ರಾಷ್ಟ್ರೀಯ ಸುದ್ದಿಗಳು

ಫಿಟ್ಟಿಂಗ್ ಇಡುವವರಿಗೆ ಸಿಎಂ ಬುಲ್ಡೋಜರ್ ಓಡಿಸಿದ್ದಾರೆ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಫ್ರೀಡಂ‌ಪಾರ್ಕ್ ಗೆ ಅಲ್ಲಮ ಪ್ರಭು ಹೆಸರಿಡುವ ವಿಷಯದಲ್ಲಿ ಎದ್ದಿರುವ ಚರ್ಚೆಯ ಬೆನ್ನಲ್ಲೇ ಮತ್ತೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಬಳ್ಳಿಗಾವಿಯಲ್ಲಿ ಅಲ್ಲಮನ ಜನ್ಮಸ್ಥಳಕ್ಕೆ ಭೇಟಿ ನೀಡಿದ ಸಮಯದಲ್ಲಿ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ ಇದೇ ಜಿಲ್ಲೆಯಿಂದ ವಿಧಾನ ಸಭಾ‌ ಕ್ಷೇತ್ರದಿಂದ ಸ್ಪರ್ಧಿಸಿ ನಾಲ್ಕು ಬಾರಿ ಸಿಎಂ‌ ಆದವರಿಗೆ ಅಲ್ಲಮನ ಜನ್ಮ ಸ್ಥಳವಾಗಲಿ ಫ್ರೀಡಂ ಪಾರ್ಕ್ ಗೆ ಆಗಲಿ ಹೆಸರು ಯಾಕೆ ಇಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಸಿದ ಸಚಿವರು ಇದ್ನೆಲ್ಲಾ ಮಾಧ್ಯಮಗಳ ವಿವೇಚನೆಗೆ ಬಿಡ್ತಿನಿ ಎಂದು ಹೇಳಿದರು.

ಚಂದ್ರಶೇಖರ್ ಆಜಾದ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಆದರೆ ಅಲ್ಲಮ ಪ್ರಭುವಿನ ಹೆಸರಿಡಲು ಕೆಲವರು ಪ್ರಯತ್ನ ಪಟ್ಟಿದ್ದಾರೆ. ಯುವನಿಧಿ ಕಾರ್ಯಕ್ರಮದಲ್ಲಿ ಸಿಎಂ ಎದರಲ್ಲೇ ಫಿಟ್ಟಿಂಗ್ ಇಡುವ ಕೆಲಸ ನಡೆದಿದೆ. ಅದಕ್ಕೆಲ್ಲ ಸಿಎಂ ಬುಲ್ಡೋಜರ್ ಹೊಡೆದಿದ್ದಾರೆ ಎಂದು ಬಿಜೆಪಿ ಶಾಸಕರ ಹೆಸರು ಹೇಳದೆ ಟಾಂಗ್ ನೀಡಿದರು.

ಅಲ್ಲಮನ ಜನ್ಮಸ್ಥಳ ಬಹಳ ಹಿಂದು ಉಳಿದಿದೆ. ಕೆಲ ತಾಂತ್ರಿಕ ದೋಷಗಳಿವೆ. ಇಲ್ಲಿಗೆ ಬಂದಾಗ ಮನಸ್ಸಿಗೆ ನೋವಾಗಿದೆ. ನಾಲ್ಕು ಬಾರಿ ಸಿಎಂ ಆದವರಿಗೆ ಯಾಕೆ ಕೆಲಸ ಮಾಡಿಲ್ಲ ಎಂದು ಮಾಧ್ಯಮದವರು ಕೇಳಲಿ ಆದರೆ ಈಗ ನನಗೆ ಕೆಲಸ ಕೊಟ್ಟಿದ್ದಾರೆ. ಮಾಡುತ್ತೇನೆ ಎಂದರು.

