ಕ್ರೈಂ ನ್ಯೂಸ್

ಸಚಿವರ ನಕಲಿ ಫೇಸ್ ಬುಕ್ ಅಕೌಂಟ್ ಒಪನ್-ಸರ್ಕಾರದ ಗ್ಯಾರೆಂಟಿ ವಿರುದ್ಧವೇ ಪೋಸ್ಟ್-ಸಿಇಎನ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಸುದ್ದಿಲೈವ್/ಶಿವಮೊಗ್ಗ

ಮಧು ಬಂಗಾರಪ್ಪಾಜಿ ಮಾಜಿ ಶಿಕ್ಷಣ ಮತ್ತು ಸಾಕ್ಷರತೆ ಸಚಿವರು ಎಂಬ ನಕಲಿ ಫೇಸ್ ಬುಕ್ ಅಕೌಂಟ್ ನಿಂದ ಕಾಂಗ್ರೆಸ್ ನಾಯಕರನ್ನ ಅಪಮಾನಿಸುವುದು, ರಾಜ್ಯ ಸರ್ಕಾರದ ಗ್ಯಾರೆಂಟಿಗಳನ್ನ ಅವಹೇಳನ ಮಾಡುತ್ತಿರುವುದರ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೇಸ್ ಬುಕ್ ಅಕೌಂಟ್ ನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪಜಿ ಅವರ ನಕಲಿ ಅಕೌಂಟ್ ನಲ್ಲಿ 58 ಸಾವಿರ ಜನ ಸಬ್ ಸ್ಕ್ರೈಬರ್ ಗಳಿದ್ದು, ಅದರಲ್ಲಿ ಕುಂದಾಪುರ ವಿರಾಟ್ ಎಂಬಾತ ಸೋನಿಯಾ ಗಾಂಧಿ ಮತ್ತು ರಾಹುಲ್  ಗಾಂಧಿಯ ಫೋಟೋ ಹಾಕಿ 5000 ಕೋಟಿ ರೂ. ಹಣವನ್ನ ಒಂದೇ ಏಟಿಗೆ ಗುಳುಂ ಎಂದು ಉಲ್ಲೇಖಿಸಿ ಹರಿ ಬಿಟ್ಟಿದ್ದಾನೆ.

ಸಚಿವ ಮಧು ಬಂಗಾರಪ್ಪನವರೇ ಈ ಗ್ರೂಪ್ ನ್ನ ಕ್ರಿಯೆಟ್ ಮಾಡಿ ಅದರಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಅವಹೇಳನ ಮಾಡಿದಂತೆ ಪೋಸ್ಟ್ ಹಾಕುತ್ತಿರುವುದರ ಬಗ್ಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಚಾಲಕ ಮತ್ತು ಸಚಿವರ ಆಪ್ತ ಜಿ.ಡಿ.ಮಂಜುನಾಥ್ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರೆಂಟಿಗಳನ್ನ ಅಪಹಾಸ್ಯ ಮಾಡಿ ಪೋಸ್ಟ್ ಗಳನ್ನ ಹಾಕಿ ಸಚಿವರ ಘನತೆಗೆ ಧಕ್ಕೆ ಬರುವಂತೆ ಮಾಡುತ್ತಿರುವುದರ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ-https://suddilive.in/archives/3771

Related Articles

Leave a Reply

Your email address will not be published. Required fields are marked *

Back to top button