ಸ್ಥಳೀಯ ಸುದ್ದಿಗಳು

ಪ್ಯೂರಿಫೈ ವಾಟರ್ ಫಿಲ್ಟರ್ ಖರೀದಿಯಲ್ಲಿ ಹಗರಣ

ಸುದ್ದಿಲೈವ್/ಭದ್ರಾವತಿ

ಫ್ಯೂರಿಫೈ ವಾಟರ್ ಫಿಲ್ಟರ್ ನಲ್ಲೂ ಹಗರಣ ಕಂಡು ಬಂದಿದೆ. ಭದ್ರಾವತಿ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಖರೀದಿಯಾದ 80 ವಾಟರ್ ಫಿಲ್ಟರ್ ನಲ್ಲೂ ಹಗರಣದ ಕೂಗು ಕೇಳಿ ಬಂದಿದೆ.

ಭದ್ರಾವತಿ ತಾಲೂಕು ಪಂಚಾಯಿತಿಯ ಸಂಯುಕ್ತ ಅನುದಾನ 2023 24 ನೇ ಸಾಲಿನಲ್ಲಿ 4,76,000 ಹಣವನ್ನು ಭದ್ರಾವತಿ ತಾಲೂಕಿನ ಅದ್ಯಾಂತ ಹಳ್ಳಿಗಾಡಿನ ಗಡಸು ನೀರು ಇರುವ ಪ್ರದೇಶದಲ್ಲಿ ಇರುವ ಅಂಗನವಾಡಿಗಳಿಗೆ ಸಣ್ಣ ಮಕ್ಕಳು ಕುಡಿಯಲು ಉತ್ತಮವಾದ ಗುಣಮಟ್ಟದ ಶುದ್ಧ ನೀರಿಗೋಸ್ಕರ ವಾಟರ್ ಫ್ಯುರಿ ಫೈಯರ್ ಖರೀದಿಸಿ 80 ಅಂಗನವಾಡಿಗಳಿಗೆ ತಲಾ ಒಂದರಂತೆ ನೀಡಿರುತ್ತಾರೆ

ವಿಪರ್ಯಾಸವೇನೆಂದರೆ ತಾಲೋಕ ಪಂಚಾಯಿತಿಯವರು ನೀಡಿರುವ ಒಂದು ವಾಟರ್ ಪ್ಯೂರಿಫೈಯರ್‌ಗೆ 5950 ರೂಗಳು ವೆಚ್ಚದಲ್ಲಿ ಖರೀದಿ ಮಾಡಿದ್ದಾರೆ.
ಆದರೆ ಈ ಪ್ಲಾಸ್ಟಿಕ್ ಡಬ್ಬದಂತಿರುವ ಇದಕ್ಕೆ ಯಾವುದೇ ಎಂ ಆರ್ ಪಿ ಇಲ್ಲ ಇದೇ ತರಹದ ಬೇರೆ ವಾಟರ್ ಪ್ಯೂರಿಫೈಯರ್ ಕೇವಲ 800 ರಿಂದ 1200 ಗಳ ಒಳಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂಬ ಆರೋಪ ಕೇಳಿ ಬಂದಿದೆ.

5,900ಗಳಲ್ಲಿ ನಾಲ್ಕುವರೆಯಿಂದ 5000 ಹಣ ನುಂಗಿರುವ ಭದ್ರಾವತಿಯ ತಾಲೂಕು ಪಂಚಾಯಿತಿಯ ಭ್ರಷ್ಟ ಅಧಿಕಾರಿಗಳು ಶಾಮೀಲಾಗಿರುವ ಕೂಗು ಕೇಳಿ ಬಂದಿದೆ.

ಕಾಡಂಚಿನ ಬಡ ಅಂಗನವಾಡಿ ಮಕ್ಕಳು ಕುಡಿಯುವ ನೀರಿನಲ್ಲಿ ಹಣ ಎತ್ತುವ ಈ ಭ್ರಷ್ಟ ಆಧಿಕಾರಿಗಳಿಗೆ ಅಮಾನತ್ತು ಶಿಕ್ಷೆ ಸರಿಯಲ್ಲ ಇದರಲ್ಲಿ ಪಾಲ್ಗೊಂಡ ಅಧಿಕಾರಿಗಳನ್ನು ಗ್ರಾಮೀಣ ಅಭಿವೃದ್ಧಿ ಸಚಿವರಾದ ಪ್ರಿಯಾಂಕಾ ಖರ್ಗೆಯವರೇ ಈ ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದಲೇ ವಜಾ ಗೊಳಿಸಬೇಕು  ಎಂಬ ಬೇಡಿಕೆ ಕೇಳಿ ಬಂದಿದೆ.

ಮಕ್ಕಳ ಕುಡಿಯುವ ನೀರಿನ ಹೆಸರು ಹೇಳಿ ತಾಲೂಕ್ ಪಂಚಾಯಿತಿ ಅನುದಾನದಲ್ಲಿ ಸರ್ಕಾರ ಹಣವನ್ನು ಲಪಟಾಯ್ಸಿರುವ ಭ್ರಷ್ಟ ಅಧಿಕಾರಿಗಳನ್ನು ತಕ್ಷಣವೇ ಮಾನ್ಯ ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳು  ಸೇವೆಯಿಂದ ವಜಗೊಳಿಸಬೇಕು  ಎಂದು ಶಿವಕುಮಾರ್ ಸಾಮಾಜಿಕ ಹೋರಾಟಗಾರರು !ಆಗ್ರಹಿಸಿದರು

ಇದನ್ನೂ ಓದಿ-https://suddilive.in/archives/4352

Related Articles

Leave a Reply

Your email address will not be published. Required fields are marked *

Back to top button