ಸ್ಥಳೀಯ ಸುದ್ದಿಗಳು

ನಗರ ನಿತಿನ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನ ಬಂಧಿಸದಿದ್ದರೆ, ಹೋರಾಟ ಅನಿವಾರ್ಯ-ರೇಣುಕಾನಂದ ಶ್ರೀಗಳು

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿಯ ಹೊಸನಗರ ಘಟಕದ ತಾಲೂಕು ಅಧ್ಯಕ್ಷ ನಗರ ನಿತಿನ್ ಮತ್ತು ಸಹೋದರನ ಮೇಲೆ ಹಲ್ಲೆ ಮಾಡಿದ್ದ ಕಾಂಗ್ರೆಸ್ ಪಕ್ಷದ ಪ್ರಕಾಶ್ ಮತ್ತಿತರರನ್ನ ಬಂಧಿಸಿಲ್ಲವೆಂಬ ವಿಷಯ ಈಗ ಮತ್ತೊಂದು ಹೋರಾಟದ ರೂಪ ಪಡೆದುಕೊಳ್ಳುತ್ತಿದೆ.

ನಗರ ನಿತಿನ್ ಮತ್ತು ನವೀನ್ ಮೇಲೆ ಡಿಸೆಂಬರ್ 31 ರಂದು ಕಾಂಗ್ರೆಸ್ ಪಕ್ಷದ ಪ್ರಕಾಶ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಹೋದರರಿಬ್ಬರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಈ ವೇಳೆ ಮಾಜಿ ಗೃಹಚಿವ ಆರಗ ಜ್ಞಾನೇಂದ್ರ, ಶಾಸಕ ಚೆನ್ನಭಸಪ್ಪ ಮೊದಲಾದವರು ಭೇಟಿನೀಡಿ ಆರೋಗ್ಯ ವಿಚಾರಿಸಿದ್ದರು.

ಈ ಪ್ರಕರಣ ಎರಡೂ ಕಡೆಯಿಂದ ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿತ್ತು. ಆದರೆ ಘಟನೆ ನಡೆದು ಐದಾರು ದಿನಗಳಾದರೂ ನಗರ ನಿತಿನ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನ ಪೊಲೀಸರು ಇನ್ನೂ‌ಬಂಧಿಸಿಲ್ಲವೆಂಬ ಕಾರಣಕ್ಕೆ ಮಠದ ಸ್ವಾಮೀಜಿಯವರು ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಗರ್ತಿಕೆರೆಯ ನಾರಾಯಣಗುರು ಮಠದ ರೇಣುಕಾನಂದ ಶ್ರೀಗಳ ವಿಡಿಯೋವೊಂದು ವೈರಲ್ ಆಗಿದ್ದು ಶುಕ್ರವಾರದ ಒಳಗೆ ನಿತಿನ್ ಸಹೋದರರ ಹಲ್ಲೆ ನಡೆಸಿದವರ ಬಂಧನವಾಗದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಹೋರಾಡಲು ಸಿದ್ದರಾಗಲು ಕರೆ ನೀಡಿದ್ದಾರೆ.

ಪ್ರತಿಭಟನೆಗೆ ಕರೆ ನೀಡಿದ ಸ್ವಾಮೀಜಿಗಳ ಈ ವಿಡಿಯೊ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ವಿಷಯ ಈಗ ಹೋರಾಟದ ಸ್ವರೂಪ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ-https://suddilive.in/archives/6175

Related Articles

Leave a Reply

Your email address will not be published. Required fields are marked *

Back to top button