ಕಾಡಾನೆಗಳ ಹಾವಳಿಗೆ ರೈತರು ತತ್ತರ-ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಮತ್ತೆ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಮುಂದುವರೆದಿದೆ. ಮಲೆನಾಡಿನ ಹಲವೆಡೆ ಕಾಡಾನೆಗಳ ಹಾವಳಿ ಮುಂದುವರೆದಿದ್ದು ಬೆಳೆಗಳು ಹಾನಿಗೊಳಗುತ್ತಿವೆ.
ಬರದ ನಡುವೆ ಬಂದಿದ್ದ ಅಲ್ಪಸ್ವಲ್ಪ ಬೆಳೆಯೂ ಇದೀಗ ವನ್ಯಜೀವಿಗಳ ಪಾಲಾಗಿವೆ. ರೈತರ ಜಮೀನಿಗೆ ನುಗ್ಗಿದ ಕಾಡಾನೆಗಳು ರೈತರು ಬೆಳೆದ ಬೆಳೆಗಳನ್ನ ನಾಶ ಪಡಿಸುತ್ತಿವೆ. ಶಿವಮೊಗ್ಗದ ಮಲೆಶಂಕರ, ಮಂಜರಿಕೊಪ್ಪ ಗ್ರಾಮದಲ್ಲಿ ಕಾಡಾನೆಗಳು ಹಿಂಡು- ಹಿಂಡಾಗಿ ದಾಳಿ ನಡೆಸಿರುವುದು ತಿಳಿದು ಬಂದಿದೆ.
ಶಿವಮೊಗ್ಗ ತಾಲೂಕಿನ ಸಿರಿಗೆರೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ದಾಳಿ ನಡೆದಿದೆ. ಪುರದಾಳು ಗ್ರಾ.ಪಂ ವ್ಯಾಪ್ತಿಯ ನಾಗಮ್ಮ ಕಾಲೋನಿ, ದುರ್ಗಾಂಬ ಕಾಲೋನಿಯಲ್ಲೂ ಕಾಡಾನೆ ಉಪಟಳ ಹೆಚ್ಚಾಗಿವೆ. ಭತ್ತ, ಅಡಿಕೆ, ಬಾಳೆ, ಜೋಳ, ಶುಂಠಿ ಸೇರಿದಂತೆ ಹಲವು ಬೆಳೆಗಳನ್ನ ಕಾಡಾನೆ ಹಿಂಡು ನಾಶಪಡಿಸಿವೆ.
ಮರಗಳ ಮೇಲೆ ವಾಚ್ ಟವರ್ ನಿರ್ಮಿಸಿ, ರಾತ್ರಿ ಇಡೀ ಫಸಲನ್ನು ರೈತರು ಕಾಯುವ ಪರಿಸ್ಥಿತಿಗೆ ಮುಂದಾಗಿದ್ದಾರೆ. ಆದರೂ, ಗುಂಪು ಗುಂಪಾಗಿ ದಾಳಿ ನಡೆಸಿ ಆನೆಗಳು ಬೆಳೆ ನಾಶ ಪಡಿಸುತ್ತಿವೆ. ಭದ್ರಾ ಅಭಯಾರಣ್ಯದಿಂದ ಬಂದ ಆನೆಗಳು ನಿರಂತರ ದಾಳಿ ಮಾಡುತ್ತಿವೆ. ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ಹೆಚ್ಚು ದಾಳಿ ಮುಂದುವರೆದಿವೆ.
ಇದರಿಂದಾಗಿ ಶಿವಮೊಗ್ಗದ ತಾಲೂಕಿನ ಹಲವು ಗ್ರಾಮಗಳ ರೈತರಲ್ಲಿ ಆತಂಕ ಹೆಚ್ಚಿಸಿವೆ. ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಿವೆ.ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ರೂ ಅರಣ್ಯ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರೈತರ ಒತ್ತಾಯಿಸಿದ್ದಾರೆ. ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ವಾಪಸ್ ಕಳುಹಿಸುವ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆಗೆ ಆಗ್ರಹ.
ಇದನ್ನೂ ಓದಿ-https://suddilive.in/archives/2816