ಆರ್ಕಿಯಾಲಜಿ ಇಲಾಖೆ ಇರುವುದರಿಂದ ಅಭಿವೃದ್ಧಿ ಆಗಿಲ್ಲ ಎಂಬ ಮಾತು ಕೇಳಿ ಬಂದಿದೆ. ಕಸ ಹೊಡೆದು ಸಗಣಿ ನೀರಾದರೂ ಹಾಕಿದ್ರೆ ಚೆನ್ನಾಗಿ ಇರೋದು ಎಂದು ಸಚಿವರು ಹೇಳಿದರು. ಸಂಕ್ರಾಂತಿ ಹಬ್ಬಕ್ಕೆ ಹೊಸ ಯುಗ ಪ್ರಾರಂಭವಾಗಲಿದೆ. ಅಲ್ಲಮನ ಜಾಗ ಅಭಿವೃದ್ಧಿ ಪಡಿಸಬೇಕಿದೆ ಎಂದು ಹೇಳಿದರು.

ಅಲ್ಲಮನ ಹೆಸರು ರಾಜಕೀಯ ಸ್ಬರೂಪ ಪಡೆದುಕೊಳ್ಳುತ್ತಿದೆ ಎಂಬ‌ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜಕಾರಣ ಪಡೆದುಕೊಳ್ಳುತ್ತಿರುವಂತೆ ಮಾಡುತ್ತಿರುವುದು ಮಾಧ್ಯಮದವರು. ಆದರೆ ಅದು ರಾಜಕಾರಣ ಪಡೆದುಕೊಳ್ಳಲಿ ಎಂದೇ ಆಶಿಸುವೆ ಎಂದು ಹೇಳಿದರು.

ರಾಜಕಾರಣ ಸ್ವರೂಪ ಪಡೆದುಕೊಳ್ಳುವುದು ಯಾಕೆ ಸೂಕ್ತ ಎಂದರೆ ದೇವರ ಹೆಸರಿನಲ್ಲಿ ರಾಜಕಾರಣ ಮಾಡಬಾರದು. ಮತದಾರರು ಜನ, ಆದರೆ ದೇವರ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ. ರಾಜಕಾರಣಕ್ಕೆ ಮಾಡಲು ಬಂದಿಲ್ಲ. ಕೆಲಸ ಮಾಡಲು‌ ಬಂದಿದ್ದೇವೆ. ದೇವರ ಹೆರಿನಲ್ಲಿ ರಾಜಕಾರಣ ಮಾಡುವ ಮಂದಿಗೆ ಜನ ಉತ್ತರ ಕೊಡ್ತಾರೆ ಎಂದು ತಿಳಿಸಿದರು.

ಅಯೋಧ್ಯಗೆ ನೀವು ಭೇಟಿ ಮಾಡುತ್ತೀರಾ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿಎಂನ್ನೇ ರಾಮ ಮಂದಿರ ಉದ್ಘಾಟನೆಗೆ ಕರೆಯದಿದ್ದರೆ ನಮ್ಮನ್ನ ಲೆಕ್ಕಕ್ಕೆ ಇಟ್ಟಿರೊಲ್ಲ. ಜ.22 ರ ನಂತರ ಅತೋಧ್ಯೆಗೆ ಭೇಟಿಕೊಡುವೆ. ನೋಡೋಣ ರಾಮ ಯಾವಾಗ ಕರೆಯುತ್ತಾನೆ ನೋಡೋಣ ಎಂದರು.

ಅನಂತ ಕುಮಾರ್ ಹೆಗಡೆ ವಿಚಾರ ಕುರಿತು ಪ್ರತಿಕ್ರಯೆಗೆ ನಿರಾಕರಿಸಿದ ಸಚಿವರು, ಇಂತಹವರಿಗೆ ಅಲ್ಲಮ ಬುದ್ದಿಕೊಡಬೇಕು. ಕೆಲವರು ಇಂತಹರಿದ್ದಾರೆ. ಅವರಿಗೆ ದೇವರೇ ಕೆಲವೊಮ್ಮೆ ಕೈಕೊಡುತ್ತೆ ಎಂದು ಹೇಳಿದರು.

ಇದನ್ನೂ ಓದಿ-https://suddilive.in/archives/6823

Related Articles

Leave a Reply

Your email address will not be published. Required fields are marked *

Back to top button