ಕ್ರೈಂ ನ್ಯೂಸ್

ಮನೆಕಳ್ಳತನ ಪ್ರಕರಣ ಬೇಧಿಸಿದ ತುಂಗನಗರ ಪೊಲೀಸರು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಮಲವಗೊಪ್ಪ ಗ್ರಾಮದಲ್ಲಿ ನಡೆದ ಮನೆಗಳ್ಳತನ ಪ್ರರಣವನ್ನ‌ ತುಂಗನಗರ ಪೊಲೀಸರು‌ ಬೇಧಿಸಿದ್ದಾರೆ. ನವೀನ್ ಕುಮಾರ್ ನಾಯ್ಕ್ ಎಂಬುವರ ಮನೆಯಲ್ಲಿದ್ದ 15,73,000/- ರೂ. ಮೌಲ್ಯದ 286 ಗ್ರಾಂ‌ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನ ಪೊಲೀಸರು ಪತ್ತೆಹಚ್ಚಿ‌ ಕಳುವಾದ ಚಿನ್ನಾಭರಣವನ್ನ‌ ವಶಪಡಿಸಿಕೊಂಡಿದ್ದಾರೆ.

ಮಲವಗೊಪ್ಪ ಗ್ರಾಮದ ವಾಸಿ ನವೀನ್ ಕುಮಾರ್ ನಾಯ್ಕ್ ರವರ ಮನೆಯಲ್ಲಿ ಅವರ ಅಕ್ಕ ಮತ್ತು ನಾದನಿಯವರ ಚಿನ್ನಾಭರಣವನ್ನ ಸುರಕ್ಷತೆ ದೃಷ್ಟಿಯಿಂದ ಮನೆಯಲ್ಲಿದ್ದರು. ಆದರೆ ನವೀನ್ ಅವರ ಎದುರು ಮನೆಯಲ್ಲಿದ್ದ ಯಶೋದಬಾಯಿ ಅವರ‌ ಚಿಕ್ಕಮ್ಮನ ಮಗ ಶಶಿನಾಯ್ಕ್ ಕಳೆದ‌ 5 ವರ್ಷದಿಂದ ಪರಿಚಯವಾಗಿದ್ದನು. ಫೆ.8 ರಂದು ನವೀನ್ ಮನೆಯ  ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳನ್ನು ಮತ್ತು ನಗದು ಹಣವನ್ನು ಕಳ್ಳತನವಾಗಿದ್ದು ಶಶಿನಾಯ್ಕ್ ವಿರುದ್ಧ ಅನುಮಾನ ವ್ಯಕ್ತಪಡಿಸಿ ನವೀನ್ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಿದ್ದರು.‌

ಪ್ರಕರಣದ ಆರೋಪಿತರು ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ,  ಕಾರಿಯಪ್ಪ ಎ.ಜಿ ಅವರ ಮಾರ್ಗದರ್ಶದಲ್ಲಿ ಡಿವೈಎಸ್ಪಿ ಬಾಬು ಆಂಜನಪ್ಪ, ಮೇಲ್ವಿಚಾರಣೆಯಲ್ಲಿ, ತುಂಗ ನಗರ ಪೊಲೀಸ್ ಠಾಣೆಯ ಪಿಐ ಮಂಜುನಾಥ್.ಬಿ,‌  ರವರ ನೇತೃತ್ವದಲ್ಲಿ ಪಿಎಸ್ ಐಗಳಾದ ಶಿವಪ್ರಸಾದ್ ವಿ.  ಮಂಜುನಾಥ್,  ರಘುವೀರ್ ಎಮ್ ಕುಮಾರ ಕೂರಗುಂದ,  ದೂದ್ಯಾನಾಯ್ಕ, ಎಎಸ್ಐ ಮನೋಹರ್ ಮತ್ತು ಸಿಬ್ಬಂದಿಗಳಾದ ಹೆಚ್ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್, ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಹರೀಶ್ ಎಮ್.ಜಿ, ರವರಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡವು ಪ್ರಕರಣದ ಆರೋಪಿ ಶಶಿನಾಯ್ಕ(27) ವರ್ಷ, ಚಿಕ್ಕಪಟ್ಟಣಗೆರೆ ಕಡೂರು ತಾಲ್ಲೂಕು, ಚಿಕ್ಕಮಗಳೂರು ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲು 15,73,000/- ರೂಗಳ ಒಟ್ಟು 286 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ರೂ 6020/- ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/8930

Related Articles

Leave a Reply

Your email address will not be published. Required fields are marked *

Back to top button