ಸ್ಥಳೀಯ ಸುದ್ದಿಗಳು

ಮಹಿಳೆಯರ ಮನಸ್ಸಿಗಿಂತ ಸೋಷಿಯಲ್ ಮೀಡಿಯ ಹೆಚ್ಚು ಸ್ಟ್ರಾಂಗು-ವಿನಯ್ ಗುರೂಜಿ

ಸುದ್ದಿಲೈವ್/ಶಿವಮೊಗ್ಗ

ಸ್ವದೇಶಿ ಎನ್ನುವುದು ಬ್ರ್ಯಾಂಡ್ ಅಲ್ಲ ಅದು ದೇಶದ  ‘ಹಿತಾಕ್ತಿಯ ಸಂಕೇತವಾಗಿದೆ, ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ಎಲ್ಲರೂ ರಾಷ್ಟ್ರ ಕಟ್ಟುವ ಪಣ ತೊಡಬೇಕಿದೆ ಎಂದು ಸ್ವದೇಶಿ ಜಾಗರಣ ಮಂಚ್‌ನ ಅಖಿಲ ಭಾರತ ಸಂಘರ್ಷ ವಾಹಿನಿ ಪ್ರಮುಖ ಅನ್ನದಾನಿ ಶಂಕರ ಪಾಣಿಗ್ರಾಹಿ ಕರೆ ನೀಡಿದರು.

ಸ್ವದೇಶಿ ಜಾಗರಣ ಮಂಚ್‌ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಸ್ವದೇಶಿ ಮೇಳದ ಸಮಾರೋಪ ಸಮಾರಂ‘ದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಭಾರತ ಸ್ವಾವಲಂಬಿಯಾಗಬೇಕು ಎನ್ನುವ ಆಶಯದೊಂದಿಗೆ ಸ್ವದೇಶಿ ಚಳವಳಿ ಆರಂಭಿಸಲಾಗಿದೆ. ದೇಶದ ಆರ್ಥಿಕ ವಿಕಾಸ ಸ್ವದೇಶಿಯಲ್ಲಿದೆ ಎಂದರು.

ಒಂದು ಕಾಲದಲ್ಲಿ ಜಪಾನ್ ಅತ್ಯಂತ ಬಡ ರಾಷ್ಟ್ರವಾಗಿತ್ತು. ದೇಶೀಯತೆಯಿಂದಾಗಿ ಇಂದು ತಂತ್ರಜ್ಞಾನದಲ್ಲಿ ಅತ್ಯುನ್ನತ ಸ್ಥಾನದಲ್ಲಿದೆ. ದಿನಬಳಕೆಯ ವಸ್ತುಗಳಿಂದ ಹಿಡಿದು ಚಂದ್ರಯಾನ ತಾಂತ್ರಿಕತೆ ಸ್ವದೇಶಿಯದ್ದಾಗಿದೆ. ಯುಪಿಐ ತಂತ್ರಜ್ಞಾನ ಸ್ವದೇಶಿಯದು. ಸ್ವದೇಶಿ ತಂತ್ರಜ್ಞಾನದ ಉತ್ಪನ್ನಗಳು ಇಂದು ವಿದೇಶಕ್ಕೆ ರ್ತಾಗುತ್ರಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗೌರಿಗದ್ದೆಯ ಅವದೂತ ಶ್ರೀ ವಿನಯ್ ಗುರೂಜಿ ಮಾತನಾಡಿ ದೇಶ ಸೇವೆ ಎಂದರೆ ಅಹಂಕಾರವನ್ನು ಬಿಟ್ಟು ಕೆಲಸ ಮಾಡುವುದು. ಮೋದಿಯವರ ಒಂದೊಂದು ಹೆಜ್ಜೆಯೂ ಸ್ವದೇಶಿಯಲ್ಲಿದೆ. ವಿದೇಶಿ ಬಳಕೆ ಸತ್ವವಿಲ್ಲದ ತರಕಾರಿ ತತ್ವ ಇಲ್ಲದ ವಚನದಂತೆ ಆಗಿದೆ ಎಂದರು.

ಭಾಷೆಯಲ್ಲಿರುವ ವಿದೇಶಿತನವನ್ನು ಮೊದಲು ತೆಗೆಯಬೇಕು. ಗೋಮಾತೆ, ಸ್ವಮಾತೆಯನ್ನು ಪೂಜಿಸುವವಗೆ ದೇವರ ಪೂಜೆಯೇ ಬೇಡ. ನಮ್ಮ ವಸ್ತುಗಳನ್ನು ನಾವು ಗೌರವಿಸುವುದನ್ನು ಕಲಿತಾಗ ಸ್ವದೇಶಿಯಾಗುತ್ತದೆ. ಅವಲಂಬನೆಯನ್ನು ಕಡಿಮೆ ಮಾಡಿದಾಗ ಸ್ವದೇಶಿತನ ಜಾಗೃತಿಯಾಗುತ್ತಿದೆ ಎಂದರು.

