ರಾಜ್ಯ ಸುದ್ದಿಗಳು

ಏನಾಯಿತು ಸಭೆ? ಈಗಲಾದರೂ ಬುದ್ದಿ ಕಲಿತಾವಾ ಖಾಸಗಿ ಶಾಲೆಗಳು?

ಸುದ್ದಿಲೈವ್/ಶಿವಮೊಗ್ಗ

ಶಾಲೆಯ ಕಟ್ಟಡದಿಂದ ಹಾರಿ ಸಾವನ್ನಪ್ಪಿದ ಪ್ರಕರಣ ಎಸ್ಪಿ ನೇತೃತ್ವದಲ್ಲಿ ನಡೆದ ಘಟನೆ ಸುಖಾಂತ್ಯಗೊಂಡಿದೆ. ಪ್ರಕರಣ ಎಫ್ಐಆರ್‌ ಆಗಿದ್ದು, ತನಿಖೆಯ ನಂತರ ಮುಂದಿನ ಕ್ರಮಕ್ಕೆ ಕುಟುಂಬ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಸುಧೀರ್ಘ ಸಮಯದ ನಂತರ ಪ್ರಕರಣ ಇತ್ಯಾರ್ಥಗೊಂಡಿದೆ.

ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಮೇಘಶ್ರೀ ಆದಿಚುಂಚನಗಿರಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ಪ್ರಕರಣ ಮಧ್ಯಾಹ್ನದ ಹೊತ್ತಿಗೆ ಪೋಷಕರ ಆಗಮನದಿಂದ ರಣರಂಗವಾಗಿತ್ತು. ಅಕ್ಷರಶಃ ಪೋಷಕರ ಆಕ್ರೋಶ ಮುಗಿಲುಮುಟ್ಟಿತ್ತು. ಕಾಲೇಜಿನ ಶಿಕ್ಷಕರು ಮತ್ತು ವಾರ್ಡನ್ ಗಳ ಹೆಸರನ್ನ ಬಹಿರಂಗ ಪಡಿಸಿ ಕುಟುಂಬ ಮಗಳು ಇವರ ಹೆಸರು ಹೇಳಿದ್ದಳು ಎಂದು ಹೇಳಿದ್ದರು.

ಇದರ ಮಧ್ಯೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ಸಲ್ಲಿಸಿದ್ದರು ಸಂಜೆಯ ವೇಳೆ ಎಫ್ಐಆರ್ ದಾಖಲಾಗಿತ್ತು. ಎಫ್ಐಆರ್‌ ದಾಖಲಾಗುತ್ತಿದ್ದಂತೆ ಆರೋಪಿತರನ್ನ ಬಂಧಿಸುವಂತೆ ಪೋಷಕರರು ಆಗ್ರಹಿಸಿದ್ದರು.

ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದೆ. ಸುಧೀರ್ಘ ಸಭೆ ಒಳಗೆ ನಡೆಯುತ್ತಿದ್ದರೆ ಮೃತ ವಿದ್ಯಾರ್ಥಿನಿಯರ ತಾಯಿ ಮತ್ತು ಸಂಬಂಧಿಕರ ಆಕ್ರೋಶ ಮುಗಿಲುಮುಟ್ಟಿತ್ತು. ಸಭೆಯಲ್ಲಿ ಸಿಸಿ ಟಿವಿ ವಿಡಿಯೋ ಪರಿಶೀಲಿಸಿ  ತನಿಖೆ ನಡೆಸಿ ನಂತರ ಆರೋಪಿಗಳನ್ನ ಬಂಧಿಸುವ ತೀರ್ಮಾನ ನಡೆದಿದೆ ಎಂಬ ಅಂಶ ತಿಳಿದುಬಂದಿದೆ.

ಖಾಸಗಿ ಶಾಲೆಗಳಿಗೆ ಏನಾಗಿದೆ?

ಮೇಘಶ್ರೀ ಸಾವಿನಿಂದ ಧನದಾಹದ ಹಿಂದಿರುವ‌ ಬಹುತೇಕ ಖಾಸಗಿ ಶಾಲೆಗಳು ಪಾಠ ಕಲಿಯುತ್ತಾವಾ ಎಂಬ ಕುತೂಹಲ ಹೆಚ್ಚಿಸಿವೆ. ದೊಡ್ಡ ಸಮಾಜದ ಶಾಲೆ ಎನ್ನುವುದಕ್ಕಿಂತ ಎಲ್ಲಾ ಖಾಸಗಿ ಶಾಲೆಗಳ ಗುರಿ ಒಂದೇ… ಹಾಗಾಗಿ ಖಾಸಗಿ ಶಾಲೆಗಳು ಸ್ವಲ್ಪ ರಿಲ್ಯಾಕ್ಸ್ ಆಗಿ ನಡೆದುಕೊಳ್ಳುವ ಅಗತ್ಯವಿದೆ.

ಇನ್ನೂ, ಇದುವರೆಗೆ ನಡೆಸಿಕೊಂಡು ಬಂದಿರುವ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ವಿಚಾರದಲ್ಲಿ ಮೌನ ಮುರಿಯಬೇಕಿದೆ. ಈ ಎರಡೂ ಕ್ಷೇತ್ರಗಳನ್ನ‌ ಖಾಸಗಿಗಳಿಗೆ ಮಾರಾಟ ಮಾಡಿದಂತೆ ಸರ್ಕಾರ ನಡೆದುಕೊಳ್ಳುವುದರಿಂದ ಇಂತಹ ದಿನಗಳು ಎದುರಾಗಿದೆ.

ಇದನ್ನೂ ಓದಿ-https://suddilive.in/archives/4331

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373