತ್ಯಾರೋಪಗಳು ಮುಂದುವರೆದಿದೆ. ಶುಭಘಳಿಗೆಯಲ್ಲಿ ಸೂತಕದ ಮಾತಿಗೆ ಉತ್ತರಿಸೊಲ್ಲ ಎಂದು ಹೇಳುವ ಮೂಲಕ ಯೋಗೀಶ್ ಅವರು ಆಯನೂರಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಲೈವ್/ಶಿವಮೊಗ್ಗ

‘ಹೂ ಇಸ್ ಯೋಗೀಶ್’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹೆಚ್ ಸಿ ಯೋಗೀಶ್  ಪ್ರತಿಕ್ರಿಯಿಸಿದ್ದು, ಚುನಾವಣೆಯಲ್ಲಿ 70 ಸಾವಿರ ಜನ ಮತಹಾಕಿದವರಿಗೆ ಯೋಗೀಶ್ ಯಾರು ಅಂತ ಗೊತ್ತು ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ನಾಳೆ ಇಂಧನ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ‌ ಮುಖಂಡ ಕೆ.ಜೆ ಜಾರ್ಜ್ ಮತ್ತು ಕರ್ನಾಟಕ ಕೈಗಾರಿಕ ಅಭಿವೃದ್ಧಿ ನಿಗಮ ಮಂಡಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೋಪಾಲಕೃಷ್ಣ ಬೇಳೂರಿಗೆ ಅದ್ದೂರಿ ಸ್ವಾಗತ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಈ ಶುಭ ಘಳಿಗೆಯಲ್ಲಿ ಸೂತಕದ ಪ್ರಶ್ನೆಗೆ ಉತ್ತರಿಸೊಲ್ಲ ಎಂದು ಹೇಳುವ ಮೂಲಕ ಆಯನೂರಿಗೆ ತಿರುಗೇಟು ನೀಡಿದ್ದಾರೆ.

ಆಯನೂರು ವಿರುದ್ಧ ಯೋಗೀಶ್ ಮತ್ತು ಅವರ ಕಡೆಯವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ದೂರು ಕೊಟ್ಟಿರುವ ಬಗ್ಗೆ ಆಯನೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಆತ್ಮ ಪ್ರೇತಾತ್ಮಗಳು ದೂರು ಕೊಟ್ಟುಕೊಂಡು ಓಡಾಡುತ್ತಾರೆ ಎಂದು ಹೇಳಿರುವ ಹೇಳಿಕೆಯನ್ನೂ ಕೂಲ್ ಆಗಿ ಉತ್ತರಿಸಿದ ಯೋಗೀಶ್ ಜೀವ ಇರುವ ಆತ್ಮಗಳೇ ಉತ್ತರಸಲಿದ್ದಾರೆ ಎಂದು ಹೇಳಿದರು.

ಶಾಮನೂರು ಅವರು ಬಿಜೆಪಿ ಸಂಸದ ರಾಘವೇಂದ್ರರನ್ನ ಗೆಲ್ಲಿಸಿ ಎಂದು ಎಲ್ಲೂ ಹೇಳಿಲ್ಲ ಎಂದು ಸಮರ್ಥಿಸಿಕೊಂಡ ಯೋಗೀಶ್, ಶಾಮನೂರು ಸಂಸದರ ಕಾರ್ಯವೈಖರಿಯನ್ನ ಕಂಡು ಅಭಿವೃದ್ಧಿಯನ್ನ ಹೊಗಳಿದ್ದಾರೆ.

ಸಂಸದ ರಾಘವೇಂದ್ರರನ್ನ ಫೇಸ್ ಮಾಡೋದು ಗೊತ್ತಿದೆ. ಶಾಮನೂರು ಅವರು ಕ್ಯಾನವಸ್ ಮಾಡಿಲ್ಲ. ಈ ಹಿಂದೆ ಕಾಗೋಡು ತಿಮ್ಮಪ್ಪರೂ ಸಹ ಸಂಸದರನ್ನು ಹೊಗಳಿದ್ದರು. ಹಾಗಾಗಿ ಅವರ ವಿರುದ್ಧ ಯಾವುದೇ ಆಕ್ಷೇಪಣೆ ಇಲ್ಲ. ಶಾಮನೂರು ಅವರು ಯಾವತ್ತಿದ್ದರೂ  ಯಂಗ್ ಅಂಡ್ ಎನೆರ್ಜಿಟಿಕ್ ಎಂದರು.

ಕಾಂಗ್ರೆಸ್ ಮತ್ತೋರ್ವ ನಾಯಕ ದೇವೇಂದ್ರಪ್ಪ ಮಾತನಾಡಿ ಕುವೆಂಪು ವಿವಿಯಲ್ಲಿ ಭ್ರಷ್ಠಾಚಾರ ತಾಂಡವಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರರು ಹೇಳಿದ್ದಾರೆ. ಅವರು ಆಡಳಿತ ಪಕ್ಷದಲ್ಲಿದ್ದಾರೋ ಅಥವಾ ವಿಪಕ್ಷದಲ್ಲಿದ್ದಾರೋ ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನ ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ದೇವೇಂದ್ರಪ್ಪ, ಅಲ್ಪಾಪ್ ಪರ್ವೇಜ್, ವಿಶ್ವನಾಥ್ ಕಾಶಿಮೊದಲಾದವರು ಉಪಸ್ಥಿರಿದ್ದರು.

ಇದನ್ನೂ ಓದಿ-https://suddilive.in/archives/8235

Related Articles

Leave a Reply

Your email address will not be published. Required fields are marked *

Back to top button