ಸ್ಥಳೀಯ ಸುದ್ದಿಗಳು

ಸ್ವದೇಶಿ ಮೇಳಕ್ಕೆ ಹೊಸ ಅರ್ಥ ಕಲ್ಪಿಸಬೇಕಿದೆ-ಶ್ರೀಗಳು

ಸುದ್ದಿಲೈವ್/ಶಿವಮೊಗ್ಗ

1903 ರಲ್ಲಿ ಧರ್ಮದ ಆಧಾರದ‌ಮೇಲೆ ಬ್ರಿಟೀಶರು ದೇಶವನ್ನ ವಿಭಜಿಸಿದರು. 1905 ರಲ್ಲಿ ಕಲ್ಕತ್ತದ ಟೌನ್ ಹಾಲ್ ನಲ್ಲಿ ನಡೆದ ಸ್ವದೇಶಿ ಚಳುವಳಿಯನ್ನ ಇಂದು ಶಿವಮೊಗ್ಗದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳ ನೆನಪಾಗಿಸುತ್ತಿದೆ. ಎಂದು ಸಿರಿಗಿರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ತಿಳಿಸಿದರು.

ಅವರು ನಗರದ ಫ್ರೀಡಂಗ ಪಾರ್ಕ್ ನಲ್ಲಿ ಇಂದಿನಿಂದ 5 ದಿನಗಳ ಕಾಲ ನಡೆಯುವ ಸ್ವದೇಶಿ ಮೇಳವನ್ನ ಉದ್ಘಾಟಿಸಿ ಮಾತನಾಡಿದರು. ಕೆಲವರಿಗೆ ನಮ್ಮ ದೇಶದ ಇತಿಹಾಸವೇ ತಿಳಿದಿಲ್ಲ.ರಾಣೇಬೆನ್ನೂರಿನ ಕೆಲ ಶಾಲಾ ಮಕ್ಕಳು ಚಿತ್ರದುರ್ಗದ ಕೋಟೆ ನೋಡಲು ಬಂದಾಗ ನಮ್ಮ ಮಠಕ್ಕೆ ಭೇಟಿ ನೀಡಿದ್ದರು.

ಮದಕರಿ ನಾಯಕನಿಗೂ ಓಬವ್ವಳಿಗೂ ಏನು ಸಂಬಂಧ ಎಂದು ಶಾಲಾ ಮಕ್ಕಳಿಗೆ ಕೇಳಿದ್ದೆ. ಆಗ ಒಂದು ಮಗು  ಗಂಡ‌ಹೆಂಡತಿ ಸಂಬಂಧ ಎಂದಿತ್ತು. ಇದು ಮಕ್ಕಳ ತಪ್ಪಲ್ಲ ಇದು ನಮ್ಮ‌ ಶಿಕ್ಷಣದ ವೈಫಲ್ಯವೆಂದು ದೂರಿದರು.

ಸ್ವದೇಶಿ ಮೇಳದಿಂದ ಪ್ರೇರಿತಗೊಂಡು ಮಹಿಳೆಯರು ನಾಳೆಯಿಂದ ಫ್ರಿಡ್ಜ್, ಕುಕ್ಕರ್,ಮಿಕ್ಸಿ ಬಳಕೆಯನ್ನ ತ್ಯಜಿಸಿ ಬೀಸೋಕಲ್ಲು, ಒನಕೆ ಬಳಸುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಬೀಸೋಕಲ್ಲು ಹಿಡಿದು ಅಡುಗೆ ಮಾಡ್ತೀರಿ ಎಂಬ ನಿರೀಕ್ಷೆ ಇಲ್ಲ. ಹಾಗಾಗಿ ಸ್ವದೇಶಿ ಮೇಳಕ್ಕೆ ಹೊಸ ಹೆಸರಿನ ಅವಶ್ಯಕತೆ ಇದೆ. ಬ್ರಿಟೀಶರ ವಿರುದ್ಧದ ಹೋರಾಟಕ್ಕೆ ಗಾಂಧೀಜಿ ಸ್ವದೇಶಿ ಎಂಬ ಪದ ಬಳಸಿದ್ದರು.

ಹಾಗಾಗಿ ಹೊಸ ಡೆಫ್ನೇಷನ್ ಬೇಕು. ನಮ್ಮ ವಸ್ತುವನ್ನ ಉತ್ಪಾದಿಸುವ ವಸ್ತುವನ್ನ ಭಾರತೀಯರೇ ಖರೀದಿಸುವಂತಾಗಬೇಕು. ಸ್ವದೇಶಿ ಕೇವಲ ವಸ್ತುವಲ್ಲ. ನಮ್ಮ ಧರ್ಮವನ್ನ ಪ್ರತಿನಿಧಿಸುವಂತಾಗಬೇಕು. ಸ್ವದೇಶಿ ಸಂಸ್ಕೃತಿಯನ್ನ ನಿರಂತರವಾಗಿ ಕಾಪಾಡಿಕೊಂಡು ಹೋಗುವುದು ಭಾರತೀಯನ ಕರ್ತವ್ಯ ಎಂದರು.

ಬಿಎಸ್ ವೈ ಮಾತು

ಸ್ವದೇಶದ ವಸ್ತುಗಳ ಉತ್ತೇಚಿಸುತ್ತಿರುವ ಉದ್ದೇಶ ಸ್ವದೇಶ್ ಮೇಳ ಹಿಂದಿದೆ ಸ್ವದೇಶಿ ಆಂದೋಲನ ಸ್ವಾವಲಂಭನೆಯ ಚಳುವಳಿಯಾಗಿದೆ ಎಂದು ಮಾಜಿ ಸಿಎಂ ಬಿಎಸ್ ವೈ ತಿಳಿಸಿದರು.

ಸ್ವದೇಶಿಯನ್ನ‌ಗಾಂಧಿಜಿ ಆತ್ಮ ಸ್ವರಾಜ್ ಎಂದು ಬಣ್ಣಿಸಿದ್ದರು. ಬಟ್ಟೆ ಉತ್ಪಾದಿಸಿ ಸ್ವಾಲಂಭನೆಯ ಗ್ರಾಮ ಎಂದು ಗುರುತಿಸಬೇಕೆಂದು ಒತ್ತಾಯಿಸಿದರು. ಬಾಲಗಂಗಾಧರ್ ನಾಥ್ ತಿಲಕ್ ಮಣ್ಣಿನಿಂದ ಬಳಕೆಯಾಗುವ ವಸ್ತುಗಳನ್ನ ಉತ್ಪಾದಿಸಲು ಪ್ರೋತ್ಸಹಿಸಿದರು. ಸ್ವದೇಶಿ ಮೇಳಕ್ಕೆ ಬಂದವರು ಯಾವುದಾದರೂ ವಸ್ತುವನ್ನ ಖರೀದಿಸುವ ಮೂಲಕ  ಮೂಲಕ ಉತ್ತೇಜನೆ ನೀಡಿ ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ, ಎಂಎಲ್ ಸಿ ಡಿ.ಎಸ್.ಅರುಣ್,  ಸಂಪನ್ಮೂಲ ವ್ಯಕ್ತಿಯಾಗಿ ಬಿ.ಎಂ.ಕುಮಾರಸ್ವಾಮಿ, ಸ್ವದೇಶಿ ಮೇಳದ ಆಯೋಜಕರಾದ ಡಾ.ಧನಂಜಯ ಸರ್ಜಿ, ಹರ್ಷ ಕಾಮತ್, ದತ್ತಾತ್ರಿ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/4384

Related Articles

Leave a Reply

Your email address will not be published. Required fields are marked *

Back to top button