ರಾಜಕೀಯ ಸುದ್ದಿಗಳು

ಕುಮಾರ್ ನಮ್ಮಜೊತೆಗೆ ಇರ್ತಾರೆ, ಚುನಾವಣೆಗೆ ಬರ್ತಾರೆ-ಬಿವೈಆರ್

ಸುದ್ದಿಲೈವ್/ಶಿವಮೊಗ್ಗ

ಶಾಲೆಗಳಲ್ಲಿ ಕುವೆಂಪು ಅವರ ಘೋಷಣೆಯನ್ನ ತಿದ್ದುವ ಮೂಲಕ ಅವಮಾನ, ಧಾರ್ಮಕ ದತ್ತಿ ಕಾಯ್ದೆ ಮೂಲಕ 10% ಆದಾಯವನ್ನ ಸರ್ಕಾರದ ಖಜಾನೆ ತುಂಬಿಸಿಕೊಳ್ಳುವ ಕೆಲಸ ನಡೆದಿತ್ತು. ಆದರೆ ಮೇಲ್ಮನವಿಯಲ್ಲಿ ಅಂಗೀಕಾರದ ಮೂಲಕ ಮಸೂದೆ ಬಿದ್ದುಹೋಗಿದೆ. ಇವುಗಳ ಮೂಲಕ ಕಾಂಗ್ರೆಸ್ ಮಕ್ಕಳ ಮತ್ತು ಮತದಾರರ ಮನಸ್ಸು ಒಡೆಯುವ ಕೆಲಸ ನಡೆಯುತ್ತಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಮಾಧ್ಯಮಗಳಿಗೆ ಮಾತನಾಡಿ, 10 ಕಜಿ ಅಕ್ಕಿಕೊಡುವುದಾಗಿ ಹೇಳಿದ ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ. ಬಿಜೆಪಿ 5 ಕೆಜಿ ಅಕ್ಕಿಕೊಡುತ್ತಿದೆ. ಮೋದಿ ಕಾರ್ಯಕ್ಕೆ ತುಲನೆ ಮಾಡಿದರೆ ನಗೆಪಾಟಾಗುತ್ತದೆ ಎಂದು ಹೇಳಿದರು.

ಭಾಗ್ಯಲಕ್ಷ್ಮಿ, ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಗೆ ಬಿಎಸ್ ವಾಯ ನೀಡಿದ್ದಾರೆ. ಪಂಚ ಗ್ಯಾರೆಂಟಿ ಕೊಟ್ಟು ಪರಿಶಿಷ್ಟ ಜಾತಿಗೆ ಎತ್ತಿಟ್ಟ ಅನುದಾನದ ಹಣವನ್ನ‌ ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ. ಕಾಂಗ್ರೆಸ್ ಈ ಬಾರಿ 40 ಸೀಟು ಪಡೆಯುವುದು ಕಾಂಗ್ರೆಸ್ ಗೆ ಲಭಿಸುವುದು ಕಷ್ಟವಾಗಲಿದೆ ಎಂದು ಭವಿಷ್ಯ ನುಡಿದರು.

ಧಾರ್ಮಿಕ ದತ್ತಿ ಕಾಯ್ದೆಯ 10% ಹಣವನ್ನ ಅವರ ಕುಉಂಬವೇ ಒಪ್ಪಲ್ಲ. ಉಪಮುಖ್ಯ ಮಂತ್ರಿ ಡಿಕೆಶಿ ಕಾಂಗ್ರೆಸ್ ಮುಂದಿನ 10 ವರ್ಷ ಆಳಲಿದೆ ಎಂಬ ಮಾತಿಗೆ ಟಾಂಗ್ ನೀಡಿದ ರಾಘವೇಂದ್ರ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ. ರಾಹುಲ್ ಪಾದುಯಾತ್ರೆ ನಡೆಸಿದ್ದಾರೆ. ಸೋನಿಯಾ ಗಾಂಧಿ‌ ಲೋಕಸಭೆಯಿಂದ ರಾಜ್ಯಸಭೆಗೆ ಬಂದಿದ್ದಾರೆ. ಹಾಗಾಗಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡಕಬೇಕಿದೆ ಎಂದರು.

ರಾಜ್ಯಸಭಾ ಚುನಾವಣೆಯಲ್ಲೂ ಅಸಮಾಧಾನದ ಕಾಂಗ್ರೆಸ್ ಶಾಸಕರೇ ಅಡ್ಡಮತದಾನ ಮಾಡಲಿದ್ದಾರೆ ಎಂದು ಆರೋಪಿಸಿದರು.

ಕುಮಾರ್ ನಮ್ಮಜೊತೆಗೆ ಇರ್ತಾರೆ, ಬರ್ತಾರೆ

ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಎಲ್ಲಿರ್ತಾರೆ ಎಂಬ ಚರ್ಚೆ ಬಲವಾಗಿ ಆರಂಭಗೊಂಡ ಬೆನ್ನಲ್ಲೇ ಸಂಸದ ರಾಘವೇಂದ್ರ ನಮ್ಮೊಂದಿಗೆ ಇರಲಿದ್ದಾರೆ ಎಂದು ಭರವಸೆಯಿಂದೆ ಹೇಳಿದ್ದಾರೆ. ಕುಮಾರ್ ಬಂಗಾರಪ್ಪನವರನ್ನ‌ ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಮಾತುಕತೆ ನಡೆಯುತ್ತಿದೆ ಅದಕ್ಕೆ ಬಿಎಸ್ ವೈ ಅಡ್ಡಿಯಾಗಿದ್ದಾರೆ ಎಂಬ ಶಾಸಕ‌ ಬೇಳೂರು ಮಾತಿಗೂ ಪ್ರತಿಕ್ರಿಯಿಸಿದ ರಾಘವೇಂದ್ರ ಅದು ಅವರ ಮಾಹಿತಿ ಇರಬಹುದು.

ಆದರೆ ಅವರ ಮಗನ ಚಲನಚಿತ್ರ ಶೂಟಿಂಗ್ ನಲ್ಲಿ ಕುಮಾರ್ ಬಂಗಾರಪ್ಪ ಬ್ಯೂಸಿಯಾಗಿದ್ದಾರೆ. ಮುಂದಿನ ಚುನಾವಣೆಗೆ ಅವರು ನಮ್ಮೊಂದಿಗೆ ಓಡಾಡಲಿದ್ದಾರೆ ಎಂದು ಹೇಳುವ ಮೂಲಕ ಸಂಸದರು ಅಚ್ಚರಿ ಮೂಡಿಸಿದ್ದಾರೆ. ಒಟ್ಟಿನಲ್ಲಿ ಕುಮಾರ್ ಬಂಗಾರಪ್ಪ ಎಲ್ಲಿ ಇರ್ತಾರೆ ಎಂಬುದರ ಮೇಲೆ ಚುನಾವಣೆ ಕಾವು ಹೆಚ್ಚು ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ-https://suddilive.in/archives/9563

Related Articles

Leave a Reply

Your email address will not be published. Required fields are marked *

Back to top button