ಕ್ರೈಂ ನ್ಯೂಸ್

ಅನ್ಯಕೋವಿನ ಯುವತಿಗೆ ದೋಖಾ-ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅನ್ಯರಾಜ್ಯದ ಯುವಕನೋರ್ವ ಅನ್ಯಕೋಮಿನ ಯುವತಿಗೆ ಪ್ರೀತಿಸಿ ನಂತರ ತನ್ನ ಅಸಲಿಯತ್ತು ಗೊತ್ತಾದಾಗ ಆತನ ಮದವೆಯ ಬಾಹುಳ್ಯದಿಂದ ಹೊರಬಂದ‌ ಯುವತಿಗೆ ಕರ್ಚು ಮಾಡಿದ ಒಂದು ಲಕ್ಷ ರೂ. ಹಣ ವಾಪಾಸ್ ಕೊಡು ಇಲ್ಲ ಪರಿಣಾಮ ಎದುರಿಸು ಎಂದು ವಿಚಿತ್ರ ಬೇಡಿಕೆ ಹಾಕಿದ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಯುವತಿ ಹಣಕೊಡಲು ಸಾಧ್ಯವಾಗದ ಕಾರಣ ಆಕೆಯ ಖಾಸಗಿ ವಿಡಿಯೋವನ್ನ ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ಪ್ರೀತಿಯನ್ನ ದುರ್ಬಳಕೆ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿದ ಯುವಕನ ವಿರುದ್ಧ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

2021 ರಲ್ಲಿ ಉತ್ತರಪ್ರದೇಶದ ವಿವೇಕ್ ಎಂಬ ಯುವಕ ಇನ್ ಸ್ಟಾಗ್ರಾಮ್ ನಲ್ಲಿ ಭದ್ರಾವತಿಯ ದೊಣಬಘಟ್ಟದ ಅನ್ಯಕೋಮಿನ ಯುವತಿಯೊಂದಿಗೆ ವಿವೇಕ್ ಅಲಿಯಾಸ್ ಫರಾಜ್ ಖಾನ್ ಅಲಘರ್ ಜಿಲ್ಲೆಯ ಬಸಿ ಗ್ರಾಮದವನು ಎಂದು ಪರಿಚಯವಾಗಿದ್ದಾನೆ. ಪರಿಚಯವಾದ ಯುವಕ ಯುವತಿಯೊಂದಿಗೆ ಸ್ನೇಹ ಬೆಳೆಸಿಕೊಂಡು ಪರಸ್ಪರ ಮೊಬೈಲ್ ನಂಬರ್ ಶೇರ್ ಮಾಡಿಕೊಂಡಿದ್ದಾರೆ.

ಯುವತಿಗಾಗಿ ಯುವಕ ಉತ್ತರಪ್ರದೇಶದಿಂದ ಭದ್ರಾವತಿಗೆ ಬಂದು ಲಾಡ್ಜ್ ನಲ್ಲಿ ತಂಗಿದ್ದಾನೆ. ಪ್ರಿಯಕರನ ಆಗಮನದಿಂದ ಸಂತೋಷ ಪಟ್ಟ ಯುವತಿ ಆತನೊಂದಿಗೆ ಲಾಡ್ಜ್ ನಲ್ಲಿಯೇ ಕಾಲಕಳೆದಿದ್ದಾಳೆ. ಯಾವಾಗ ಯುವಕ ಉತ್ತರಪ್ರದೇಶಕ್ಕೆ ಹೋದಾಗ ಯುವತಿ ಒಮ್ಮೆ ಕರೆ ಮಾಡಿದಾಗ ಫರಾಜ್ ನ ಸ್ನೇಹಿತ ಕರೆ ಸ್ವೀಕರಿಸಿದ್ದಾನೆ. ಫರಾಜ್ ಗೆ ಮೊಬೈಲ್ ಕೊಡಿ ಎಂದು ಹೇಳಿದಾಗ ಫರಾಜ್ ಎಂಬುವರು ಯಾರೂ ಇಲ್ಲ.

ಆತ ವಿವೇಕ್ ಎಂದು ಹೇಳಿದ್ದಾನೆ. ಇದರಿಂದ ಶಾಕ್ ಆದ ಯುವತಿ ಕರೆ ಮಾಡುವುದನ್ನೇ ನಿಲ್ಲಿಸಿದ್ದಾಳೆ. ಯಾವಾಗ ಯುವತಿಗೆ ಯುವಕನ ಕೋಮುಗೊತ್ತಾಯಿತೋ ಅಲ್ಲಿಂದ ಆತನ ಕರೆ ಸ್ವೀಕರಿಸಿಲ್ಲ. ಆದರೂ ಬೆನ್ನು ಬಿಡದ ಯುವಕ ಮತ್ತೆ ಉತ್ತರಪ್ರದೇಶದಿಂದ ಭದ್ರಾವತಿಯ ದೊಣಬಘಟ್ಟದ ವರೆಗೆ ಸಾವಿರಾರು ಕಿಮಿ ದೂರದಿಂದ ಪ್ರಯಾಣ‌ಬೆಳೆಸಿ ಬಂದು ಬಿಟ್ಟಿದ್ದಾನೆ.

ನೀನು ಹಿಂದೂ ಆಗಿದ್ದೀಯ ನೀನು‌ ಮುಸ್ಲೀಂ ಆಗಿದ್ದಕ್ಕೆ ಮದುವೆಯಾಗಲು ಒಪ್ಪಿಕೊಂಡಿದ್ದೆ. ನಿನ್ನನ್ನ ನನ್ನ‌ ಸಮುದಾಯ ಒಪ್ಪುವುದಿಲ್ಲ. ನಿನ್ನನ್ನ ಮದುವೆಯಾಗಲು ಸಾಧ್ಯವಿಲ್ಲವೆಂದು ಯುವತಿ ಯುವಕನನ್ನ ತಿರಸ್ಕರಿಸಿದ್ದಾಳೆ. ಹಾಗಾದರೆ ನಿನಗೆ ಖರ್ಚು ಮಾಡಿದ ಒಂದು ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾನೆ. ಕೊಟ್ಟ ಗಿಫ್ಟ್ ಉಡುಗರೆ ಎಲ್ಲವೂ ಹಣವಾಗಿ ಬದಲಾಗಿದ್ದರಿಂದ ಯುವತಿ ಮೌನಕ್ಕೆ ಜಾರಿದ್ದಾಳೆ.

ಯಾವಾಗ ಯುವತಿ ಯುವಕನ ಬೇಡಿಕೆಗೆ ನಿರಾಕರಿಸಿದಳು ಎಂದು ತಿಳಿಯಿತೋ ಆಗ ಯುವಕ ಫೇಸ್ ಬುಕ್ ಪೇಜ್ ನಲ್ಲಿ ಯುವತಿಯ ಖಾಸಗಿ ವಿಡಿಯೋವನ್ನ ಹರಿಬಿಟ್ಟಿದ್ದಾನೆ. ಈ ವಿಡಿಯೋವನ್ನ ಪಕ್ಕದ ಮನೆಯ ಯುವಕ ನೋಡಿ ಯುವತಿಗೆ ತಿಳಿಸಿದ್ದಾನೆ. ಇದನ್ನ ಕಂಡ ಯುವತಿ ತಕ್ಷಣವೇ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ-https://suddilive.in/archives/4377

Related Articles

Leave a Reply

Your email address will not be published. Required fields are marked *

Back to top button