ಮಹಿಳೆಯೆ ಮನಸ್ಸಿಗಿಂತ ಸೋಷಿಯಲ್ ಮೀಡಿಯಾ ಅದಕ್ಕಿಂತ ವೇಗವಾಗಿದೆ. ಸ್ವದೇಶಿತನವನ್ನು ಮಹಿಳೆಯರಲ್ಲಿ ಮೊದಲು ಬೆಳೆಸಿದರೆ ದೇಶ ಬಲಿಷ್ಠವಾಗಲಿದೆ. ಸ್ವಲ್ಪ ಹಣವನ್ನು ಸ್ವದೇಶಿಗೆ ತೆಗೆದು ಇಟ್ಟರೆ ಇನ್ನಷ್ಟು ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಕೆ.ಎಸ್.ಈಶ್ವರಪ್ಪ ಮಾತು

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ ಸ್ವದೇಶಿ ಸಿದ್ಧಾಂತದಿಂದಾಗಿ ಯಾವುದೇ ಪ್ರಕೃತಿ ವಿಕೋಪದ ಸಂದ‘ರ್ದಲ್ಲಿ ಹೋರಾಡುವ ಶಕ್ತಿ ಬಂದಿದೆ. ಕೊರೋನಾ ಸಂದ‘ರ್ದಲ್ಲಿ ಮನೆಮನೆಗೆ ವಿತರಣೆ ಮಾಡಲಾಗಿದೆ. ಸಣ್ಣಸಣ್ಣ ವಸ್ತುಗಳಿಂದ ಹಿಡಿದು ಚಂದ್ರಯಾನದವರೆಗೆ ಸ್ವದೇಶಿ ಮಂತ್ರ ಕೆಲಸ ಮಾಡಿದೆ. ಇದರಿಂದ ದೇಶದ ಆರ್ಥಿಕತೆ ವೃದ್ಧಿಯಾಗಿದೆ ಎಂದರು.

ಡಾ. ಮುರುಘರಾಜೇಂದ್ರ ಸ್ವಾಮಿ

ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿ‘್ಯ ವಹಿಸಿದ್ದುಘಿ, ಸ್ವಾಗತ ಸಮಿತಿ ಅ‘್ಯಕ್ಷ ನಂಜುಂಡ ಶೆಟ್ಟರು ಅ‘್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಸಕರಾದ ಎಸ್. ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಅಮೃತ್ ನೋನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಮೂರ್ತಿ, ಹರ್ಷಕಾಮತ್, ‘ನಂಜಯ ಸರ್ಜಿ ಇದ್ದರು.

ಮಹಿಳೆಯೆ ಮನಸ್ಸಿಗಿಂತ ಸೋಷಿಯಲ್ ಮೀಡಿಯಾ ಅದಕ್ಕಿಂತ ವೇಗವಾಗಿದೆ. ಸ್ವದೇಶಿತನವನ್ನು ಮಹಿಳೆಯರಲ್ಲಿ ಮೊದಲು ಬೆಳೆಸಿದರೆ ದೇಶ ಬಲಿಷ್ಠವಾಗಲಿದೆ. ಸ್ವಲ್ಪ ಹಣವನ್ನು ಸ್ವದೇಶಿಗೆ ತೆಗೆದು ಇಟ್ಟರೆ ಇನ್ನಷ್ಟು ಬೆಳೆಯಲು ಸಹಕಾರಿಯಾಗುತ್ತದೆ

37.5 ಲಕ್ಷ ಜನ ವಿಸಿಟ್

ಕಳೆದ 5 ದಿನಗಳಿಂದ ನಡೆದ ದೇಶೀ ಮೇಳ ಅತ್ಯಂತ ಯಶಸ್ವಿಯಾಗಿದೆ. 3.75 ಲಕ್ಷಕ್ಕೂ ಹೆಚ್ಚು ಜನ ಇಲ್ಲಿದೆ ‘ೇಟಿ ನೀಡಿದ್ದಾರೆ. ಸುಮಾರು 7.73 ಕೋಟಿ ವೈಹಿವಾಟು ನಡೆದಿದೆ. 7 ಸಾವಿರಕ್ಕೂ ಹೆಚ್ಚು ಜನ ಲೈವ್ ನಲ್ಲಿ ವೀಕ್ಷಣೆ ಮಾಡಿದ್ದಾರೆ. ಪ್ರತಿನಿತ್ಯ ಆಯೋಜಿಸುತ್ತಿದ್ದ ಸಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಚಾರಗೋಷ್ಠಿಗಳು ಮಹತ್ವಪೂರ್ಣವಾಗಿದ್ದವು.

ಇದನ್ನೂ ಓದಿ-https://suddilive.in/archives/4650

Related Articles

Leave a Reply

Your email address will not be published. Required fields are marked *

Back to top button