ಈದ್ ಮೆರವಣಿಗೆಗೆ ನಗರದಾದ್ಯಂತ ಅಲಂಕಾರ

ಸುದ್ದಿಲೈವ್/ಶಿವಮೊಗ್ಗ

ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಹಸಿರುಮಯವಾಗಿದೆ. ಮುಸ್ಲಿಂ ಸಮುದಾಯ ಹೆಚ್ಚಿರುವ ಬಡಾವಣೆಗಳಲ್ಲಿ ವಿವಿಧ ಅಲಂಕಾರ ಮಾಡಲಾಗಿದೆ. ಅಮೀರ್ ಅಹಮದ್ ಸರ್ಕಲ್‌ನಲ್ಲಿ ಮೆಕ್ಕಾ ಮದೀನಾ ಮಾದರಿ ಅಲಂಕಾರ ಮಾಡಲಾಗಿದ್ದು ಇದರ ಮುಂದೆ ಸೆಲ್ಫಿ, ಫೋಟೋಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಇನ್ನು, ಸರ್ಕಲ್ ಪಕ್ಕದಲ್ಲಿ ಎರಡು ಫಿರಂಗಿಗಳನ್ನು ಇಡಲಾಗಿದೆ. ಸರ್ಕಲ್‌ನಲ್ಲಿ ಟಿಪ್ಪು ಸುಲ್ತಾನ್ ಬೃಹತ್ ಕಟೌಟ್ ನಿರ್ಮಿಸಲಾಗಿದೆ. ಶನಿವಾರ ರಾತ್ರಿಯಿಂದಲೆ ವಿವಿಧೆಡೆಯ ಜನರು ಸರ್ಕಲ್‌ಗೆ ಬಂದು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಲಭ್ಯವಾಗಿದೆ.
ವಿವಿಧೆಡೆ ಭರ್ಜರಿ ಅಲಂಕಾರ
ನಗರದ ವಿವಿಧೆಡೆ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಪ್ರದೇಶದಲ್ಲಿ ಅದ್ಧೂರಿ ಅಲಂಕಾರ ಮಾಡಲಾಗಿದೆ. ಶಿವಮೊಗ್ಗದ ಬೈಪಾಸ್ ರಸ್ತೆ, ಆರ್‌ಎಂಎಲ್ ನಗರ, ಸೂಳೆಬೈಲು, ರೈಲ್ವೆ ನಿಲ್ದಾಣದ ಸಮೀಪದ ಅಮೀರ್ ಅಹಮದ್ ಕಾಲೋನಿ ಸೇರಿದಂತೆ ವಿವಿಧೆಡೆ ಜಗಮಗ ಲೈಟುಗಳ ಸಹಿತ ಅಲಂಕಾರ ಮಾಡಲಾಗಿದೆ.
ಇವತ್ತು ನಗರದಲ್ಲಿ ಮೆರವಣಿಗೆ
ಈದ್ ಮಿಲಾದ್ ಅಂಗವಾಗಿ ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿರುವ ಮಸೀದಿ ಮುಂಭಾಗದಿಂದ ಮಧ್ಯಾಹ್ನ ಮೆರವಣಿಗೆ (Procession) ಆರಂಭವಾಗಲಿದೆ. ಮುಸ್ಲಿಂ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ನಗರದ ವಿವಿಧೆಡೆ ಮೆರವಣಿಗೆ ಸಾಗಲಿದೆ.
ಇದನ್ನೂ ಓದಿ-https://suddilive.in/2023/10/01/301/
