ಕಾರಾಗೃಹದಲ್ಲಿ ಕೈದಿಗಳಿಂದ ಇನ್ಸಟಾಗ್ರಾಮ್ ಮೂಲಕ ಸ್ನೇಹಿತರಿಗೆ ಕರೆ-ತಡವಾಗಿ ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ಕಾರಾಗೃಹದಿಂದ ಕರೆ ಮಾಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಬಾರಕ್ @ಡಿಚ್ಚಿ ಮುಬಾರಕ್, 02) ಸೈಯದ್ ಟಿಪ್ಪುಸುಲ್ತಾನ್ 03) ಶಾಬಾಜ್ ಷರೀಫ್ 04) ಜಬೀರ್ ಬಾಷಾ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗ ಕೇಂದ್ರ ಕಾರಾಗ್ರಹದ ಯು ಟಿ ಪಿ ಬಂದಿಗಳಾದ 01)ಮುಭಾರಕ್ @ಡಿಚಿ ಮುಬಾರಕ್ 02) ಸೈಯದ್ ಟಿಪ್ಪುಸುಲ್ತಾನ್ 03) ಶಾಬಾಜ್ ಷರೀಫ್ 04) ಜಬೀರ್ ಬಾಷಾ ಶರಾವತಿ ವಾರ್ಡನ ರೂಂ ನಂ 13 ರಲ್ಲಿ ಈ ವರ್ಷದ ಏ.07 ರಂದು ಸುಮಾರು ಸಂಜೆ ಇನ್ಸ್‌ಟಾಗ್ರಾಮ್ ನಲ್ಲಿ ತಮ್ಮ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿದ್ದರು.
ಈ ಬಗ್ಗೆ ಉಪಾ ಮಹಾ ನಿರೀಕ್ಷಕರು ದಕ್ಷಿಣ ವಲಯ ಕಾರಾಗ್ರಹ ಮತ್ತು ಸುಧಾರಣ ಸೇವೆ ರವರು ಬಂದಿಗಳ ವಿರುದ್ಧ ಕಾನೂನು ಕ್ರಮಕ್ಕಾಗಿ ಸೂಚಿಸಿದ ಮೇರೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅದೀಕ್ಷಕರು ತಮ್ಮ ಕಾರಾಗೃಹದ ಅಧೀಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಖೈದಿಗಳ ಕೊಠಡಿಗಳನ್ನು ಕೂಲಂಕುಶವಾಗಿ ತಪಾಸಣೆ ಮಾಡಿದ್ದರು. ಆದರೆ ಯಾವುದೇ ರೀತಿ ಮೊಬೈಲ್ ಸಿಕ್ಕಿರುವುದಿಲ್ಲ.
ವಿಡಿಯೋದಲ್ಲಿ, ಕಂಡು ಬಂದಂತಹ ವ್ಯಕ್ತಿಗಳು ಮತ್ತು ಕಾರಾಗ್ರಹದ ಖೈದಿಗಳಿಗೆ ಹೋಲಿಕೆ ಇರುವುದರಿಂದ ತಡವಾಗಿ ದೂರು ದಾಖಲಾಗಿದೆ. ಕಾರಾಗೃಹದಲ್ಲಿ ಮೊಬೈಲ್ ಬಳಕೆ ಆರೋಪ ಸಂಬಂಧ ಕಳೆದ ವಾರದ ಹಿಂದಷ್ಟೆ ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಮೊಬೈಲ್ ಕೀ ಪ್ಯಾಡೊಂದು ನೆಲದಲ್ಲಿ ಹೂತುಹಾಕಿರುವುದು ಪತ್ತೆಯಾಗಿತ್ತು. ಈ ಪ್ರಕರಣ ಹೊರತು ಪಡಿಸಿ ಪೊಲೀಸರು ಅನೇಕ ಬಾರಿ ದಾಳಿ ನಡೆಸಿದಾಗಲೂ ಮೊಬೈಲ್ ಮಾತ್ರ ಪತ್ತೆಯಾಗಿಲ್ಲ.
ಇದನ್ನೂ ಓದಿ-https://suddilive.in/archives/2060
