ಸ್ಥಳೀಯ ಸುದ್ದಿಗಳು
ವೇದಿಕೆ ಮತ್ತು ಎಜುಕೇರ್ ನಿಂದ ಕನ್ನಡ ರಾಜ್ಯೋತ್ಸವ

ಸುದ್ದಿಲೈವ್/ಶಿವಮೊಗ್ಗ

ನ.01 ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮತ್ತು ಎಜುಕೇರ್ ಶಾಲೆಯ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ಜಯನಗರ ಬಸವನಗುಡಿ ಮುಖ್ಯ ರಸ್ತೆಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡಾಂಬೆಯ ವಸ್ತ್ರಾಲಂಕಾರಿತರಾದಂತಹ ವಿದ್ಯಾರ್ಥಿನಿಯ ಕೈಯಲ್ಲಿ ಕನ್ನಡದ ಧ್ವಜವನ್ನು ಹಾರಿಸುವುದರ ಮೂಲಕ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರಾವೇ ಸ್ವಾಭಿಮಾನಿ ಬಣದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಅಧ್ಯಕ್ಷರು ಎಮ್ ರವಿಪ್ರಸಾದ್, ಜಿಲ್ಲಾಧ್ಯಕ್ಷರು ಮಧುಸೂಧನ್ ಎಸ್ ಎಂ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷರು ರಘುನಂದನ್ ,ನೂರುಲ್ಲಾ ,ಭರತ್, ಅಮೃತ್, ಶಿವಕುಮಾರ್ ,ರವಿ ಮೊದಲಾದ ಕರಾವೇ ಮುಖಂಡರುಗಳು ಉಪಸ್ಥಿತರಿದ್ದರು ಹಾಗೆ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು
