ದ್ವಿಚಕ್ರ ವಾಹನದಲ್ಲಿ ಹೋಗುವಾಗ ಸ್ಕಿಡ್ ಆಗಿ ಬಿದ್ದು ಮಹಿಳೆ ಸಾವು

ಸುದ್ದಿಲೈವ್/ಹೊಳೆಹೊನ್ನೂರು

ಹೊಳೆಹೊನ್ನೂರಿನ ದರ್ಗಾದ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಸ್ಕಿಡ್ ಆಗಿ ಬಿದ್ದು ಮಹಿಳೆಯೋರ್ವರು ಸಾವನ್ಬಪ್ಪಿರುವ ಘಟನೆ ಮೊನ್ನೆ ನಡೆದಿದೆ.
ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಗುರುಮ್ಮ ಕೆಲಸ ನಿಮಿತ್ತ ಮಗ ಸಾಯಿ ಪುನೀತ್ ಜೊತೆ ಕೆಎ 14 ಇಟಿ 8160 ಕ್ರಮಸಂಖ್ಯೆಯ ಟಿವಿಎಸ್ ವಿಗೋ ವಾಹನದಲ್ಲಿ ಹೊಳೆಹೊನ್ನೂರಿಗೆ ತೆರಳಿದ್ದರು. ಇಬ್ಬರೂ ಬುಕ್ಲಾಪುರದ ನಿವಾಸಿಗಳಾಗಿದ್ದರು.
ಮಗ ಹೊಳೆಹೊನ್ನೂರು ಸರ್ಕಲ್ ಬಳಿ ಇಳಿದುಕೊಂಡಿದ್ದು ತಾಯಿ ಚನ್ನಗಿರಿ ರಸ್ತೆಯ ಬಳಿ ಹಣ್ಣು ಖರೀದಿಸಲು ವಾಹನದಲ್ಲಿ ತೆರಳಿದ್ದಾರೆ. ತಾಯಿ ತೆರಳಿದ ಸ್ವಲ್ಪ ಸಮಯದ ವೇಳೆ ಇರ್ಫಾನ್ ಎಂಬುವರು ಕರೆಮಾಡಿ ದರ್ಗಾದ ಬಳಿ ಓರ್ವ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮೊಬೈಲ್ ಡಯಲ್ ನಲ್ಲಿ ನಿಮ್ಮಹೆಸರು ಇತ್ತು ಮಾಡಿರುವೆ ಎಂದು ತಿಳಿಸಿದ್ದಾರೆ.
ತಕ್ಷಣವೇ ಸ್ಥಳಕ್ಕೆ ತೆರಳಿದ ಸಾಯಿ ಪುನೀತ್ ಪ್ರಜ್ಞೆತಪ್ಪಿ ಬಿದ್ದಿರುವ ತಾಯಿಯನ್ನ ತಕ್ಷಣವೇ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದು ಅಲ್ಲಿ ವೈದ್ಯರು ಗುರುಮ್ಮ ಸಾವನ್ನಪ್ಪಿರುವುದನ್ನ ದೃಢಕರಿಸಿದ್ದಾರೆ. ಗುರುಮ್ಮ ದ್ವಿಚಕ್ರವಾಹನದಲ್ಲಿ ತೆರಳುವಾಗ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿರುವುದಾಗಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/1237
