ಸ್ಥಳೀಯ ಸುದ್ದಿಗಳು

ನಾಳೆಯಿಂದ ಮೂರು ದಿನಗಳ ವರೆಗೆ ಉರುಸ್

ಸುದ್ದಿಲೈವ್/ಶಿವಮೊಗ್ಗ

ಡಿ.5 ರಿಂದ 7 ರವರೆಗೆ ನಗರದ  ಮಹಾವೀರ ವೃತ್ತದ ಬಳಿ ಇರುವ  ಇತಿಹಾಸ ಪ್ರಸಿದ್ದ ಸೂಫಿ ಸಂತರಾದ ಹಜ್ರತ್ ಸೈಯದ್ ಷಾ ಅಲೀಂ ದಿವಾನ್ (ರ) ಅಲೈ ಬಾಬಾರವರ ಸಂದಲ್ ಮತ್ತು ಉರುಸ್ ನಡೆಯಲಿದೆ.‌

ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಾರಿ ವಿಜೃಂಭಣೆಯಿಂದ ಸಂದಲ್ ಮತ್ತು ಉರುಸ್ ನಡೆಸಲು ತೀರ್ಮಾನಿಸಲಾಗಿದೆ.  ಸಮಿತಿಯ ಅಧ್ಯಕ್ಷರಾದ ಜೆಫ್ರುಲ್ಲಾ ಖಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಾಳೆ ಅಂದರೆ ಡಿ. 05, 06 ಮತ್ತು 07 ರಂದು ನಡೆಸಲು ನಿರ್ಧರಿಸಿದೆ.

ಈ ಉತ್ಸವದಲ್ಲಿ ಡಿ.05 ರ ಮಂಗಳವಾರ ಸಂದಲ್ ಕಾರ್ಯಕ್ರಮವಿರುತ್ತದೆ. ನಗರದ ಪ್ರಮುಖ ಬೀದಿಗಳಲ್ಲಿ ಸಂದಲ್ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ರಾತ್ರಿ 8.00 ಗಂಟೆಯಿಂದ 12.30 ರ ಮಧ್ಯರಾತ್ರಿಯವರೆಗೆ ದರ್ಗಾ ಆವರಣದಲ್ಲಿ ಸ್ವಚನ ಕಾರ್ಯಕ್ರಮವಿರುತ್ತದೆ. ದಿನಾಂಕ: 06/12/2023 ರ ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಮುಸ್ಲಿಮ್ ವಧುವರರ ಸಾಮೂಹಿಕ ವಿವಾಹ ಕಾರ್ಯಕ್ರಮವಿರುತ್ತದೆ.

ಹಾಗೂ 11.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಸರ್ವಧರ್ಮದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವಿರುತ್ತದೆ. ದಿನಾಂಕ: 07/12/2023 ರ ಗುರುವಾರ ದಂದು ರಾತ್ರಿ 9.00 ಗಂಟೆಯಿಂದ ತಡರಾತ್ರಿಯವರೆಗೆ ಕವಾಲಿ ಕಾರ್ಯಕ್ರಮವಿರುತ್ತದೆ.

ಈ ಮೂರು ದಿವಸ ನಡೆಯುವ ಕಾರ್ಯಕ್ರಮಗಳಿಗೆ ಶ್ರೀಶ್ರೀಶ್ರೀ ಅಲ್‌ಹಾಜ್ ಹಜ್ರತ್ ಸ್ವಾಜ ಸೈಯದ್ ಷಾ ಸಾನಿ ಜೈನುಲ್‌ಆಬೀನ್ (ಮನ್ನ ಸಾಹೆಬ್), ಹಜ್ರತ್ ಸ್ವಾಜ ನೂರ್ ಬಾಬಾ ಹುಸೈನಿ ಮದನ್ ಪಲ್ಲಿ (ಎ.ಪಿ), ಹಜ್ರತ್ ಸೈಯದ್ ಗೌಸ್ ಮುಹಿನುದ್ದಿನ್ ಷಾ ಖಾದ್ರಿ, ಹಜ್ರತ್ ಸೈಯದ್ ದಾದಾ ಹಯಾತ್ ಮೀರ್ ಖಲಂದರ್ ಸದ್ರ ಸಲವಾತಿ ಕೂಚೆ ದಾದಾ ಪಹಡ್, ಹಜ್ರತ್ ಸೈಯದ್ ಪೀರ್ ಪಾಷಾ ಹಫೀಜ್ ಖಾದ್ರೀ ಬಡೆ ಷಾ ಪಾಳ್ಯ ತುಮಕೂರು,

ಹಜ್ರತ್ ಸೈಯದ್ ಸೂಪಿ ಹಸನ್ ಷಾ ಚಿಸ್ತಿ ಸರ್ಕಾರ್ ಕಾಪ್ ಮತ್ತು ಹಜ್ರತ್ ಮೌಲಾನ ಸೈಯದ್ ಷಾ ಅಷ್ಟೇ ಮುಸ್ತಫಾ ಖಾದ್ರಿ ಅಲ್ ಮುಸವಿ ಅಲ್ ಜೀಲಾನಿ ಅಲ್ ಮಾರೂಫ್ ಅಲಿ ಪಾಷ ಸಾಹೆಬ್ ಇವರು ಪ್ರವಚನ ನೀಡಲಿದ್ದಾರೆ ಮುಖ್ಯ ಅಥಿತಿಗಳಾಗಿ ಆಗಮಿಸುತ್ತಾರೆ. ಸಂದಲ್ ಮತ್ತು ಉರುಸ್ ಸಮೀತಿಯ ಉಸ್ತುವಾರಿಯಲ್ಲಿ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.‌

ಇದನ್ನೂ ಓದಿ-https://suddilive.in/archives/4257

Related Articles

Leave a Reply

Your email address will not be published. Required fields are marked *

Back to top button